Rajasthan congress :ರಾಜಸ್ಥಾನ​ ಶಾಸಕರಿಗೆ ಸರ್ಕಾರದ ಬಗ್ಗೆ ಪರೀಕ್ಷೆ ಬರೆಸಲಿದೆ ಕಾಂಗ್ರೆಸ್​ ಹೈಕಮಾಂಡ್​!!

ಈ ವಾರದ ಆರಂಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚಿನ್​​ ಪೈಲಟ್ ಅವರು ಪಕ್ಷದಲ್ಲಿ ಎದ್ದಿರುವ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಮತ್ತು "ನಮ್ಮ ಹೈಕಮಾಂಡ್​ ಸರ್ಕಾರ ಮತ್ತು ಪಕ್ಷದ ಸಂಘಟನೆಯ ಸುಧಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎನ್ನುವ ಭರವಸೆ ಇಟ್ಟಿದ್ದೇನೆ" ಎಂದು ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಎಐಸಿಸಿ ರಾಜಸ್ಥಾನ ಉಸ್ತುವಾರಿ ವಹಿಸಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಅವರು ಬುಧವಾರ ಜೈಪುರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರೊಂದಿಗೆ ಪರಸ್ಪರ ಮಾತುಕತೆ ಆರಂಭಿಸಿದರು. ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷದ ಬೆಳವಣಿಗೆ ಹಾಗೂ ಇತರೇ ವಿಷಯಗಳ ಕುರಿತು ಎಲ್ಲರಿಗೂ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಪರೀಕ್ಷೆ ಆಯೋಜಿಸುವ ಆಲೋಚನೆ ಹಾಗೂ  ಪಕ್ಷದ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಅಧ್ಯಕ್ಷರ ನೇಮಕ ಸುತ್ತ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

  ಕ್ಯಾಬಿನೆಟ್ ಪುನರ್​ರಚನೆ ಕುರಿತಾಗಿ ಅಜಯ್​ ಮಾಕನ್ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಶನಿವಾರ ರಾತ್ರಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಸಭೆ ನಡೆಸಿದ್ದರು.


  ಶಾಸಕರಿಗೆ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಅದರಲ್ಲಿ ಅವುಗಳಿಗೆ ಉತ್ತರಿಸುವಂತೆ ಹೇಳಲಾಗಿದೆ. ತಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ಷಮತೆ, ಸರ್ಕಾರದ ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೊಂಡಿರುವುದು ಮತ್ತು ಜಿಲ್ಲಾ ಅಥವಾ ಬ್ಲಾಕ್ ಕಾಂಗ್ರೆಸ್​ ಅಧ್ಯಕ್ಷರಿಗೆ ಸಂಬಂಧಿಸಿದ ಅಭಿಪ್ರಾಯಗಳು, ಸರ್ಕಾರಕ್ಕೆ ಸಲಹೆಗಳು ಸೇರಿದಂತೆ ಇನ್ನೂ ಅನೇಕ ರೀತಿಯ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಹೇಳಲಾಗಿದೆ.

  ಕಾಂಗ್ರೆಸ್​ ಉಸ್ತುವಾರಿ ತನ್ನ ಶಾಸಕರಿಗೆ ಕೇಳಿರುವ ಪ್ರಶ್ನೆಗಳ ಪಟ್ಟಿ ಇಲ್ಲಿದೆ:

  1. ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರ ಕಾರ್ಯಕ್ಷಮತೆ ಹೇಗೆ? ಸಚಿವರ ವಿರುದ್ಧ ನಿಮ್ಮಲ್ಲಿ ಏನಾದರೂ ದೂರು ಇದೆಯೇ?

  2. ಸರ್ಕಾರದ ಯೋಜನೆಗಳು ಹೇಗೆ ನಡೆಯುತ್ತಿವೆ? ಮುಖ್ಯಮಂತ್ರಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ?

  3. ಈ ಸರ್ಕಾರವನ್ನು ಮತ್ತೆ  ಅಧಿಕಾರದಲ್ಲಿ ಕೂರಿಸಬಹುದೇ. ನೀವು ಸರ್ಕಾರದ ಬಗ್ಗೆ ಯಾವುದಾದರೂ ಸಲಹೆಗಳನ್ನು ಹೊಂದಿದ್ದೀರಾ?

  4. ನಿಮ್ಮ ಅಸೆಂಬ್ಲಿ ಪ್ರದೇಶದಿಂದ ರಾಜಕೀಯ ನೇಮಕಾತಿಗಳಿಗೆ ನೀವು ಯಾವ ಹೆಸರನ್ನು ಸೂಚಿಸುತ್ತೀರಾ?

  5. ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷರಿಗೆ ಯಾರ ಹೆಸರು ಸೂಚಿಸುತ್ತೀರಾ?

  6. ಬ್ಲಾಕ್ ಕಾಂಗ್ರೆಸ್​ ಅಧ್ಯಕ್ಷರಿಗೆ ಯಾರ ಹೆಸರು ಸೂಚಿಸುತ್ತೀರಾ?

  7. ಸರ್ಕಾರ ಅಥವಾ ಪಕ್ಷದ ಬಗ್ಗೆ ನಿಮ್ಮಲ್ಲಿ ಯಾವುದಾದರೂ ದೂರುಗಳು ಇದೆಯೇ?

  ಕ್ಯಾಬಿನೆಟ್ ಪುನರ್​ರಚನೆಯ ಬಗ್ಗೆ ಯಾವುದೇ ಸಂಘರ್ಷವಿಲ್ಲ ಎಂದು ಪಕ್ಷದ ಮುಖಂಡರು ಹೇಳಿದ್ದು, ಮುಖ್ಯಮಂತ್ರಿಯ ಜೊತೆ ಚರ್ಚಿಸಿದ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಪಕ್ಷದ ಹೈಕಮಾಂಡ್‌ಗೆ ಬಿಡಲಾಗಿದೆ.

  ವರದಿಗಳ ಪ್ರಕಾರ, ಕೆಲವು ಮಂತ್ರಿಗಳು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಗಬಹುದು. ಕ್ಯಾಬಿನೆಟ್ ಪುನರ್ರಚನೆಯ ನಿರ್ಧಾರವನ್ನು ಕೇಂದ್ರ ನಾಯಕತ್ವಕ್ಕೆ ಸಿಎಂ ಗೆಹ್ಲೋಟ್ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ವಿಷಯದಲ್ಲಿ ಅಂತಿಮ ಆದೇಶಕ್ಕೆ ಕಾಯುತ್ತಿರುವುದಾಗಿ ಹೇಳಲಾಗುತ್ತಿದೆ.


  ಪ್ರಮುಖ ನಾಯಕರಾದ ರಾಜ್ಯ ಶಿಕ್ಷಣ ಸಚಿವ ಮತ್ತು ರಾಜ್ಯ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ ಗುರುವಾರ ನಡೆದ ಸಭೆಯ ನಂತರ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಗಬಹುದು ಎಂದು ಹೇಳಲಾಗಿದೆ. ಆದರೆ, ಅಜಯ್ ಮಾಕೆನ್ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಸ್ವಾಗತಿಸಲು ಗುರುವಾರ ಸಭೆ ಕರೆಯಲಾಗಿದೆ ಎಂದು ದೋಟಾಸ್ರಾ ಹೇಳಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಸಂಪುಟ ಪುನರ್​ರಚನೆ ನಡೆಯಬಹುದು ಎಂದು ಹೇಳಲಾಗುತ್ತಿದೆ.

  ಯುವ ನಾಯಕ ಸಚಿನ್​ ಪೈಲಟ್ ಮತ್ತು ಇತರ ಹಲವಾರು ಶಾಸಕರು ಕಳೆದ ವರ್ಷದ ಜೂನ್‌ನಲ್ಲಿ ಗೆಹ್ಲೋಟ್ ವಿರುದ್ಧ ಬಹಿರಂಗ ದಂಗೆ ಎದ್ದಿದ್ದರು. ಒಂದು ತಿಂಗಳ ಕಾಲ ನಡೆದ ಈ ಘರ್ಷಣೆಯ ನಂತರ, ಪೈಲಟ್ ಎತ್ತಿದ ಸಮಸ್ಯೆಗಳನ್ನು ಪರಿಶೀಲಿಸಲು ಕಾಂಗ್ರೆಸ್ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು, ಒಂದಷ್ಟು ಜನ ಯುವ ನಾಯಕರನ್ನು ಗೆಹ್ಲೋಟ್ ಸರ್ಕಾರವು ತುಳಿಯುತ್ತಿದೆ ಎಂದು ಆರೋಪಿಸಿದ್ದರು.

  ಇದನ್ನೂ ಓದಿ: Raj Kundra ನನಗೆ ಬಲವಂತವಾಗಿ ಕಿಸ್ ಮಾಡೋಕೆ ಬಂದಿದ್ದ, ಹೆದರಿ ಬಾತ್​​ರೂಂನಲ್ಲಿ ಅಡಗಿಕೊಂಡಿದ್ದೆ; ಶಾಕಿಂಗ್ ಹೇಳಿಕೆ ನೀಡಿದ Sherlyn Chopra!

  ಈ ವಾರದ ಆರಂಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚಿನ್​​ ಪೈಲಟ್ ಅವರು ಪಕ್ಷದಲ್ಲಿ ಎದ್ದಿರುವ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಮತ್ತು "ನಮ್ಮ ಹೈಕಮಾಂಡ್​ ಸರ್ಕಾರ ಮತ್ತು ಪಕ್ಷದ ಸಂಘಟನೆಯ ಸುಧಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎನ್ನುವ ಭರವಸೆ ಇಟ್ಟಿದ್ದೇನೆ" ಎಂದು ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: