ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಹಾರ್ದಿಕ್​ ಪಟೇಲ್​; ಮನೆಯಿಂದಲೇ ಉಪವಾಸ ಮುಂದುವರಿಕೆ

news18
Updated:September 10, 2018, 1:23 PM IST
ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಹಾರ್ದಿಕ್​ ಪಟೇಲ್​; ಮನೆಯಿಂದಲೇ ಉಪವಾಸ ಮುಂದುವರಿಕೆ
  • News18
  • Last Updated: September 10, 2018, 1:23 PM IST
  • Share this:
-ನ್ಯೂಸ್​ 18 ಕನ್ನಡ

ಅಹಮದಾಬಾದ್​,(ಸೆ.10): ಕಳೆದ 15 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟೀದಾರ್​ ಅದಾಲತ್​ ಆಂದೋಲನ ಸಮಿತಿ(ಪಾಸ್​) ನಾಯಕ ಹಾರ್ದಿಕ್​ ಪಟೇಲ್​ರನ್ನು ಭಾನುವಾರ ಅಹಮದಾಬಾದ್​ನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ 25 ವರ್ಷದ ಹಾರ್ದಿಕ್​ ಪಟೇಲ್​​, ಪಟೇಲ್ ಸಮುದಾಯದ ಮೀಸಲಾತಿ, ರೈತರ ಸಾಲಮನ್ನಾ, ದೇಶದ್ರೋಹ ಆರೋಪದ ಮೇಲೆ ಜೈಲಿನಲ್ಲಿರುವ ಅಲ್ಪೇಶ್​ ಕಠಾರಿಯಾ ಬಿಡುಗಡೆಗಾಗಿ ಒತ್ತಾಯಿಸಿ ಮತ್ತೆ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ.

ಸತತ ಉಪವಾಸದಿಂದ ಅವರ ಆರೋಗ್ಯ ತೀವ್ರ ಹದಗೆಟ್ಟು ಸೆ. 7 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 20 ಕೆ.ಜಿ ತೂಕ ಕಳೆದುಕೊಂಡು ನಿಶ್ಯಕ್ತರಾಗಿದ್ದರು. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವೂ ಕಡಿಮೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದರು. ಆಸ್ಪತ್ರೆಯಲ್ಲಿದ್ದರೂ ಸಹ ಹಾರ್ದಿಕ್​ ತಮ್ಮ ಉಪವಾಸವನ್ನು ಮುಂದುವರೆಸಿದ್ದರು. ಉಪವಾಸದ ಅವಧಿಯಲ್ಲಿ ಅಕಸ್ಮಾತ್​​ ತಾನು ಸತ್ತರೆ ಏನು ಮಾಡಬೇಕು ಎಂದು ವಿಲ್​ ಬರೆದಿಟ್ಟಿದ್ದಾರೆ. ಆಗಸ್ಟ್ 25 ರಿಂದ ಹಾರ್ದಿಕ್​ ಪಟೇಲ್ ಅನಿರ್ದಿಷ್ಟಾವಧಿ​ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಹಾರ್ದಿಕ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವ ಮುನ್ನ, ತನ್ನ ಮನೆಯಿಂದಲೇ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಫೇಸ್​ಬುಕ್​ ಲೈವ್​ ಮೆಸೇಜ್​ ಮೂಲಕ ತನ್ನ ಬೆಂಬಲಿಗರಿಗೆ ತಿಳಿಸಿದ್ದರು.
First published: September 10, 2018, 1:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading