ಕುತೂಹಲ ಮೂಡಿಸಿದ ತೇಜಸ್ವಿ ಯಾದವ್​, ಹಾರ್ದಿಕ್​ ಪಟೇಲ್​ ಭೇಟಿ

news18
Updated:July 1, 2018, 10:34 AM IST
ಕುತೂಹಲ ಮೂಡಿಸಿದ ತೇಜಸ್ವಿ ಯಾದವ್​, ಹಾರ್ದಿಕ್​ ಪಟೇಲ್​ ಭೇಟಿ
  • Share this:
ನ್ಯೂಸ್​ 18 ಕನ್ನಡ

ಪಟ್ನಾ(ಜು .1) : ಲೋಕಸಭಾ ಚುನಾವಣೆ ಎದುರಿಸಲು ತೃತೀಯ ರಂಗಗಳು ಒಗ್ಗಟ್ಟಾಗಿರುವ ಬೆನ್ನಲ್ಲೇ ಈಗ ಗುಜರಾತ್​ ಪಾಟೇಲ್​ ಸಮುದಾಯದ ನಾಯಕನಾಗಿರುವ ಹಾರ್ದಿಕ್​ ಪಟೇಲ್​ ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಭೇಟಿಯಾಗಿದ್ದು, ರಾಜಕೀಯ ಚರ್ಚೆ ನಡೆಸಿರುವುದು ಗಮನಸೆಳೆದಿದೆ.

ಇಲ್ಲಿ ನಡೆದ ಪಟೇಲ್​ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಲು ಹಾರ್ದಿಕ್​ ಬಂದಿದ್ದು, ಬಳಿಕ ಇಬ್ಬರು ಯುವ ನಾಯಕರಯ ಒಂದೂವರೆಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ರಾಜಕೀಯ ಸೇರಿದಂತೆ  ಒಬಿಸಿಯಲ್ಲಿನ ಮೀಸಲಾತಿ ಹಾಗೂ ಬಿಜೆಪಿ ವಿರೋಧಿ ಯೋಜನೆ ರೂಪಿಸುವುದರ ಬಗ್ಗೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಜೊತೆ ಪಾಟೀಲ್​ ಸಮುದಾಯದ ಮುಖಂಡ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

 ಈ ಹಿಂದೆ ಪಾಟೀಲ್​ ಸಮುದಾಯಕ್ಕೆ ಮೀಸಲಾತಿ ವಿಸ್ತರಿಸಿದ್ದ ಕಾರಣಕ್ಕೆ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರನ್ನು ಶ್ಲಾಘಿಸಿದ್ದ ಹಾರ್ದಿಕ್​, ಈಗ ಜೆಡಿಯು ಬಿಜೆಪಿ ಜೊತೆ ಕೈ ಜೋಡಿಸಿದ್ದಕ್ಕೆ ವಿರೋಧಿಸಿದ್ದು, ಅವರನ್ನು ಭೇಟಿಯಾಗಲಿಲ್ಲ.

ಇನ್ನು ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಚಿಕಿತ್ಸೆಗೆಂದು ಮುಂಬೈಗೆ ತೆರಳಿದ ಹಿನ್ನಲೆ ಅವರ ಭೇಟಿ ಸಾಧ್ಯವಾಗಿಲ್ಲ.

ಪಟೇಲರ ಮೀಸಲಾತಿಗಾಗಿ ಎರಡು ವರ್ಷಗಳ ಹಿಂದೆ ಹೋರಾಡಿದ ಹಾರ್ದಿಕ್​​ ಸಮುದಾಯದ ನಾಯಕನಾಗಿ ಗುರುತಿಸಿಕೊಂಡಿದ್ದರು. ಅಲ್ಲದೇ ಬಿಜೆಪಿ ವಿರುದ್ದ ಗುಡುಗಿದ್ದ ಅವರು 2017ರಲ್ಲಿ ನಡೆದ ಗುಜರಾತ್​ ಚುನಾವಣೆ ವೇಳೆಯಲ್ಲಿ ಸ್ಪರ್ಧಿಸಿದ್ದ ಹಾರ್ದಿಕ್​ಗೆ ಕಾಂಗ್ರೆಸ್​ ಬೆಂಬಲನೀಡಿತ್ತು. ಆದರೆ ಬಿಜೆಪಿಯ ಎದುರು ಹಾರ್ದಿಕ್​ ಸೋಲನ್ನು ಅನುಭವಿಸಿದ್ದರು.
First published:July 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ