ಹೈದರಾಬಾದ್: ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ (Dr BR Ambedkar) ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದ ಮೇಲೆ ತೆಲಂಗಾಣ (Telagana) ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಿಡಿಗೇಡಿಯನ್ನು ಹಮಾರಾ ಪ್ರಸಾದ್ (Hamara Prasad) ಎಂದು ಗುರುತಿಸಲಾಗಿದ್ದು, ಈತ ‘ಅಂಬೇಡ್ಕರ್ ಏನಾದರೂ ಬದುಕಿರುತ್ತಿದ್ದರೆ ಗಾಂಧಿಯನ್ನು (Gandhiji) ಗೋಡ್ಸೆ (Godse) ಕೊಂದಂತೆ ಕೊಲ್ಲುತ್ತಿದ್ದೆ’ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾನೆ. ಅಂಬೇಡ್ಕರ್ ಕುರಿತ ಪುಸ್ತಕವೊಂದನ್ನು ಹಿಡಿದುಕೊಂಡು ವಿಡಿಯೋ ರೆಕಾರ್ಡ್ ಮಾಡಿರುವ ಈತನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಡಾ.ಬಿ ಆರ್ ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಿ ಹಮಾರಾ ಪ್ರಸಾದ್ ವಿರುದ್ಧ ಬಹುಜನ ಸಮಾಜ ಪಾರ್ಟಿಯ ತೆಲಂಗಾಣ ಘಟಕದ ಮುಖ್ಯಸ್ಥ ಆರ್ ಎಸ್ ಪ್ರವೀಣ್ ಕುಮಾರ್ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದು, ಆಗ ಈ ವಿಡಿಯೋ ಕುರಿತು ಜನರಿಗೆ ತಿಳಿದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ಹಮಾರಾ ಪ್ರಸಾದ್ ತೆಲಂಗಾಣದಲ್ಲಿ ಕಾರ್ಯಾಚರಿಸುತ್ತಿರುವ ಹಿಂದುತ್ವ ಪರ ಸಂಘಟನೆಯೊಂದರ ನಾಯಕ ಎಂದು ತಿಳಿದು ಬಂದಿದೆ.
ಆರೋಪಿ ಖಾಕಿ ಬಲೆಗೆ
ಪ್ರಕರಣದ ಗಂಭೀರತೆ ಅರಿತ ಹೈದರಾಬಾದ್ ಪೊಲೀಸರು ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಿ ಹಮಾರಾ ಪ್ರಸಾದ್ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ. ಆತನ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಮತ್ತು 505 (2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Shocking News: 58 ವರ್ಷದ ಮಹಿಳೆಯ ಭೀಕರ ಕೊಲೆ, ಶವದ ಮೇಲೆ ಅತ್ಯಾಚಾರ ಮಾಡಿದ 16ರ ಬಾಲಕ!
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣದೊಂದಿಗೆ ಪತ್ನಿಯರು ಎಸ್ಕೇಪ್!
ಲಕ್ನೋ: ನಾಲ್ವರು ವಿವಾಹಿತ ಮಹಿಳೆಯರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣದ ಜೊತೆ ಗಂಡನನ್ನು ಬಿಟ್ಟು ಪ್ರೇಮಿಗಳ ಜೊತೆಗೆ ಓಡಿ ಹೋದ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಡತನ ರೇಖೆಗಿಂತ ಕೆಳಗಿರುವ, ಆರ್ಥಿಕವಾಗಿ ದುರ್ಬಲತೆ ಹೊಂದಿರುವ, ಕಡಿಮೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಗೃಹ ನಿರ್ಮಾಣಕ್ಕೆ ಹಣ ಒದಗಿಸುವ ಯೋಜನೆ PMAY ಇದಾಗಿದ್ದು, ಇದೀಗ ಸರ್ಕಾರದಿಂದ ಸಿಕ್ಕಿದ ಹಣದ ಜೊತೆಗೆ ನಾಲ್ವರು ಮಹಿಳೆಯರು ಎಸ್ಕೇಪ್ ಆಗಿರುವುದರಿಂದ ಅತ್ತ ಪತ್ನಿಯೂ ಇಲ್ಲದೆ, ಇತ್ತ ಮನೆಯೂ ಇಲ್ಲದೆ ನಾಲ್ವರ ಗಂಡಂದಿರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: Brain Mapping Test: ಬೆಂಗಳೂರಿಗೆ ಬಂತು ಬ್ರೇನ್ ಮ್ಯಾಪಿಂಗ್ ಟೆಸ್ಟ್! ಅಪರಾಧಿಗಳಿಗೆ ಸಿಂಹಸ್ವಪ್ನವೇ ಈ ಹೊಸ ತಂತ್ರಜ್ಞಾನ?
ತಮ್ಮ ಹೆಂಡ್ತಿಯರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣದೊಂದಿಗೆ ಪರಾರಿ ಆಗ್ತಿದ್ದಂತೆ ಅತ್ತ ಆ ನಾಲ್ವರು ಮಹಿಳೆಯರ ಗಂಡಂದಿರಿಗೆ ಹೊಸದೊಂದು ಸಮಸ್ಯೆ ಶುರು ಆಗಿದ್ದು, ಅದು ಸರ್ಕಾರದ ಹಣ ಆಗಿರೋದ್ರಿಂದ ಮನೆ ನಿರ್ಮಾಣ ಇನ್ನೂ ಮಾಡದೇ ಇರೋದಕ್ಕೆ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮನೆ ನಿರ್ಮಾಣ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ಗಂಡಂದಿರು ಖಾತೆಯಿಂದ ಯಾವುದೇ ಹಣ ಪಡೆಯದೇ ಇರೋದ್ರಿಂದ ಮನೆ ನಿರ್ಮಾಣ ಮಾಡೋದಕ್ಕೆ ಆಗಿಲ್ಲ. ಇದರಿಂದ ಗೊಂದಲಕ್ಕೆ ಒಳಗಾದ ಗಂಡಂದಿರಿಗೆ ಏನು ಮಾಡಬೇಕು ಅನ್ನೋದೇ ತೋಚುತ್ತಿಲ್ಲ. ಹೀಗಾಗಿ ತನ್ನನ್ನು ತೊರೆದು ಪರಾರಿ ಆದ ಪತ್ನಿಯ ಬ್ಯಾಂಕ್ ಖಾತೆಗೆ ಮುಂದಿನ ಕಂತನ್ನು ಕಳುಹಿಸದಂತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಬೇಕಾದರೆ ಆಯಾ ಕುಟುಂಬದ ಮಹಿಳಾ ಮುಖ್ಯಸ್ಥರ ಹೆಸರಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೀಗಾಗಿ ಆ ನಾಲ್ಕು ಕುಟುಂಬದ ಸದಸ್ಯರು ಕೂಡ ತಮ್ಮ ಪತ್ನಿಯ ಹೆಸರಲ್ಲೇ ಪಿಎಂಎವೈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅದರನ್ವಯ ತಮ್ಮ ಬ್ಯಾಂಕ್ ಖಾತೆಗೆ 50,000 ರೂಪಾಯಿ ಜಮಾ ಆಗುತ್ತಿದ್ದಂತೆ ತಮ್ಮ ಗಂಡನನ್ನು ತೊರೆದು ಪ್ರೇಮಿಯ ಜೊತೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ