ತೀವ್ರಗೊಂಡ ಪಾಟೀದಾರ್​ ಮೀಸಲಾತಿ ಹೋರಾಟ: ಹಾರ್ದಿಕ್​​ ಅನಾರೋಗ್ಯ ಆಸ್ಪತ್ರೆಗೆ ದಾಖಲು


Updated:September 7, 2018, 6:43 PM IST
ತೀವ್ರಗೊಂಡ ಪಾಟೀದಾರ್​ ಮೀಸಲಾತಿ ಹೋರಾಟ: ಹಾರ್ದಿಕ್​​ ಅನಾರೋಗ್ಯ ಆಸ್ಪತ್ರೆಗೆ ದಾಖಲು

Updated: September 7, 2018, 6:43 PM IST
ನ್ಯೂಸ್​-18 ಕನ್ನಡ

ನವದೆಹಲಿ(ಸೆಪ್ಟೆಂಬರ್​​.07): ಪಾಟೀದಾರ್​​ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಯುವ ಹೋರಾಟಗಾರ ಹಾರ್ದಿಕ್​​ ಪಾಟೀಲ್​​ ನಡೆಸುತ್ತಿರುವ ಉವಾಸ ಸತ್ಯಾಗ್ರಹ 14ನೇ ದಿನಕ್ಕೆ ಕಾಲಿಟ್ಟಿದೆ. ಹಾರ್ದಿಕ್​​ ಆರೋಗ್ಯದಲ್ಲಿ ಭಾರೀ ಏರುಪೇರು ಕಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಹಮದಾಬಾದ್​​ನ ಸೋಲಾ ಸಿವಿಲ್​ ಎಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

25 ವರ್ಷ ವಯಸ್ಸಿನ ಹಾರ್ದಿಕ್​​ ಪಾಟೀಲ್​​ ಉಪವಾಸ ಸತ್ಯಾಗ್ರಹದಲ್ಲಿ 20ಕ್ಕೂ ಹೆಚ್ಚು ತೂಕ ಇಳಿಸಿಕೊಂಡು, ದೇಹದ ಅಂಗಾಗಗಳ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಬಳಿಕ ತನ್ನ ಬೇಡಿಕೆಗಳನ್ನು 24 ಗಂಟೆಗಳಲ್ಲಿ ಈಡೇರಿಸುವಂತೆ ಆಗ್ರಹಿಸಿ ಕಳೆದ ಒಂದು ದಿನದಿಂದ ಕನಿಷ್ಠ ಒಂದು ತೊಟ್ಟು ನೀರು ಕುಡಿದಿಲ್ಲ ಎನ್ನಲಾಗಿದೆ.

ಪಾಟೀದಾರ್​ ಮೀಸಲಾತಿ ಹೋರಾಟ ಸಮಿತಿಯಿಂದ ಆಗಸ್ಟ್​.25ಕ್ಕೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿತ್ತು. ಸಮುದಾಯದ ಹೋರಾಟಗಾರ ಹಾರ್ದಿಕ್​​ ಉಪವಾಸ ಕೈಗೊಂಡಿದ್ದು, ರೈತರ ಸಾಲಮನ್ನಾ, ಮೀಸಲಾತಿ, ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಯ್ತು.

ಆದರೆ, ಸದ್ಯ ಹಾರ್ದಿಕ್​​ ಆರೋಗ್ಯ ಕ್ಷೀಣಿಸುತ್ತಿದೆ. ಕೂಡಲೇ ಎಚ್ಚೆತ್ತ ಸಮುದಾಯ ಮುಖಂಡರು ಆಸ್ಪತ್ರೆಗೆ ಕೊಂಡೊಯ್ಯಲು ಸಿದ್ದತೆ ನಡೆಸಿಕೊಂಡಿದ್ದಾರೆ. ಸಹಚರರ ಕಳವಳ ಕಂಡ ಹಾರ್ದಿಕ್​​ ಆಸ್ಪತ್ರೆಗೆ ದಾಖಲಾಗಿಲು ಒಪ್ಪಿಕೊಂಡರು ಎಂದು ಪಾಟೀದಾರ್​ ಮೀಸಲಾತಿ ಹೋರಾಟ ಸಮಿತಿಯ ಸದಸ್ಯ ಮನೋಜ್​ ಪನಾರ ತಿಳಿಸಿದ್ದಾರೆ.

ಹಾರ್ದಿಕ್ ಪಟೇಲ್​ ಆರೋಗ್ಯಸ್ಥಿತಿಯ ಬಗ್ಗೆ ರಾಜಕೀಯ ಮುಖಂಡರು ಮಾಹಿತಿ ಪಡೆಯುತ್ತಿದ್ಧಾರೆ. ಅಲ್ಲದೇ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಹೋರಾಟ ಮುಂದುವರೆಯಲಿದೆ ಎಂದು ಪಾಸ್​ ವಕ್ತಾರರು ತಿಳಿಸಿದ್ಧಾರೆ. ಆತ ಮಾತನಾಡಲಾಗದೆ ದೇಹದ ಪ್ರಮುಖ ಅಂಗಾಂಗಗಳ ಸಾಮರ್ಥ್ಯ ಕಳೆದುಕೊಂಡಿದ್ಧಾರೆ ಎನ್ನುತ್ತಿವೆ ಮೂಲಗಳು.
Loading...


ಕೇಂದ್ರ ಸರ್ಕಾರ ಆದಷ್ಟು ಬೇಗ ತಮ್ಮ ಬೇಡಿಕೆಗೆ ಸ್ಪಂದಿಸಲಿ. ಉಪವಾಸದಿಂದ ಆರೋಗ್ಯಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಹೀಗಾಗಿ, ವಿಲ್​ ಬರೆದಿರುವ ಹಾರ್ದಿಕ್​ ಪಟೇಲ್, ಒಂದು ವೇಳೆ ನಾನು ಸತ್ತರೆ ನನ್ನ ಕಣ್ಣುಗಳನ್ನು ಕುರುಡರಿಗೆ ದಾನ ಮಾಡಿ. ನನ್ನ ಆಕ್ಸಿಸ್​ ಬ್ಯಾಂಕ್ ಖಾತೆಯಲ್ಲಿ 50 ಸಾವಿರ ರೂ.ಗಳಿದ್ದು, ಈ ಪೈಕಿ 30 ಸಾವಿರ ರೂಗಳನ್ನು ನನ್ನ ಕುಟುಂಬಕ್ಕೆ ನೀಡಿ ಎಂದಿದ್ಧಾರೆ.

ಇನ್ನು ಪಾಟೀದಾರ್​ ಸಮುದಾಯದ ಹೋರಾಟಕ್ಕೆ ಆರ್​ಜೆಡಿ, ತೃಣಮೂಲ ಕಾಂಗ್ರೆಸ್​, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಬೆಂಬಲಕ್ಕೆ ನಿಂತಿವೆ. ಸರ್ಕಾರ ಬೇಡಿಕೆಗಳನ್ನು ಈಡೇರಿಸುವವರೆಗೂ ತಮ್ಮ ಹೋರಾಟವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಹಾರ್ದಿಕ್​ ಪಾಟೀಲ್​ ಆರೋಗ್ಯದಲ್ಲಿ ಸುಧಾರಣೆ ಕಂಡ ಕೂಡಲೇ ಹೋರಾಟ ಮತ್ತೆ ತೀವ್ರಗೊಳ್ಳಲಿದೆ ಎನ್ನಲಾಗಿದೆ.  ​
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626