ನವದೆಹಲಿ: ಏರ್ ಇಂಡಿಯಾದಲ್ಲಿ ಸಂಪೂರ್ಣವಾಗಿ ಹೂಡಿಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ಪ್ರಕಟಿಸಿದ್ದಾರೆ. ಏರ್ ಇಂಡಿಯಾದಲ್ಲಿ ಹೂಡಿಕೆ ಮಾಡುವುದು ಅಥವಾ ವಿಮಾನಯಾನ ಕಂಪನಿಯನ್ನು ಮುಚ್ಚುವುದು ಇವೆರಡು ಆಯ್ಕೆಗಳು ಮಾತ್ರವೇ ಇದೆ ಎಂದು ಹೇಳಿದರು.
"ಏರ್ ಇಂಡಿಯಾದಲ್ಲಿ ಶೇ. 100 ಹೂಡಿಕೆ ಮಾಡಲು ಎಂದು ನಾವು ನಿರ್ಧರಿಸಿದ್ದೇವೆ. ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಹೂಡಿಕೆ ಮಾಡುವುದು ಮತ್ತು ಮಾಡದಿರುವುದು ಈ ಎರಡೇ ಆಯ್ಕೆಗಳಿರುವುದ. ಇದು ಹೂಡಿಕೆ ಮತ್ತು ಮುಚ್ಚುವಿಕೆಯ ನಡುವೆ ಇದೆ. ಏರ್ ಇಂಡಿಯಾದ ಒಟ್ಟು ಸಾಲ 60,000 ಕೋಟಿ ರೂ. ಇದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದರು.
ಏರ್ ಇಂಡಿಯಾ ಹೂಡಿಕೆಗಾಗಿ ಸರ್ಕಾರವು ಹೊಸ ಸಮಯವನ್ನು ನೋಡುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಹಣಕಾಸಿನ ಹರಾಜು ಪ್ರಕ್ರಿಯೆಗೆ ಖಾಸಗಿ ಕಂಪನಿಗಳನ್ನು ಆಹ್ವಾನಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
"ಕಳೆದ ಸಭೆಯಲ್ಲಿ ಹರಾಜುದಾರರ ಶಾರ್ಟ್‌ಲಿಸ್ಟ್ ಮಾಡಲಾಗಿದೆ. (ಏರ್ ಇಂಡಿಯಾ ಹೂಡಿಕೆಗಾಗಿ) 64 ದಿನಗಳಲ್ಲಿ ಹರಾಜುದಾರರು ಬರಬೇಕು ಎಂದು ತಿಳಿಸಲಾಗಿದೆ. ಈ ಬಾರಿ ಸರ್ಕಾರ ನಿರ್ಧರಿಸಿದೆ ಮತ್ತು ಈ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲ" ಎಂದು ಅವರು ಹೇಳಿದರು . ಹೂಡಿಕೆ ಪ್ರಕ್ರಿಯೆಯು ಮೇ ಅಥವಾ ಜೂನ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
2007 ರಲ್ಲಿ ಇಂಡಿಯನ್ ಏರ್‌ಲೈನ್ಸ್‌ನೊಂದಿಗೆ ವಿಲೀನಗೊಂಡಾಗಿನಿಂದ ನಷ್ಟದಲ್ಲಿದ್ದ ಏರ್ ಇಂಡಿಯಾದಲ್ಲಿ ತನ್ನ ಶೇ. 100 ರಷ್ಟು ಪಾಲನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ. ಇಲ್ಲಿ ಯಾವುದೇ ಆಯ್ಕೆ ಇಲ್ಲ, ನಾವು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುತ್ತೇವೆ. ಇಲ್ಲವೇ ನಾವು ವಿಮಾನಯಾನ ಸಂಸ್ಥೆಯನ್ನು ಮುಚ್ಚುತ್ತೇವೆ. ಏರ್ ಇಂಡಿಯಾ ಈಗ ಹಣ ಸಂಪಾದಿಸುತ್ತಿದ್ದರೂ ನಾವು ಪ್ರತಿದಿನ 20 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದೇವೆ. ಅಸರ್ಪಕ ನಿರ್ವಹಣೆಯೇ ಈ ನಷ್ಟಕ್ಕೆ ಕಾರಣವಾಗಿದೆ. ಇದರಿಂದಾಗಿ ಏರ್ ಇಂಡಿಯಾ ಸಂಸ್ಥೆ ಇಂದು ಒಟ್ಟು 60,000 ಕೋಟಿ ರೂ.ಗಳ ಸಾಲದ ಸುಳಿಗೆ ಸಿಲುಕಿದೆ,”ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಇದನ್ನು ಓದಿ: ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕಾನೂನಿಗಿಂತ ನೈತಿಕತೆಯ ಪ್ರಶ್ನೆಯಿದೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
"ನಿರ್ಮಲಾ ಜಿ ನನಗೆ ಮುಂದುವರಿಯುವ ಸಾಮರ್ಥ್ಯ ಇಲ್ಲ. ದಯವಿಟ್ಟು ನನಗೆ ಸ್ವಲ್ಪ ಹಣವನ್ನು ನೀಡಿ ಎಂದು ಹೇಳಿ" ಎಂದು ಅವರು ಹಣಕಾಸು ಮಂತ್ರಿಯಿಂದ ಏರ್ ಇಂಡಿಯಾವನ್ನು ನಡೆಸಲು ಹಣವನ್ನು ಕೋರಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದರು. ಇದಕ್ಕೂ ಮುನ್ನ ಏರ್ ಇಂಡಿಯಾ ಖಾಸಗೀಕರಣದ ಹಿಂದಿನ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಏಕೆಂದರೆ ಪ್ರಯತ್ನಗಳು ಅರೆಮನಸ್ಸಿನಿಂದ ಕೂಡಿದ್ದವು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ