Happy Teacher's Day: ಇಂದು ವಿದ್ಯೆ ಕಲಿಸಿದ ಗುರುವನ್ನು ನೆನೆಯುವ ಸುದಿನ

Sarvepalli Radhakrishnan Birth Anniversary:ಶಿಕ್ಷಕರ ದಿನಾಚರಣೆಯಂದು ಪ್ರಮುಖವಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರವೇನು? ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಎಂತಹದ್ದು ಎಂಬುದರ ಬಗ್ಗೆ ಮನದಟ್ಟು ಮಾಡಿಕೊಡಲಾಗುತ್ತದೆ. ಅಷ್ಟೇ ಅಲ್ಲದೇ, ಸೆಪ್ಟೆಂಬರ್ 5ರಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್​ ಅವರ ಜೀವನ ಹಾಗೂ ಅವರ ಸಾಧನೆ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಶಿಕ್ಷಕರ ದಿನಾಚರಣೆ

ಶಿಕ್ಷಕರ ದಿನಾಚರಣೆ

 • Share this:
  ಇಂದು ಸೆಪ್ಟೆಂಬರ್ 5, ಶಿಕ್ಷಕರ ದಿನಾಚರಣೆಯ ಸಂಭ್ರಮ. ವಿದ್ಯೆ ಕಲಿಸಿದ ಗುರುವನ್ನು ನೆನೆಯುವ ಸುದಿನ. ಪ್ರತಿವರ್ಷ ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್​ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಶಿಕ್ಷಕ, ಭಾರತ ರತ್ನ, ತತ್ವಜ್ಞಾನಿ, ಲೇಖಕ ಹಾಗೂ ಸ್ವತಂತ್ರ ಭಾರತದ ಮೊದಲ ಉಪರಾಷ್ಟ್ರಪತಿ, ಜೊತೆಗೆ ಎರಡನೇ ರಾಷ್ಟ್ರಪತಿಯಾಗಿದ್ದವರು.  ರಾಧಾಕೃಷ್ಣ ಅವರು ತಮ್ಮ ಇಡೀ ಜೀವನವನ್ನು ವಿದ್ಯಾರ್ಥಿಗಳಿಗಾಗಿಯೇ ಮುಡಿಪಾಗಿಟ್ಟಿದ್ದರು. ಹೀಗಾಗಿ ತನ್ನ ಹುಟ್ಟುಹಬ್ಬದ ದಿನವನ್ನು ಶಿಕ್ಷಕರಿಗೆ ಅರ್ಪಣೆ ಮಾಡುವ ಸಲುವಾಗಿ ಆ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ಎಂದು ಹೇಳಿದ್ದರಂತೆ. ಹೀಗಾಗಿ 1962ರ ಸೆಪ್ಟೆಂಬರ್ 5ರಿಂದ ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಪದ್ದತಿ ಬೆಳೆದು ಬಂದಿತು.

  ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಒಂದು ಉದ್ದೇಶವಿದೆ. ಒಮ್ಮೆ ವಿದ್ಯಾರ್ಥಿಗಳು ರಾಧಾಕೃಷ್ಣನ್ ಅವರ ಬಳಿ ಬಂದು ನಿಮ್ಮ ಹುಟ್ಟು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಿದ್ದೇವೆ, ತಾವುಗಳು ದಯಮಾಡಿ ಬರಲೇಬೇಕು ಎಂದು ಆಹ್ವಾನ ನೀಡಿದ್ದರಂತೆ. ಆಗ ರಾಧಾಕೃಷ್ಣನ್​ ಅವರು, ಈ ದಿನವನ್ನು ನನ್ನ ಹುಟ್ಟುಹಬ್ಬವನ್ನಾಗಿ ಆಚರಿಸುವ ಬದಲು ಶಿಕ್ಷಕರ ದಿನ ಎಂದು ಏಕೆ ಆಚರಿಸಬಾರದು? ಇದರಿಂದ ನನಗೆ ತುಂಬಾ ಸಂತೋಷವಾಗುತ್ತದೆ ಎಂದರಂತೆ. ಇದನ್ನು ಒಪ್ಪಿದ ವಿದ್ಯಾರ್ಥಿಗಳು ಅವರ ಹುಟ್ಟುಹಬ್ಬದ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಪ್ರಾರಂಭಿಸಿದರಂತೆ. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ದೇಶಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ.

  ರೇವ್ ಪಾರ್ಟಿಗೆ ತೆರಳುತ್ತಿದ್ದ ಐಪಿಎಸ್ ಅಧಿಕಾರಿಗಳ ಹೆಸರು ಹೇಳ್ತೇನೆ; ಪೊಲೀಸರಿಗೆ ಎಚ್ಚರಿಕೆ ನೀಡಿದ ನಟಿ

  ಪ್ರತಿವರ್ಷ ಶಿಕ್ಷಕರ ದಿನಾಚರಣೆಯನ್ನು ಶಾಲಾ-ಕಾಲೇಜುಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಮಾರಕ ಕೊರೋನಾ ವೈರಸ್​​ನಿಂದಾಗಿ ಶಾಲೆಗಳು ಮುಚ್ಚಿವೆ. ಹೀಗಾಗಿ ಆನ್​ಲೈನ್​ನಲ್ಲೇ ಶಿಕ್ಷಕರ ದಿನಾಚರಣೆಯನ್ನು ವಿದ್ಯಾರ್ಥಿಗಳು ಆಚರಿಸಬಹುದು. ಪ್ರತಿವರ್ಷ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಬಗ್ಗೆ ಒಂದಷ್ಟು ಮಾತುಗಳನ್ನಾಡಿ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದರು. ಆದರೆ ಈ ಬಾರಿ ವಿದ್ಯಾರ್ಥಿಗಳು ಮನೆಯಲ್ಲಿಯೇ ಶುಭಾಶಯ ಸಿದ್ದಪಡಿಸಿ ಆನ್​ಲೈನ್​ನಲ್ಲಿ ಶಿಕ್ಷಕರಿಗೆ ವಿಶ್ ಮಾಡಲಿದ್ದಾರೆ.

  ಶಿಕ್ಷಕರ ದಿನಾಚರಣೆಯಂದು ಪ್ರಮುಖವಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರವೇನು? ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಎಂತಹದ್ದು ಎಂಬುದರ ಬಗ್ಗೆ ಮನದಟ್ಟು ಮಾಡಿಕೊಡಲಾಗುತ್ತದೆ. ಅಷ್ಟೇ ಅಲ್ಲದೇ, ಸೆಪ್ಟೆಂಬರ್ 5ರಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್​ ಅವರ ಜೀವನ ಹಾಗೂ ಅವರ ಸಾಧನೆ ಬಗ್ಗೆ ತಿಳಿಸಿಕೊಡಲಾಗುತ್ತದೆ.

  ಒಬ್ಬ ವಿದ್ಯಾರ್ಥಿಯ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕನ ಪಾತ್ರ ಅಷ್ಟೇ ಪ್ರಮುಖವಾಗಿರುತ್ತದೆ. ವಿದ್ಯಾರ್ಥಿಯ ಜೀವನಕ್ಕೆ ಭದ್ರ ಅಡಿಪಾಯ ಹಾಕುವಲ್ಲಿ ಶಿಕ್ಷಕ ಹಾಕುವ ಪರಿಶ್ರಮವನ್ನು ನಾವು ಇಲ್ಲಿ ಸ್ಮರಿಸಲೇಬೇಕು. ಅಂತೆಯೇ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನೂ ನೆನೆಯಬೇಕು.
  Published by:Latha CG
  First published: