HOME » NEWS » National-international » HARDIK PATEL GETS TWO YEAR JAIL TERM IN VISNAGAR RIOTING CASE

ವಿಸಾನಗರ ಗಲಭೆ ಪ್ರಕರಣ: ಪಾಟೀದಾರ್​ ಮೀಸಲಾತಿ ಹೋರಾಟಗಾರ ಹಾರ್ದಿಕ್​ಗೆ 2 ವರ್ಷ ಜೈಲು


Updated:July 25, 2018, 3:24 PM IST
ವಿಸಾನಗರ ಗಲಭೆ ಪ್ರಕರಣ: ಪಾಟೀದಾರ್​ ಮೀಸಲಾತಿ ಹೋರಾಟಗಾರ ಹಾರ್ದಿಕ್​ಗೆ 2 ವರ್ಷ ಜೈಲು
  • Share this:
ನ್ಯೂಸ್​-18 ಕನ್ನಡನವದೆಹಲಿ(ಜುಲೈ.25): ಗುಜರಾತ್​ ಪಾಟೀದಾರ್​ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್​ ಪಾಟೀಲ್​ಗೆ ಗಲಭೆ ಪ್ರಕರಣವೊಂದರಲ್ಲಿ 2 ವರ್ಷ ಜೈಲು ಶಿಕ್ಷೆಯಾಗಿದೆ. ಮೀಸಲಾತಿಗಾಗಿ ಆಗ್ರಹಿಸಿ 2015 ರಲ್ಲಿ ಪಾಟೀದಾರ್​ ಸಮುದಾಯ ಹೋರಾಟ ನಡೆಸುತ್ತಿತ್ತು. ಈ ವೇಳೆ ನಡೆದ ಗಲಭೆಯಲ್ಲಿ ಹಾರ್ದಿಕ್​ ಪಾಟೀಲ್​ ಅವರು ಅಪರಾಧಿ ಎಂದು ಕೋರ್ಟ್​ ತೀರ್ಪು ನೀಡಿದೆ.


ಪಾಟೀದಾರ್‌ ಮೀಸಲಾತಿ ಆಂದೋಲನ ವೇಳೆ ವಿಸಾನಗರ ಬಳಿಯ ಬಿಜೆಪಿ ಶಾಸಕನೋರ್ವನ ಕಚೇರಿ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ಶಾಸಕ ಕೋರ್ಟ್ ಮೊರೆ ಹೋಗಿ ಹಾರ್ದಿಕ್​ ಮತ್ತು ಪ್ರತಿಭಟನಕಾರರ ವಿರುದ್ಧ ಪ್ರಕರಣ ದಾಖಲಾಗಿತ್ತು.


ಗುಜರಾತ್‌ ವಿಸಾನಗರ ಕೋರ್ಟ್‌‌ ಈ ಪ್ರಕರಣ ವಿಚಾರಣೆ ಪೂರ್ಣಗೊಳಿಸಿದ್ದು, ಇಂದು  ತನ್ನ ತೀರ್ಪು ನೀಡಿದೆ. ಈ ವೇಳೆ ಹಾರ್ದಿಕ್ ಪಟೇಲ್ ಸೇರಿದಂತೆ ಹಲವರು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ನೀಡಿದೆ.

ಅಪರಾಧಿಗಳಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ಜತೆಗೆ 50,000 ರೂ.ಗಳ ದಂಡವನ್ನೂ ವಿಧಿಸಲಾಗಿದೆ. ಹಾರ್ದಿಕ್‌ ಮಾತ್ರವಲ್ಲದೇ ಆತನ ಸ್ನೇಹಿತರು ಸಹ ತಪ್ಪಿತಸ್ಥರೆಂದು ಕೋರ್ಟ್ ಹೇಳಿದೆ.  ಅವರಿಗೂ ಎರಡು ವರ್ಷಗಳ ಶಿಕ್ಷೆ ಹಾಗು 50,000ರು ದಂಡ ವಿಧಿಸಲಾಗಿದೆ.
First published: July 25, 2018, 3:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories