ನನ್ನ ಮಗ ಅತ್ಯಾಚಾರಿ ಆತನನ್ನು ಗುಂಡಿಟ್ಟು ಕೊಲ್ಲಿ; ತೆಲಂಗಾಣ ಪಶುವೈದ್ಯೆಯ ಕೊಲೆ ಆರೋಪಿ ತಾಯಿಯ ಆಕ್ರೋಶ

ನನಗೂ ಮಗಳಿದ್ದಾಳೆ. ಸಾಯುವಾಗ ಪಶುವೈದ್ಯೆ ಅನುಭವಿಸಿದ ನೋವು ನನಗೆ ಅರ್ಥವಾಗುತ್ತದೆ. ಅವನನ್ನು ಗಲ್ಲಿಗೇರಿಸಿ, ಶೂಟ್ ಮಾಡಿ ಸಾಯಿಸಿ ಎಂದು ಹೇಳುವ ಮೂಲಕ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಆರೋಪಿ ಚೆನ್ನಕೇಶವಲು ಅವರ ತಾಯಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

MAshok Kumar | news18-kannada
Updated:December 2, 2019, 11:22 AM IST
ನನ್ನ ಮಗ ಅತ್ಯಾಚಾರಿ ಆತನನ್ನು ಗುಂಡಿಟ್ಟು ಕೊಲ್ಲಿ; ತೆಲಂಗಾಣ ಪಶುವೈದ್ಯೆಯ ಕೊಲೆ ಆರೋಪಿ ತಾಯಿಯ ಆಕ್ರೋಶ
ಸಾಂದರ್ಭಿಕ ಚಿತ್ರ.
  • Share this:
ಹೈದರಾಬಾದ್ (ಡಿಸೆಂಬರ್ 02); ದೇಶವನ್ನೇ ನಡುಗಿಸಿದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ನಾಲ್ವರು ಆರೋಪಿಗಳನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲುವಂತೆ ಇಡೀ ದೇಶದಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಸ್ವತಃ ಅತ್ಯಾಚಾರ ಆರೋಪಿಗಳ ಕುಟುಂಬಸ್ಥರೂ ಸಹ ವೈದ್ಯೆಯ ಸಾವಿಗೆ ಕಾರಣವಾದ ತಮ್ಮ ಮಕ್ಕಳನ್ನು ಅದೇ ರೀತಿ ಕೊಲ್ಲುವಂತೆ ಹೇಳಿಕೆ ನೀಡಿರುವುದು ದೇಶದಾದ್ಯಂತ ಈ ಪ್ರಕರಣ ಸೃಷ್ಟಿಸಿರುವ ಆಘಾತ ಮತ್ತು ಮನಸ್ಥಿತಿಯನ್ನುಬಿಂಬಿಸುವಂತಿದೆ.

ಅತ್ಯಾಚಾರ ಆರೋಪಿಗಳಾದ ಮೊಹಮ್ಮದ್ ಆರೀಫ್, ಚೆನ್ನಕೇಶವಲು, ಶಿವಾ ಮತ್ತು ನವೀನ್ ಅವರ ಕುಟುಂಬಗಳು ಕೆಳ ಮಧ್ಯಮ ವರ್ಗದ ಕುಟುಂಬಗಳು. ಆದರೆ, ಇವರು ಮಾಡಿರುವ ಘೋರ ಅಪರಾಧಕ್ಕೆ ಇದೀಗ ಅವರು ಕುಟುಂಬಸ್ಥರು ಸಮಾಜದ ನಡುವೆ ತಲೆ ತಗ್ಗಿಸಿ ಭಯದ ವಾತಾವರಣದಲ್ಲಿ ಹೆಣಗಾಡುತ್ತಾ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಈ ನಾಲ್ಕೂ ಜನರ ಕುಟುಂಬಗಳು ಸ್ವತಃ ತಮ್ಮ ಮಕ್ಕಳ ಸಾವನ್ನೇ ಭಯಸುವಂತಾಗಿದೆ. ಈ ಕುರಿತು ಮಾಧ್ಯಮಗಳು ಆರೋಪಿ ಚನ್ನಕೇಶವಲು ಅವರ ತಾಯಿಯನ್ನು ಪ್ರಶ್ನಿಸಿದಾಗ, “ನನಗೂ ಮಗಳಿದ್ದಾಳೆ. ಸಾಯುವಾಗ ಪಶುವೈದ್ಯೆ ಅನುಭವಿಸಿದ ನೋವು ನನಗೆ ಅರ್ಥವಾಗುತ್ತದೆ. ಅವನನ್ನು ಗಲ್ಲಿಗೇರಿಸಿ, ಶೂಟ್ ಮಾಡಿ ಸಾಯಿಸಿ” ಎಂದು ಹೇಳುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

“ಚನ್ನಕೇಶವಲು ಅವರ ಕುಟುಂಬ ಗ್ರಾಮದಲ್ಲಿ ಶಿಸ್ತುಬದ್ಧ ಜೀವನ ನಡೆಸುತ್ತಿತ್ತು. ಆದರೆ, ಈತನ ಕೃತ್ಯದಿಂದಾಗಿ ಇಡೀ ಕುಟುಂಬ ಇದೀಗ ಜನರನ್ನು ಎದುರಿಸಲು ಸಾಧ್ಯವಿಲ್ಲದಂತಾಗಿದೆ” ಎಂದು ವಿಷಾಧ ವ್ಯಕ್ತಪಡಿಸುತ್ತಾರೆ ಇದೇ ಕುಟುಂಬದ ಮತ್ತೊಬ್ಬ ಸದಸ್ಯರು.

ಮತ್ತೊಬ್ಬ ಆರೋಪಿ ಮೊಹಮ್ಮದ್ ಅವರ ಪೋಷಕರ ಮಾತನಾಡಿ, “ಕೃತ್ಯ ನಡೆದ ಅದೇ ದಿನ ಆತ ಮನೆಗೂ ಬಂದಿದ್ದ. ಏನು ನಡೆದಿದೆ ಎಂಬುದು ದೇವರಿಗೆ ಮಾತ್ರ ತಿಳಿದಿದೆ. ಹೀಗಾಗಿ ನೀವು ಆತನನ್ನು ಏನು ಬೇಕಾದರೂ ಮಾಡಿ, ಯಾವ ಶಿಕ್ಷೆಯನ್ನು ಬೇಕಾದರೂ ನೀಡಿ” ಎಂದು ಹೇಳಿದ್ದಾರೆ. ಇನ್ನೂ ಆರೋಪಿ ಶಿವ ಅವರ ತಾಯಿಯೂ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ತೆಲಂಗಾಣದ ಪಶುವೈದ್ಯೆ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಎಲ್ಲಾ ಆರೋಪಿಗಳು ಲಾರಿ ಕಾರ್ಮಿಕರಾಗಿದ್ದು, 20 ರಿಂದ 24 ವಯಸ್ಸಿನವರಾಗಿದ್ದಾರೆ. ಘಟನೆ ಸಂಬಂಧ ನವೆಂಬರ್ 29ರಂದು ಈ ಎಲ್ಲರನ್ನೂ ಬಂಧಿಸಿ ಶನಿವಾರದವರೆಗೆ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಈ ಘಟನೆಯನ್ನು ವಿರೋಧಿಸಿ ತೆಲಂಗಾಣ ಸೇರಿದಂತೆ ದೇಶದ ವಿವಿಧೆಡೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ : ವೆಟರಿನರಿ ವೈದ್ಯೆ ಕೇಸ್​​: ತ್ವರಿತ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ಪೂರ್ಣಗೊಳಿಸುವಂತೆ ಸಿಎಂ ಕೆಸಿಆರ್​​ ಸೂಚನೆ 
First published: December 2, 2019, 9:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading