• Home
 • »
 • News
 • »
 • national-international
 • »
 • Mass Cardiac Arrest: ಹಬ್ಬದ ಖುಷಿಯಲ್ಲಿದ್ದ ನೂರಾರು ಜನರಿಗೆ ಒಟ್ಟಿಗೆ ಹಾರ್ಟ್ ಅಟ್ಯಾಕ್; 149 ಮಂದಿ ಭೀಕರ ಸಾವು

Mass Cardiac Arrest: ಹಬ್ಬದ ಖುಷಿಯಲ್ಲಿದ್ದ ನೂರಾರು ಜನರಿಗೆ ಒಟ್ಟಿಗೆ ಹಾರ್ಟ್ ಅಟ್ಯಾಕ್; 149 ಮಂದಿ ಭೀಕರ ಸಾವು

ಘಟನೆಯ ದೃಶ್ಯ

ಘಟನೆಯ ದೃಶ್ಯ

Halloween crowd Mass Cardiac Arrest: ರಸ್ತೆಯಲ್ಲಿ ನಿಂತಿದ್ದ ಜನರು ಹಿಂದಿನಿಂದ ಮುಂದಿದ್ದ ಜನರು ಇನ್ನಷ್ಟು ಮುಂದಕ್ಕೆ ತಳ್ಳಲು ಆರಂಭಿಸಿದರು. ಇದರಿಂದಲೇ ಈ ಭೀಕರ ದುರ್ಘಟನೆ ಸಂಭವಿಸಿತು ಎಂದು ಹೇಳಲಾಗಿದೆ.

 • News18 Kannada
 • Last Updated :
 • New Delhi, India
 • Share this:

  ಸಿಯೋಲ್: ಕಿರಿದಾದ ಬೀದಿಯಲ್ಲಿ ಹ್ಯಾಲೋವೀನ್ ಹಬ್ಬ ಆಚರಿಸುತ್ತಿದ್ದ (Halloween Festivities) ನೂರಾರು ಜನರಿಗೆ ಒಮ್ಮೆಲೆ ಹೃದಯ ಸ್ತಂಭನಕ್ಕೆ ಈಡಾದ ಘಟನೆ ದಕ್ಷಿಣ ಕೊರಿಯಾದ (South Korea Mass  Cardiac Arrest) ರಾಜಧಾನಿ ಸಿಯೋಲ್‌ನಲ್ಲಿ ಸಂಭವಿಸಿದೆ. ಈ ದುರ್ಘಟನೆಯಿಂದ 149 ಜನರು ಮೃತಪಟಟಿದ್ದಾರೆ. 150 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಈ ಸಾಮೂಹಿಕ ಹೃದಯಾಘಾತದ ವಿಡಿಯೋ ಸದ್ಯ ವೈರಲ್ ಆಗಿದ್ದು ದಿಗ್ಭ್ರಮೆ ಹುಟ್ಟಿಸಿದೆ.

  ಸಿಯೋಲ್‌ನ ಪ್ರಮುಖ ಪಾರ್ಟಿ ಸ್ಥಳವಾದ ಹ್ಯಾಮಿಲ್ಟನ್ ಹೋಟೆಲ್ ಬಳಿಯ ಕಿರಿದಾದ ರಸ್ತೆಯಲ್ಲಿ ಹ್ಯಾಲೋವೀನ್ ಹಬ್ಬ ಆಚರಿಸಲಾಗುತ್ತಿತ್ತು. ರಸ್ತೆಯಲ್ಲಿ ನಿಂತಿದ್ದ ಜನರು ಹಿಂದಿನಿಂದ ಮುಂದಿದ್ದ ಜನರು ಇನ್ನಷ್ಟು ಮುಂದಕ್ಕೆ ತಳ್ಳಲು ಆರಂಭಿಸಿದರು. ಇದರಿಂದಲೇ ಈ ಭೀಕರ ದುರ್ಘಟನೆ ಸಂಭವಿಸಿತು ಎಂದು ಹೇಳಲಾಗಿದೆ.


  ಸಿಯೋಲ್​ನ ಇಟಾವಾನ್ ಬೀದಿಗಳಲ್ಲಿ ಡಜನ್‌ಗಟ್ಟಲೆ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತರರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


  ಇದನ್ನೂ ಓದಿ: Unilever: ಡವ್‌, ಟ್ರೆಸೆಮೆ ಶ್ಯಾಂಪೂವಿನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ, US ನಲ್ಲಿ ಶ್ಯಾಂಪೂಗಳನ್ನು ಹಿಂಪಡೆದ ಯುನಿಲಿವರ್‌


  ಸ್ಥಳೀಯ ಪೋಲೀಸ್ ಅಧಿಕಾರಿಯೊಬ್ಬರು, ಹ್ಯಾಲೋವೀನ್ ಹಬ್ಬಗಳಿಗಾಗಿ ಜನಸಂದಣಿಯು ನೆರೆದಿದ್ದ ಇಟಾವೊನ್‌ನ ಬೀದಿಯಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿಸಲಾಗಿದೆ ಎಂದು ಹೇಳಿದರು. ಘಟನೆಯ ವಿವರಗಳು ಇನ್ನೂ ತನಿಖೆಯಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.


  ಸೆಲಿಬ್ರಿಟಿ ಭೇಟಿಗೆ ಕಿಕ್ಕಿರಿದ ಜನರು
  ಅಪರಿಚಿತ ಸೆಲೆಬ್ರಿಟಿಯೊಬ್ಬರು ಅಲ್ಲಿಗೆ ಭೇಟಿ ನೀಡಿರುವುದನ್ನು ಕೇಳಿದ ನಂತರ ಹೆಚ್ಚಿನ ಸಂಖ್ಯೆಯ ಜನರು ಇಟಾವಾನ್ ಬಾರ್‌ಗೆ ಧಾವಿಸಿದ್ದಾರೆ. ಇದರಿಂದ ನೂಕುನುಗ್ಗಲು ಶುರುವಾಗಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.


  ಇದನ್ನೂ ಓದಿ: China: ಭಾರತದ ವಿರುದ್ಧ ನಡೆಯುತ್ತಿದೆ ದೊಡ್ಡ ಷಡ್ಯಂತ್ರ: ಬಂಧಿತ ಚೀನಾ ಮಹಿಳಾ ಗೂಢಚಾರಿಣಿಯಿಂದ ಬಹಿರಂಗ!


  ತನಿಖೆಗೆ ಆದೇಶ
  ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಸಿಯೋಲ್‌ನಲ್ಲಿ ಸಂತೃಸ್ತರನ್ನು ತ್ವರಿತವಾಗಿ ಗುರುತಿಸಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಯೂನ್ ತಕ್ಷಣವೇ ತುರ್ತು ನಿರ್ವಹಣಾ ಪ್ರಧಾನ ಕಛೇರಿಯನ್ನು ಸಕ್ರಿಯಗೊಳಿಸಿದ್ದಾರೆ. ಘಟನೆಯ ಕಾರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ಆಂತರಿಕ ಮತ್ತು ಸುರಕ್ಷತಾ ಸಚಿವರಿಗೆ ಆದೇಶಿಸಿದ್ದಾರೆ ಎಂದು ಅಧ್ಯಕ್ಷರ ಉನ್ನತ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಿಮ್ ಯುನ್-ಹೈ ಮಾಹಿತಿ ನೀಡಿದ್ದಾರೆ.


  ಹೆಚ್ಚಾಗಬಹುದು ಸಾವಿನ ಸಂಖ್ಯೆ
  ಸಿಯೋಲ್ ಹ್ಯಾಲೋವೀನ್ ತುರ್ತುಸ್ಥಿತಿಯಿಂದ ಗಾಯಗೊಂಡ ಜನರಿಗೆ ಸ್ಥಳೀಯ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿವೆಯಾದರೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗಳು ಮತ್ತು ಸಾವುಗಳಿಗೆ ಕಾರಣವನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ ಎಂದು ಯೋಂಗ್ಸಾನ್ ಆರೋಗ್ಯ ಕೇಂದ್ರದ ಮುಖ್ಯಸ್ಥ ಚೋಯ್ ಜೇ-ವಾನ್ ಅಧಿಕೃತ ಮಾಹಿತಿ ನೀಡಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published: