ಸರ್ಚ್ ಎಂಜಿನ್ ದೈತ್ಯ ಗೂಗಲ್ ವಿಶೇಷ ದಿನವನ್ನು ಗುರುತಿಸಿ ವಿನ್ಯಾಸದ ಡೂಡಲ್ ರಚಿಸಿ ಆ ದಿನವನ್ನು ಸ್ಮರಿಸುತ್ತದೆ. ಅದರಂತೆ ಇಂದು ವಿಶ್ವ ಅಪ್ಪಂದಿರ ದಿನ. ಹಾಗಾಗಿ ಗೂಗಲ್ ಬಣ್ಣ ಬಣ್ಣದ ಡೂಡಲ್ ರಚಿಸುವ ಮೂಲಕ ಈ ದಿನವನ್ನು ನೆನಪಿಸಿಕೊಂಡಿದೆ.
ಅನಿಮೇಟೆಡ್ ಡೂಡಲ್ ರಚಿಸುವ ಮೂಲಕ ಗೂಗಲ್ ಎಲ್ಲರಿಗೂ ತಂದೆಯ ದಿನಾಚರಣೆಯ ಶುಭಾಶಯಗಳು ಎಂದು ಕೋರಿದೆ. ಕೆಲವು ದೇಶಗಳಲ್ಲಿ ಬೇರೆ ದಿನದಂದು ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತ ಮತ್ತು ಅಮೆರಿಕ ಆಚರಿಸುವ ದಿನವು ಒಂದೇ ಆಗಿದೆ. ಆದರೆ ಕ್ಯಾಥೋಲಿಕ್ ಯುರೋಪಿಯನ್ ರಾಷ್ಟ್ರಗಳಾದ ಪೋರ್ಚುಗಲ್, ಸ್ಪೇನ್, ಕ್ರೊಯೇಷಿಯಾ, ಇಟಲಿಯಲ್ಲಿ ಫಾದರ್ಸ್ ಡೇಯನ್ನು ಮಾರ್ಚ್ 19 ಸೇಂಟ್ ಜೋಸೆಪ್ರ ದಿನದಂದು ಆಚರಿಸಲಾಗುತ್ತದೆ.
ಇನ್ನು ನಾರ್ವೆ, ಸ್ಪೀಡನ್ ಮತ್ತು ಫಿನ್ಲ್ಯಾಂಡ್ನಲ್ಲಿ ನವೆಂಬರ್ 2ನೇ ಭಾನುವಾರ ಆಚರಿಸುತ್ತಾರೆ. ರಷ್ಯಾ ಫೆಬ್ರವರಿ 23ರಂದು ಆಚರಿಸುತ್ತದೆ.
ಅಮೆರಿಕದ ಮೊನೊಂಗಾದಲ್ಲಿ ಗಣಿಗಾರಿಕೆಯಿಂದ ವಿಪತ್ತಿನಿಂದ ಪ್ರಾಣ ಕಳೆದುಕೊಂಡ ಅಪ್ಪಂದಿರನ್ನು ಗೌರವಿಸುವ ಸಲುವಾಗಿ ಜುಲೈ 5, 1908 ರಂದು ಪಶ್ಚಿಮ ವರ್ಜೀನಿಯಾದಲ್ಲಿ ಮೊದಲ ತಂದೆಯ ದಿನವನ್ನು ಆಚರಿಸಲಾಯಿತು ಎಂದು ಹೇಳಲಾಗುತ್ತಿದೆ.
ಇನ್ನು ಕೆಲವರು ಸೊನೆರೊ ಲೂಯಿಸ್ ಡಾಡ್ ಅವರಿಂದಾಗಿ ಫಾದರ್ಸ್ ಡೇ ಆಚರಣೆಗೆ ಬಂತು ಎಂದು ಹೇಳಲಾಗುತ್ತಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ