Har Ghar Tiranga: ಕಾಶ್ಮೀರದಲ್ಲಿ ಲಷ್ಕರ್ ಉಗ್ರನ ಮನೆಯಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ, ಖುಬೈಬ್ ತಂದೆ ಹೇಳಿದ್ದೇನು?

ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಖುಬೈಬ್ ಭಟ್​ನ ದೋಡಾ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಾಡಿದೆ. ತ್ರಿವರ್ಣ ಧ್ವಜ ನಮ್ಮ ಹೆಮ್ಮೆ, ಪ್ರತಿಯೊಬ್ಬ ಭಾರತೀಯನೂ ಅದನ್ನು ತಮ್ಮ ಮನೆಯಲ್ಲಿ ಹಾರಿಸಬೇಕು ಎಂದು ಅವರ ತಂದೆ ದಾವೂದ್ ಭಟ್ ಮತ್ತು ಸಹೋದರ ರಾಹಿಲ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಲಷ್ಕರ್ ಭಯೋತ್ಪಾದಕನ ಮನೆಯಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

ಕಾಶ್ಮೀರದಲ್ಲಿ ಲಷ್ಕರ್ ಭಯೋತ್ಪಾದಕನ ಮನೆಯಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

  • Share this:
ಶ್ರೀನಗರ(ಆ.12): ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಕಮಾಂಡರ್ (Lashkar Commander) ಖುಬೈಬ್ ಭಟ್​ನ (Khubaib Bhat) ದೋಡಾ ಮನೆಯಲ್ಲಿ ತ್ರಿವರ್ಣ ಧ್ವಜ ರಾರಾಜಿಸಿದೆ. ಈ ದಿನಗಳಲ್ಲಿ ಖುಬೈಬ್ ಪಿಒಕೆಯ ಮುಜಫರಾಬಾದ್‌ನಲ್ಲಿರುವ ಭಯೋತ್ಪಾದಕ ಶಿಬಿರದಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದ್ದರೆ, ಅವನ ತಂದೆ ಮತ್ತು ಸಹೋದರ ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿರುವ ಅವರ ಮನೆಯಲ್ಲಿ ತ್ರಿವರ್ಣ ಧ್ವಜವನ್ನು (Tricolour) ಹಾರಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತ್ರಿವರ್ಣ ಧ್ವಜ ನಮ್ಮ ಹೆಮ್ಮೆ ಮತ್ತು ನಮಗೆ ತುಂಬಾ ಸಂತೋಷವಾಗಿದೆ ಎಂದು ಅವರ ತಂದೆ ದಾವೂದ್ ಭಟ್ ವೈರಲ್ ವಿಡಿಯೋದಲ್ಲಿ ಹೇಳಿದ್ದಾರೆ.,

ಇದನ್ನೂ ಓದಿ:  First Tricolour: ನೆಹರೂ ಹಾರಿಸಿದ ಮೊದಲು ತ್ರಿವರ್ಣ ಧ್ವಜದ ಫೋಟೋ ಶೇರ್ ಮಾಡಿದ ಮೋದಿ, ಜನರಲ್ಲಿ ವಿಶೇಷ ಮನವಿ

ತ್ರಿವರ್ಣ ಧ್ವಜ ನಮ್ಮ ಪ್ರಾಣವಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಅದನ್ನು ತಮ್ಮ ಮನೆಯಲ್ಲಿ ಹಾರಿಸಬೇಕು ಎಂದು ತಂದೆ ದಾವೂದ್ ಭಟ್ ಮತ್ತು ಸಹೋದರ ರಾಹಿಲ್ ಹೇಳಿದರು. ಭಾರತೀಯ ತ್ರಿವರ್ಣ ಧ್ವಜವನ್ನು ಅಭಿಮಾನದಿಂದ ಹಾರಿಸಬೇಕು ಮತ್ತು ಈ ನಿಟ್ಟಿನಲ್ಲಿ ಇತರ ಜನರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು. ದಾವೂದ್ ಮತ್ತು ರಾಹಿಲ್ ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಇತರರಿಗೆ ಅರಿವು ಮೂಡಿಸಿದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ತ್ರಿವರ್ಣ ಅಭಿಯಾನ ಆರಂಭಿಸಲಾಗಿದೆ ಎಂದು ದಾವೂದ್ ಭಟ್ ಹೇಳಿದ್ದಾರೆ. ದೇಶದ ಪ್ರತಿ ಗ್ರಾಮ, ಪ್ರತಿ ಪಂಚಾಯತ್ ಮತ್ತು ಪ್ರತಿಯೊಬ್ಬ ನಾಗರಿಕರು ಇದರಿಂದ ಸಂತೋಷಪಡುತ್ತಾರೆ. ಕಾಶ್ಮೀರದ ಈ ಹಳ್ಳಿಯಲ್ಲಿ ನಾವೂ ಖುಷಿಯಾಗಿದ್ದೇವೆ. ಇದು ತುಂಬಾ ಒಳ್ಳೆಯ ಕೆಲಸ ಎಂದಿದ್ದಾರೆ.

ಇದನ್ನೂ ಓದಿ:  Independence Day: ಕಣ್ಣಿನೊಳಗೇ ತ್ರಿವರ್ಣ ಧ್ಜಜ ಮಾಡಿದ ತಮಿಳುನಾಡಿನ ರಾಜಾ!


ನಾವು ಹಾರಿಸದಿದ್ದರೆ ತ್ರಿವರ್ಣ ಧ್ವಜವನ್ನು ಯಾರು ಹಾರಿಸುತ್ತಾರೆ?

ತ್ರಿವರ್ಣ ಧ್ವಜ ನಮ್ಮದು, ಅದನ್ನು ಕೇವಲ ತೋರ್ಪಡಿಕೆಗೆ ನಾವು ಹಾರಿಸುತ್ತಿಲ್ಲ ಎಂದು ದಾವೂದ್ ಹೇಳಿದ್ದಾರೆ. ತ್ರಿವರ್ಣ ಧ್ವಜವನ್ನು ಪ್ರತಿಯೊಬ್ಬ ಭಾರತೀಯ ಹಾರಿಸಬೇಕು. ಇನ್ನು ಖುಬೈಬ್ ಬಗ್ಗೆ ಕೇಳುವವರಿಗೆ, ನಾವು ಯಾರಿಗೂ ಹೆದರುವುದಿಲ್ಲ, ನಾವು ಸ್ಥಳೀಯರು, ಆದ್ದರಿಂದ ತ್ರಿವರ್ಣ ನಮ್ಮ ಮನೆಯ ಹೆಮ್ಮೆ ಎಂದು ಅವರಿಗೆ ಈ ಮೂಲಕ ತಿಳಿಸಿದ್ದೇವೆ ಎಂದಿದ್ದಾರೆ. ಖುಬೈಬ್​ ನಿಮಗೆ ಎಲ್ಲೇ ಸಿಕ್ಕರೂ ಅಲ್ಲೇ ಸಾಯಿಸಿ. ಜನರು ಅವನ ಹೆಸರು ಕೇಳಿದರೇ ಹೆದರುತ್ತಾರೆ. ಅವನು ಅನೇಕರ ಮನೆಯನ್ನು ಹಾಳು ಮಾಡಿದ್ದಾನೆ. ಖುಬೈಬ್ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶದ ಸೈನ್ಯಕ್ಕೆ ಸೇರಿದ್ದರೆ ನಮಗೆ ಸಂತೋಷವಾಗುತ್ತಿತ್ತು ಎಂದಿದ್ದಾರೆ.
Published by:Precilla Olivia Dias
First published: