HOME » NEWS » National-international » HARDIK PATEL UNTRACEABLE SINCE ARREST ON JANUARY 18 CLAIMS WIFE

‘ಜ.18ರಿಂದ ನನ್ನ ಗಂಡ ಕಾಣೆಯಾಗಿದ್ದಾರೆ‘: ಹಾರ್ದಿಕ್​​ ಪಟೇಲ್​​ ಹೆಂಡತಿ ಅಳಲು

ಮೊದಲಿಗೆ ಸ್ಥಳೀಯ ಅಪರಾಧ ಶಾಖೆ ಸಲ್ಲಿಸಿದ ದೇಶದ್ರೋಹ ಪ್ರಕರಣದಲ್ಲಿ ಹಾರ್ದಿಕ್​​ ಪಟೀಲ್​​ ಬಂಧನವಾಗಿತ್ತು. ನಂತರ 2016ರ ಜುಲೈನಲ್ಲಿ ಕೋರ್ಟ್​ ಜಾಮೀನು ನೀಡಿತ್ತು. ಈ ಮಧ್ಯೆಯೇ 2019ರ ಲೋಕಸಭಾ ಚುನಾವಣೆಗೆ ಮುನ್ನ ಹಾರ್ದಿಕ್​​ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

news18-kannada
Updated:February 10, 2020, 10:19 PM IST
‘ಜ.18ರಿಂದ ನನ್ನ ಗಂಡ ಕಾಣೆಯಾಗಿದ್ದಾರೆ‘: ಹಾರ್ದಿಕ್​​ ಪಟೇಲ್​​ ಹೆಂಡತಿ ಅಳಲು
ಹಾರ್ದಿಕ್​ ಪಟೇಲ್​
  • Share this:
ನವದೆಹಲಿ(ಫೆ.10): 2015ರ ದೇಶದ್ರೋಹ ಪ್ರಕರಣದಲ್ಲಿ ಜ.18ನೇ ತಾರೀಕು ಪೊಲೀಸರಿಂದ ಬಂಧನಕ್ಕೀಡಾದ ಬಳಿಕ ಗುಜರಾತ್​​​​ ಪಾಟೀದಾರ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್​​​​ ಪಟೇಲ್ ಸುಳಿವೇ ಇಲ್ಲ ಎಂಬ ಸುದ್ದಿ ಕೇಳಿ ಬಂದಿದೆ. ಹೀಗೆಂದು ಖುದ್ದು ಕಾಂಗ್ರೆಸ್​ ಮುಖಂಡ ಹಾರ್ದಿಕ್​​ ಪಟೇಲ್​​​ ಹೆಂಡತಿ ಕಿಂಜನ್​​​ ತಮ್ಮ ಅಳಲು ತೋಡಿಕೊಂಡಿದ್ಧಾರೆ. ಪಾಟೀದಾರ್​​​ ಮೀಸಲಾತಿಗಾಗಿ ಹೋರಾಟ ಮಾಡಿದ್ದ ನನ್ನ ಗಂಡನನ್ನು ದೇಶದ್ರೋಹ ಪ್ರಕರಣ ಅಡಿಯಲ್ಲಿ ಬಂಧಿಸಲಾಯ್ತು. ಅಂದಿನಿಂದಲೂ ಅವರ ಸುಳಿವು ಸಿಕ್ಕಿಲ್ಲ, ಎಲ್ಲಿದಾರೆ? ಎಂದು ನಮಗೆ ಗೊತ್ತಿಲ್ಲ. ಪೊಲೀಸರು ಹಾರ್ದಿಕ್​​ನನ್ನು ಕೇಳಿಕೊಂಡು ಮನೆಗೆ ಬರುತ್ತಿರುತ್ತಾರೆ ಎಂದು ಪಾಟೀದಾರ್​​ ಮೀಸಲಾತಿ ಹೋರಾಟದ ನಾಯಕರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಿಂಜಲ್​​ ಹೀಗೆ ತನ್ನ ದುಃಖ ವ್ಯಕ್ತಪಡಿಸಿದರು.

ಈ ಹಿಂದೆಯೇ ದೇಶದ್ರೋಹ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್​​ರನ್ನು ಅಹಮದಾಬಾದ್‌ ಜಿಲ್ಲೆಯ ವೀರಂಗಾಂನಲ್ಲಿ ಪೊಲೀಸರು ಶನಿವಾರ ಬಂಧಿಸಿದ್ದರು. ಪಟೇಲ್ ಬಂಧನವನ್ನು ಡಿಸಿಪಿ ರಾಜ್‌ದೀಪ್ ಸಿಂಗ್ ಜಲಾ ಎಂಬುವರು ದೃಢಪಡಿಸಿದ್ದರು. ಅಹಮದಾಬಾದ್‌ನ ಸೆಷನ್ಸ್‌ ಕೋರ್ಟ್‌ ವಾರಂಟ್‌ ಜಾರಿ ಮಾಡಿದ ಬಳಿಕವೇ ಹಾರ್ದಿಕ್‌ರನ್ನು ಬಂಧಿಸಲಾಗಿತ್ತು.

ಆಗಸ್ಟ್ 25, 2015ರಂದು ಅಹಮದಾಬಾದ್​​ನಲ್ಲಿ ಪಾಟೀದರ್​​ ಸಮುದಾಯಕ್ಕೆ ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆದಿತ್ತು. ಇಲ್ಲಿ ಪಟೇಲ್ ಸಮುದಾಯ ಆಯೋಜಿಸಿದ್ದ ರ‍್ಯಾಲಿಯೂ ಹಿಂಸಾಚಾರಕ್ಕೆ ಕಾರಣವಾಗಿತ್ತು. ಈ ಘಟನೆ ಸಂಬಂಧ ಹಾರ್ದಿಕ್​​ ಪಟೇಲ್​​ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: ವಿಸಾನಗರ ಗಲಭೆ ಪ್ರಕರಣ: ಪಾಟೀದಾರ್​ ಮೀಸಲಾತಿ ಹೋರಾಟಗಾರ ಹಾರ್ದಿಕ್​ಗೆ 2 ವರ್ಷ ಜೈಲು

ಮೊದಲಿಗೆ ಸ್ಥಳೀಯ ಅಪರಾಧ ಶಾಖೆ ಸಲ್ಲಿಸಿದ ದೇಶದ್ರೋಹ ಪ್ರಕರಣದಲ್ಲಿ ಹಾರ್ದಿಕ್​​ ಪಟೀಲ್​​ ಬಂಧನವಾಗಿತ್ತು. ನಂತರ 2016ರ ಜುಲೈನಲ್ಲಿ ಕೋರ್ಟ್​ ಜಾಮೀನು ನೀಡಿತ್ತು. ಈ ಮಧ್ಯೆಯೇ 2019ರ ಲೋಕಸಭಾ ಚುನಾವಣೆಗೆ ಮುನ್ನ ಹಾರ್ದಿಕ್​​ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
Youtube Video
First published: February 10, 2020, 10:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories