ವಿಜಯ್​ ರೂಪಾನಿ ರಾಜೀನಾಮೆ ಕೊಟ್ಟಿದ್ದಾರೆ: ಹಾರ್ದಿಕ್ ಹೇಳಿಕೆಗೆ ಗುಜರಾತ್ ಸಿಎಂ ಕಿಡಿ

Ganesh
Updated:June 15, 2018, 9:14 PM IST
ವಿಜಯ್​ ರೂಪಾನಿ ರಾಜೀನಾಮೆ ಕೊಟ್ಟಿದ್ದಾರೆ: ಹಾರ್ದಿಕ್ ಹೇಳಿಕೆಗೆ ಗುಜರಾತ್ ಸಿಎಂ ಕಿಡಿ
ಗುಜರಾತ್​ನ ಪಾಟೀದಾರ್ ಮುಖಂಡ ಹಾರ್ದಿಕ್ ಪಟೇಲ್
  • Share this:
-ನ್ಯೂಸ್​-18 ಕನ್ನಡ

ನವದೆಹಲಿ(ಜೂನ್​.15) ಪಾಟೀದಾರ್​ ಸಮುದಾಯದ ಯುವ ನಾಯಕ, ಸದ್ಯ ದೇಶದಲ್ಲಿ ಸುದ್ದಿಯಲ್ಲಿರುವ ಹಾರ್ದಿಕ್ ಪಟೇಲ್​​ ಸ್ಪೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಆನಂದಿ ಬೆನ್ ರೀತಿಯೇ ವಿಜಯ್ ರೂಪಾನಿ ಅವರಿಗೂ ರಾಜೀನಾಮೆ ಕೊಡುವಂತೆ ಸಚಿವ ಸಂಪುಟ ಸಭೆಯಲ್ಲಿ ಒತ್ತಾಯ ಕೇಳಿಬಂದಿದ್ದು, 10 ದಿನಗಳಲ್ಲಿ ರಾಜೀನಾಮೆ ಅಂಗೀಕಾರಗೊಳ್ಳಲಿದೆ ಎಂದು ಹಾರ್ದಿಕ್ ಪಟೇಲ್ ಹೊಸ ಬಾಂಬ್ ಸಿಡಿಸಿದ್ಧಾರೆ.

ಪಾಟೀದಾರ್​​ ಸಮುದಾಯಕ್ಕೆ ಮೀಸಲಾತಿಗಾಗಿ ಹೋರಾಟದ ನೇತೃತ್ವ ವಹಿಸಿರುವ ಹಾರ್ದಿಕ್ ಪಟೇಲ್​ ಈ ರೀತಿ ಹೇಳಿಕೆ ನೀಡಿದ್ದು, ಭಾರೀ ಕುತೂಹಲ ಕೆರಳಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಹಾರ್ದಿಕ್​, ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ವಿಜಯ್​ ರೂಪಾನಿ ರಾಜೀನಾಮೆಗೆ ಪಟ್ಟು ಹಿಡಿಯಲಾಗಿದೆ ಎಂದಿದ್ದಾರೆ.

ವಿಜಯ್​ ರೂಪಾನಿ ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ನಮ್ಮ ಪಾಟಿದಾರ್​ ಸಮುದಾಯದವರು ಸಿಎಂ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ದೇಶದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಅಲ್ಲದೇ ವಿಜಯ್​ ರೂಪಾನಿ ರಾಜಿನಾಮೆ ನೀಡಿದ, ಬಳಿಕ ಪಾಟಿದಾರ್​ ಸಮುದಾಯದ ಯಾವ ರಾಜಕೀಯ ಮುಖಂಡರಿಗೆ ಸಿಎಂ ಸ್ಥಾನ ಒಲಿಯಲಿದೆ ಎಂದು ಚರ್ಚೆ ನಡೆಯುತ್ತಿದೆ.

ಈ ಮಧ್ಯೆ, ಹಾರ್ದಿಕ್ ಪಟೇಲ್ ಹೇಳಿಕೆ ಬಗ್ಗೆ ಕಿಡಿ ಕಾರಿರುವ ಸಿಎಂ ವಿಜಯ್ ರೂಪಾನಿ, ಮಾಧ್ಯಮಗಳ ಗಮನ ಸೆಳೆಯಲು ಹಾರ್ದಿಕ್ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ನಾನು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ, ಪಾಟೀದಾರ್​ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಸಮುದಾಯ ಬೀದಿಗಿಳಿದಿತ್ತು. ಈ ಹೋರಾಟಕ್ಕೆ ಮತ್ತು ಸಮುದಾಯದ ಮನವಿಯನ್ನು ಬಿಜೆಪಿ ತಿರಸ್ಕರಿಸಿದೆ ಎಂದು ಹಾರ್ದಿಕ್​ ಪಟೇಲ್ ಕಿಡಿಕಾರಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್ ಬೆಂಬಲಿಸಿ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದರು.

  
First published:June 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ