ಮದುವೆಯನ್ನು ತಪ್ಪಿಸಿ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಲು ಭುವನೇಶ್ವರಕ್ಕೆ ಬಂದಿಳಿದ ಉತ್ತರ ಪ್ರದೇಶದ ಪೊಲೀಸರು ಬರಿಗೈಯಲ್ಲಿ ಹಿಂದಿರುಗಿದ ಘಟನೆ ನಡೆದಿದೆ. ಆ ಬಾಲಕಿ ಅಪ್ರಾಪ್ತೆಯಲ್ಲ. ಮದುವೆ ವಯಸ್ಸು ಆಗಿದ್ದು, ತನ್ನ ಪ್ರಿಯತಮೆಯನ್ನು ಮದುವೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ತಮ್ಮ ಮಗಳು, ಆಕಾಂಕ್ಷಾ ಸಿಂಗ್ ಅಪ್ರಾಪ್ತ ವಯಸ್ಸಿನವರು ಮತ್ತು ಭುವನೇಶ್ವರದಲ್ಲಿ ಖಂಡಗಿರಿ ಪೊಲೀಸ್ ವ್ಯಾಪ್ತಿಯ ಜಗಮರ ನಿವಾಸಿ ಪೃಥೀವ್ ರಾಜ್ ಪಾಂಡಾ ಅಪಹರಿಸಿದ್ದಾನೆ ಎಂದು ಬಾಲಕಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಘಟನೆಯ ವಿಚಾರಣೆಗೆ ಪೊಲೀಸ್ ತಂಡ ನಗರಕ್ಕೆ ಆಗಮಿಸಿತ್ತು.
ಹುಡುಗಿಯ ಪೋಷಕರು ಮಾತ್ರ ಆಕೆ ಅಪ್ರಾಪ್ತಳು. ಪೃಥೀವ್ ರಾಜ್ ಎಂಬುವರು ತಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ದೂರು ದಾಖಲು ಮಾಡಿದ್ದರು. ಆದ ಕಾರಣ ಪೊಲೀಸರು ಕಾರ್ಯಚರಣೆ ಆರಂಭಿಸಿ ಆತ ಒಡಿಶಾದಲ್ಲಿರುವುದಾಗಿ ಮಾಹಿತಿ ಪಡೆದರು. ನಂತರ ಏರ್ಫೀಲ್ಡ್ ಪೊಲೀಸರ ಸಹಾಯದಿಂದ ಪೃಥೀವ್ ರಾಜ್ ಅವರ ಮನೆಯನ್ನು ಪತ್ತೆ ಹಚ್ಚಿದರು.
ಪ್ರುಥೀವ್ ರಾಜ್ ಪಾಂಡ ಬಾಲಕಿಯ ಮನವೊಲಿಸಿ ಗೋರಖ್ಪುರದಿಂದ ಭುವನೇಶ್ವರಕ್ಕೆ ಬರಲು ಹೇಳಿದ್ದಾನೆ ಎಂದು ಆರೋಪಿಸಿ ಆಕಾಂಕ್ಷಾ ಅವರ ತಂದೆ ದೂರು ನೀಡಿದ್ದರು. ಈ ದೂರಿನ ಅನ್ವಯ ಅಲ್ಲಿಗೆ ತಲುಪಿದಾಗ, ಆಕಾಂಕ್ಷಾ ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿಯಿತು. ಹುಡುಗಿ ವಯಸ್ಕಳಾಗಿದ್ದರಿಂದ, ಆಕೆಯ ಇಷ್ಟದಂತೆ ಅವಳು ಬದುಕಬಹುದು ಎಂದು ಯುಪಿ ಪೊಲೀಸರ ಸಬ್ ಇನ್ಸ್ಪೆಕ್ಟರ್ ಪಂಕಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: BBK8: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಪ್ರಶಾಂತ್ ಸಂಬರಗಿ-ಚಕ್ರವರ್ತಿ ಫೋಟೋ ಸುಟ್ಟ ಸ್ಪರ್ಧಿಗಳು..!
ವರದಿಯ ಪ್ರಕಾರ, ಈ ಘಟನೆ ನಡೆದಾಗ ನವವಧುವಿಗೆ 19 ವರ್ಷ. ಆಕೆ ಪೃಥೀವ್ ರಾಜ್ ಪಾಂಡಾ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ಆದ ಕಾರಣ ಆತನ ಜೊತೆ ಮನೆಬಿಟ್ಟು ಹೋದ ಯುವತಿ ಒಡಿಶಾದ ಕಂದಗಿರಿ ಎಂಬ ದೇವಾಲಯದಲ್ಲಿ ವಿವಾಹವಾಗಿದ್ದರು. ಮದುವೆಯನ್ನು ನೊಂದಣಿ ಕೂಡ ಮಾಡಿಸಿದ್ದಾರಂತೆ.
18 ವರ್ಷ ತುಂಬಿದ ಆಕಾಂಕ್ಷಾಸದಸಸದಹಗ್ ತನ್ನ ಇಚ್ಛಾನುಸಾರ ಭುವನೇಶ್ವರಕ್ಕೆ ಬಂದಳು. ಈಗ ಅವಳು ಪತಿ ಮತ್ತು ಆತನ ಕುಟುಂಬದೊಂದಿಗೆ ಸಂತೋಷದಿಂದ ಬದುಕುತ್ತಿದ್ದಾರೆ ಎಂದು ವಕೀಲ ರಾಜ್ ಕಿಶೋರ್ ದಾಸ್ ಹೇಳಿದ್ದಾರೆ.
ನನಗೆ 18 ವರ್ಷ ತುಂಬಿದೆ. ನನ್ನ ಮೇಲೆ ಒತ್ತಡ ಹೇರುತ್ತಿರುವ ಪೋಷಕರು ನನ್ನನ್ನು ಒತ್ತಾಯವಾಗಿ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ನನ್ನ ಪತಿಯ ಮೇಲೆ ನನ್ನನ್ನು ಅಪಹರಿಸಿಕೊಂಡು ಬಂದಿದ್ದಾರೆ ಎಂದು ಸುಳ್ಳು ಆಪಾದನೆ ಹೊರಿಸುತ್ತಿದ್ದಾರೆ. ಆದರೆ ಅವರ ಆರೋಪದಲ್ಲಿ ಹುರುಳಿಲ್ಲ. ನಾನು ಸ್ವಇಚ್ಛೆಯಿಂದ ಅವರೊಟ್ಟಿಗೆ ಬಂದಿದ್ದೇನೆ. ಈ ಬಗ್ಗೆ ಮನೆಯಲ್ಲಿ ಪತ್ರ ಬರೆದಿಟ್ಟು ಬಂದಿದ್ದೇನೆ ಎಂದು ವಿಡಿಯೋ ಸಂದೇಶ ಕಳುಹಿಸಿದ್ದರಂತೆ ನವವಧು.
ಇದನ್ನೂ ಓದಿ: Easy Snacks: ಮಳೆಗಾಲದಲ್ಲಿ ಟ್ರೈ ಮಾಡಲೇಬೇಕಾದ ಗರಿಗರಿ ಸ್ನ್ಯಾಕ್ಸ್..!
ನಾವು ಜೂನ್ 17ರಂದು ಮದುವೆಯಾದೆವು. ನೋಂದಣಿಯನ್ನು ಮಾಡಿಕೊಂಡೆವು. ಇದಕ್ಕೆ ಸಂಬಂಧಿಸಿದ ದಾಖಲೆ 30 ದಿನಗಳಲ್ಲಿ ಬರಲಿದೆ ಎಂದು ತಿಳಿಸಿದಳು.
ಈ ಪ್ರಕರಣ ಮೆಟ್ಟಿಲೇರಿದ ನಂತರ, ನಾನು ಕಾನೂನು ನಿಯಮದ ಪ್ರಕಾರ ಮದುವೆಯಾಗಲು ಅರ್ಹಳಾಗಿದ್ದೇನೆ. ನಾನು ಸ್ವಇಚ್ಛೆಯಿಂದ ಒಡಿಶಾಗೆ ಹೋಗಿದ್ದೇನೆ. ನಾನು ಯಾರ ಒತ್ತಡಕ್ಕೂ ಮಣಿಯದೆ ಸಂತೋಷದಿಂದಲೇ ಅವರನ್ನು ವಿವಾಹವಾಗಿದ್ದೇನೆ. ನಾನು ಅವರೊಟ್ಟಿಗೆ ಇರಲು ಬಯಸುತ್ತೇನೆ ಎಂದು ಯುವತಿ ನೀಡಿರುವ ಹೇಳಿಕೆಯನ್ನು 164 ಸೆಕ್ಷನ್ ಅಡಿಯಲ್ಲಿ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆಯಂತೆ.
ನ್ಯಾಯಾಲಯವು ಆಕಾಂಕ್ಷಾ ತನ್ನ ಪತಿ ಹಾಗೂ ಕುಟುಂಬದೊಂದಿಗೆ ಬದುಕಲು ಅನುಮತಿ ನೀಡಿದ್ದು, ಆಕೆ ಸಂತೋಷಗೊಂಡಿದ್ದಾಳೆ. ನನಗೆ ಏನು ಬೇಕು ಅದು ನನಗೆ ಸಿಕ್ಕಿದೆ. ನಾನು ನನ್ನ ಅತ್ತೆಯ ಮನೆಗೆ ಹೋಗುತ್ತೇನೆ ಎಂದು ಮಾಧ್ಯಮದವರ ಮುಂದೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ