Happy Birthday PM Narendra Modi: 69ನೇ ವರ್ಷಕ್ಕೆ ಕಾಲಿಟ್ಟ ಮೋದಿ; ಅಮ್ಮನ ಆಶೀರ್ವಾದ ಪಡೆಯಲು ತವರಿಗೆ ತೆರಳಿದ ಪ್ರಧಾನಿ

ಇಂದು ಪ್ರಧಾನಿ ತಾಯಿಯ ಬಳಿ ತೆರಳಿ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ. ಅವರು ಗುಜರಾತ್​ನ ಗಾಂಧೀನಗರಕ್ಕೆ ನಿನ್ನೆ ರಾತ್ರಿಯೇ ಬಂದಿಳಿದಿದ್ದರು.

Rajesh Duggumane
Updated:September 17, 2019, 12:32 PM IST
Happy Birthday PM Narendra Modi: 69ನೇ ವರ್ಷಕ್ಕೆ ಕಾಲಿಟ್ಟ ಮೋದಿ; ಅಮ್ಮನ ಆಶೀರ್ವಾದ ಪಡೆಯಲು ತವರಿಗೆ ತೆರಳಿದ ಪ್ರಧಾನಿ
File PHoto ನರೇಂದ್ರ ಮೋದಿ ಹಾಗೂ ಅವರ ತಾಯಿ
  • Share this:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಸೆ.17) 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗಣ್ಯರು, ವಿಪಕ್ಷದವರು ಹಾಗೂ ಹಿಂಬಾಲಕರು ಪ್ರಧಾನಿಗೆ ಶುಭಾಶಯ ತಿಳಿಸಿದ್ದಾರೆ.

ಪ್ರತಿವರ್ಷದಂತೆ ಈ ಬಾರಿಯೂ ಪ್ರಧಾನಿ ಮೋದಿ ಗುಜರಾತ್​ನ ಗಾಂಧೀನಗರದಲ್ಲಿ ವಾಸವಾಗಿರುವ ತಾಯಿಯ ಬಳಿ ತೆರಳಿ ಆಶೀರ್ವಾದ ಪಡೆದುಕೊಂಡರು.  ತಾಯಿ ಭೇಟಿ ನಂತರ ಕೆವಾಡಿಯಾದಲ್ಲಿ ನರ್ಮದಾ ನದಿಗೆ ಕಟ್ಟಲಾದ ಸರ್ದಾರ್​ ಸರೋವರ ಡ್ಯಾಮ್​ಗೆ ಅವರು ತೆರಳಿದ್ದಾರೆ. ಇಲ್ಲಿ ಸರ್ದಾರ್​ ವಲ್ಲಭಾಯಿ ಪಟೇಲ್​ ಜನ್ಮದ ದಿನದ ಅಂಗವಾಗಿ ಅಕ್ಟೋಬರ್​ ತಿಂಗಳಲ್ಲಿ ಅವರ ಬೃಹತ್​ ಪುತ್ಥಳಿ ಲೋಕಾರ್ಪಣೆ ಮಾಡಲಾಗಿತ್ತು.

ಸರ್ದಾರ್​ ವಲ್ಲಭಾಯಿ ಪಟೇಲ್​ ಪುತ್ಥಳಿಯ ವಿಡಿಯೋವನ್ನು ಮೋದಿ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಇದಕ್ಕೂ ಮೊದಲು ಅವರು ನರ್ಮದಾ ನದಿಗೆ ಪೂಜೆ ಸಲ್ಲಿಸಿದರು. ಅಲ್ಲದೆ, ಕೆವಾಡಿಯಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.ಟ್ವಿಟ್ಟರ್​ನಲ್ಲಿ ಪ್ರಧಾನಿ ಮೋದಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. #HappyBirthdayNarendraModi ಹಾಗೂ #HappyBdayPMModi ಹ್ಯಾಶ್​ಟ್ಯಾಗ್​ಗಳು ಟ್ರೆಂಡಿಂಗ್​ನಲ್ಲಿವೆ. ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಸಚಿವ ಪ್ರಕಾಶ್​ ಜಾವ್ಡೇಕರ್​ ಸೇರಿ ಅನೇಕರು, ವಿಪಕ್ಷ ನಾಯಕರು ಪ್ರಧಾನಿಗೆ ಜನ್ಮದಿನದ ಶುಭಾಶಯ ಕೋರಿದರು.First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading