ಒಬ್ಬ ಚಾಯ್​ವಾಲಾ ಮಾತ್ರ ನಿರುದ್ಯೋಗಿಗಳಿಗೆ ಪಕೋಡ ಮಾರಿ ಎಂದು ಸಲಹೆ ನೀಡಬಲ್ಲ: ಮೋದಿ ವಿರುದ್ಧ ಹಾರ್ದಿಕ್ ಪಟೇಲ್ ವಾಗ್ದಾಳಿ


Updated:January 22, 2018, 10:02 PM IST
ಒಬ್ಬ ಚಾಯ್​ವಾಲಾ ಮಾತ್ರ ನಿರುದ್ಯೋಗಿಗಳಿಗೆ ಪಕೋಡ ಮಾರಿ ಎಂದು ಸಲಹೆ ನೀಡಬಲ್ಲ: ಮೋದಿ ವಿರುದ್ಧ ಹಾರ್ದಿಕ್ ಪಟೇಲ್ ವಾಗ್ದಾಳಿ
  • Share this:
 ನವದೆಹಲಿ(ಜ.22): ಒಬ್ಬ ಚಾಯ್ ವಾಲಾ ಮಾತ್ರ ನಿರುದ್ಯೋಗಿ ಉದ್ಯೋಗಿಗಳಿಗೆ ಪಕೋಡ ಮಾರಿ ಎಂದು ಸಲಹೆ ನೀಡಬಲ್ಲ ಎಂದು ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನ ಗುಜರಾತ್​ನ ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ಟೀಕಿಸಿದ್ದಾರೆ.

ಶನಿವಾರ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಉದ್ಯೋಗ ಸೃಷ್ಟಿ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ನರೇಂದ್ರ ಮೋದಿ, ಒಬ್ಬ ನಿರುದ್ಯೋಗಿ ನಿಮ್ಮ ಕಚೇರಿ ಮುಂದೆ ಪಕೋಡಾ ಮಾರಿದರೆ ಸಾಕು ಸಂಜೆ ಮನೆಗೆ 200 ರೂ. ತೆಗೆದುಕೊಂಡು ಹೋಗಬಹುದು. ಅದೂ ಉದ್ಯೋಗವಲ್ಲವೇ..? ಎಂದು ಹೇಳಿದ್ದರು.

ನರೇಂದ್ರಮೋದಿಯವರ ಈ ಹೇಳಿಕೆ ಕುರಿತಂತೆ ಟ್ವಿಟ್ಟರ್​ನಲ್ಲಿ ಟೀಕೆಗೈದಿರುವ ಹಾರ್ದಿಕ್ ಪಟೇಲ್, `ಒಬ್ಬ ಚಾಯ್ ವಾಲಾ ಮಾತ್ರ, ರಸ್ತೆ ಬದಿ ಗಾಡಿಯಲ್ಲಿ ಪಕೋಡಾ ಮಾರಿ ಎಂದು ನಿರುದ್ಯೋಗಿಗಳಿಗೆ ಸಲಹೆ ನೀಡಬಲ್ಲ. ಒಬ್ಬ ಆರ್ಥಿಕ ತಜ್ಱ ಈ ರೀತಿಯ ಸಲಹೆಗಳನ್ನ ನೀಡುವುದಿಲ್ಲ’ ಎಂದು ಪೋಸ್ಟ್ ಹಾಕಿದ್ದಾರೆ.

बेरोज़गार युवा को पकौडे का ठेला लगाने का सुझाव एक चायवाला ही दे सकता है, अर्थशास्त्री एसा सुझाव नहीं देता !!!!

ನರೇಂದ್ರಮೋದಿ ಬಾಲ್ಯದಲ್ಲಿ ಚಹಾ ಮಾರುತ್ತಿದ್ದರು ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ. 2014ರ ಲೋಕಸಭಾ ಚುನಾವಣೆಯಿಂದಲೂ ಮೋದಿಯವರನ್ನ ಚಾಯ್ ವಾಲಾ ಎಂದು ಉಲ್ಲೇಖಿಸಿ, ರಾಜಕೀಯ ಮುಖಂಡರು ಟೀಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಗಿದ ಗುಜರಾತ್ ಚುನಾವಣೆ ಸಂದರ್ಭವೂ ಕಾಂಗ್ರೆಸ್​ನ ಯೂತ್ ಮ್ಯಾಗಜಿನ್ `ಯುವ ದೇಶ್​’ನಲ್ಲಿ ನರೇಂದ್ರಮೋದಿ ಇಂಗ್ಲೀಷ್ ಜ್ಞಾನದ ಬಗ್ಗೆ ಟೀಕೆ ಮಾಡಲಾಗಿತ್ತು. ಟೀ ಮಾರುವುದನ್ನ ಮೋದಿ ಸ್ವತಃ ನಿರ್ಬಂಧಿಸಿಕೊಳ್ಳಬೇಕು ಎಂದು ವ್ಯಂಗ್ಯ ಮಾಡಲಾಗಿತ್ತು.

 
First published:January 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ