Happy Birthday Priyanka Gandhi: ಪ್ರಿಯಾಂಕಾ ವಾದ್ರಾ ಬಗ್ಗೆ ಈ ವಿಚಾರಗಳು ನಿಮಗೆ ಗೊತ್ತಿರೋಕೆ ಸಾಧ್ಯ ಇಲ್ಲ

Priyanka Gandhi Vadra: ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕುಟುಂಬದ ಎಲ್ಲರೂ ಅನುಸರಿಸುವ ವೃತ್ತಿಜೀವನದ ಹಾದಿಯನ್ನು ಹೆಚ್ಚಾಗಿ ಅನುಸರಿಸಿದ್ದಾರೆ. ಅಂದರೆ ರಾಜಕೀಯದ ಹಾದಿ ಪ್ರವೇಶಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಂಗ್ರೆಸ್‌ (Congress) ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi)  ಹಾಗೂ ದಿವಂಗತ ಪ್ರಧಾನಿ ರಾಜೀವ್‌ ಗಾಂಧಿ (Rajiv Gandhi)  ಅವರ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ರಾಜಕೀಯದಲ್ಲಿ ( Politics) ತನ್ನದೇ ಅದ ಛಾಪನ್ನು ಮೂಡಿಸಿದ್ದಾರೆ. ಕೈ ಪಕ್ಷದ ಪ್ರಭಾವಿ ನಾಯಕರಲ್ಲೊಬ್ಬರು ಎನಿಸಿಕೊಂಡಿದ್ದಾರೆ. ಹಲವು ವಿವಾದಗಳ ನಡುವೆಯೂ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿದ್ದು, ಪಕ್ಷದ ಮಹಿಳಾ ಅಭಿಮಾನಿಗಳಿಗೆ ಪ್ರಭಾವಿ ನಾಯಕಿ ಎನಿಸಿಕೊಂಡಿದ್ದಾರೆ. ಸದ್ಯ ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳ ಚುನಾವಣೆಗಾಗಿ ಮತಬೇಟೆ ನಡೆಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾಗಿಂದು 50ನೇ ಹುಟ್ಟುಹಬ್ಬದ (Birthday) ಸಂಭ್ರಮ.

ಪ್ರಿಯಾಂಕಾ ಗಾಂಧಿ ತನ್ನ ಹುಟ್ಟುಹಬ್ಬಕ್ಕೂ ಮುನ್ನ ಮಂಗಳವಾರ ಬೆಳಗ್ಗೆ ರಾಜಸ್ಥಾನದ ಸವಾಯಿ ಮಾಧೋಪುರದ ರಾಂಥಂಬೋರ್ ತಲುಪಿದರು. ಇಂದು ಅಂದರೆ ಜನವರಿ 12ರಂದು ಪ್ರಿಯಾಂಕಾ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆ ರಾಂಥಂಬೋರ್‌ನಲ್ಲಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಿಯಾಂಕಾ ರಾಂಥಂಬೋರ್ ಅಭಯಾರಣ್ಯದಲ್ಲಿ ಹುಲಿ ಸಫಾರಿಗೆ ಹೋಗುತ್ತಾರೆ ಎಂದು ತಿಳಿದುಬಂದಿದ್ದು, ಹೋಟೆಲ್ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶ ಉಸ್ತುವಾರಿಯಾಗಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

ಇದನ್ನೂ ಓದಿ: ಕೋವಿಡ್ ಮಾತ್ರೆ ನಾವೇ ತೆಗೆದುಕೊಳ್ಳುವುದು ಅಪಾಯ ಅಂತಿದ್ದಾರೆ ವೈದ್ಯರು

ಪ್ರಿಯಾಂಕಾ ಗಾಂಧಿ ಶಿಕ್ಷಣ

ಉದ್ಯಮಿ ರಾಬರ್ಟ್‌ ವಾದ್ರಾ ಪತ್ನಿಯೂ ಆಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡರ್ನ್ ಸ್ಕೂಲ್ ಮತ್ತು ಕಾನ್ವೆಂಟ್ ಶಾಲೆಯ ಹಳೆಯ ವಿದ್ಯಾರ್ಥಿನಿ. ಅವರು ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇನ್ನು, ಪ್ರಿಯಾಂಕಾ ಗಾಂಧಿ ಬೌದ್ಧ ಧರ್ಮದ ಆದರ್ಶಗಳಿಂದ ಹೆಚ್ಚು ಪ್ರಭಾವಿತರಾಗಿದ್ದರು. ಹಾಗೂ, ಅವರು ಬೌದ್ಧ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ, ಅದನ್ನು ಅವರು 2010ರಲ್ಲಿ ಪೂರ್ಣಗೊಳಿಸಿದರು ಎಂದು ತಿಳಿದುಬಂದಿದೆ.

ರಾಬರ್ಟ್‌ ವಾದ್ರಾಗೆ ಸದಾ ಬೆಂಬಲ..!

ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿ ಮೂಲದ ಉದ್ಯಮಿ ರಾಬರ್ಟ್ ವಾದ್ರಾ ಅವರನ್ನು ಫೆಬ್ರವರಿ 18, 1997ರಂದು ವಿವಾಹವಾದರು. ರಾಬರ್ಟ್ ವಾದ್ರಾ ದೀರ್ಘಕಾಲದಿಂದ ಹಲವು ವಿವಾದಗಳಲ್ಲಿ ಸಿಲುಕಿದ್ದಾರೆ. ಆದರೆ, ಪ್ರಿಯಾಂಕಾ ಗಾಂಧಿ ಮಾತ್ರ ತಮ್ಮ ಪತಿ ಪರವಾಗಿ ಬಲವಾಗಿ ಯಾವಾಗಲೂ ನಿಂತಿರುತ್ತಾರೆ.

ಬೌದ್ಧ ತತ್ತ್ವಶಾಸ್ತ್ರದ ಅನುಯಾಯಿ..!

ಪ್ರಿಯಾಂಕಾ ಗಾಂಧಿ ವಾದ್ರಾ ಬೌದ್ಧ ತತ್ತ್ವಶಾಸ್ತ್ರದ ಕಟ್ಟಾ ಅನುಯಾಯಿ. ಒಬ್ಬ ವ್ಯಕ್ತಿಯು ಮನಸ್ಸಿನ ಶಾಂತಿ ಪಡೆಯಲು ಅನುವು ಮಾಡಿಕೊಡುವ ಧ್ಯಾನದ ರೂಪವಾದ ವಿಪಸ್ಸನಾ ಅಭ್ಯಾಸ ಮಾಡಲು ಆಕೆಗೆ ಮಾರ್ಗದರ್ಶನ ನೀಡಿದ ಬೌದ್ಧ ತತ್ತ್ವಶಾಸ್ತ್ರದ ಬೋಧಕ ತನ್ನ ಗುರು ಸತ್ಯ ನಾರಾಯಣ ಗೋಯೆಂಕಾ ಅವರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಕ್ರೆಡಿಟ್‌ ನೀಡುತ್ತಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕುಟುಂಬದ ಎಲ್ಲರೂ ಅನುಸರಿಸುವ ವೃತ್ತಿಜೀವನದ ಹಾದಿಯನ್ನು ಹೆಚ್ಚಾಗಿ ಅನುಸರಿಸಿದ್ದಾರೆ. ಅಂದರೆ ರಾಜಕೀಯದ ಹಾದಿ ಪ್ರವೇಶಿಸಿದ್ದಾರೆ.

ಪ್ರಿಯಾಂಕಾ ವಾದ್ರಾ ಆರಂಭದಲ್ಲಿ ಅಮೇಥಿಯಲ್ಲಿ ಉತ್ತಮ ಯಶಸ್ಸನ್ನು ಗಳಿಸಿದರು. ಆದರೆ ಕಾಲಾನಂತರದಲ್ಲಿ, ಕಾಂಗ್ರೆಸ್ ದೇಶದ ಹಲವು ಭಾಗಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿತು. ಈ ಹಿನ್ನೆಲೆ ಫೆಬ್ರವರಿ, ಮಾರ್ಚ್‌ನಲ್ಲಿ ನಡೆಯಲಿರುವ ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಎಷ್ಟರ ಮಟ್ಟಿಗೆ ಗಮನ ಸೆಳೆಯಲಿದ್ದಾರೆ.

ಇದನ್ನೂ ಓದಿ: ಬೂಸ್ಟರ್ ಡೋಸ್ ತಗೊಂಡ್ರೂ ಬಿಡಲ್ಲ ಈ ಓಮೈಕ್ರಾನ್​, ಎಲ್ಲರನ್ನೂ ಕಾಡುತ್ತೆ ಅಂತಿದ್ದಾರೆ ತಜ್ಞರು

ಮತದಾರರ ಮೇಲೆ ಯಾವ ಮಟ್ಟಿಗೆ ಪ್ರಭಾವ ಬೀರಲಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ಈ ರಾಜ್ಯಗಳಲ್ಲಿ ಮತ್ತೆ ಅಧಿಕಾರಕ್ಕೆ ತರುವಂತೆ ಮಾಡುತ್ತಾರಾ, ಮತಬೇಟೆಯಲ್ಲಿ ಸಕ್ರಿಯವಾಗಿ ತೊಡಗಲಿದ್ದಾರಾ. ರಾಹುಲ್ ಗಾಂಧಿಗಿಂತ ಹೆಚ್ಚು ಪ್ರಭಾವ ಬೀರಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. ಇದಕ್ಕೆಲ್ಲ ಉತ್ತರ ಸಿಗಲು ಮಾರ್ಚ್‌ವರೆಗೂ ಕಾಯಬೇಕಿದೆ.
Published by:Sandhya M
First published: