ಚಲಿಸುವ ಕಾರಿನಿಂದ ಬಿದ್ದ ಅರೆಬೆತ್ತಲೆ ಮಹಿಳೆ ದೇಹ: ಕೊಯಮತ್ತೂರಿನಲ್ಲಿ ಭಯಾನಕ ಘಟನೆ

ಸ್ಕಾರ್ಪಿಯೋ ಕಾರಿನಿಂದ ಅರೆನಗ್ನ ಮಹಿಳೆಯ ದೇಹವೊಂದನ್ನ ದುಷ್ಕರ್ಮಿಗಳು ರಸ್ತೆ ಮಧ್ಯೆಯೇ ಬಿಸಾಡಿ ಹೋದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಹಿಂದಿನಿಂದ ಬರುತ್ತಿದ್ದ ವಾಹನಗಳಿಗೆ ಸಿಕ್ಕು ಆ ಮಹಿಳೆಯ ಮುಖ ಗುರುತು ಸಿಗದಷ್ಟು ಘಾಸಿಗೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಚೆನ್ನೈ, ಸೆ. 07: ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಂಗಳವಾರ ಬೆಳಗಿನ ಜಾವ ನಡೆದ ಭೀಕರ ಘಟನೆಯೊಂದರಲ್ಲಿ ಮಹಿಳೆಯೊಬ್ಬಳ ದೇಹ ರಸ್ತೆ ಮಧ್ಯದಲ್ಲಿ ಪತ್ತೆಯಾಗಿದೆ. ಚಲಿಸುವ ಕಾರೊಂದರಿಂದ ಈಕೆಯ ದೇಹವನ್ನ ಹೊರಗೆಸೆಯಲಾಗಿದೆ. ಇದೊಂದು ಅತ್ಯಾಚಾರ ಮತ್ತು ಕೊಲೆಯ ಪ್ರಕರಣವಾಗಿರಬಹುದು ಎಂದು ಶಂಕಿಸಲಾಗಿದೆ. ಕೊಯಮತ್ತೂರು ನಗರದ ಅವಿನಾಶಿ ರಸ್ತೆಯ ಚೆನ್ನೈ ಕ್ಯಾಂಪ್ ಬಳಿಯ ಚಿನ್ನಿಯಂ ಪಾಳ್ಯಂ ಚೆಕ್ ಪೋಸ್ಟ್ ಹತ್ತಿರ ಪೊಲೀಸರು ಈ ಮಹಿಳೆಯ ಮೃತ ದೇಹವನ್ನು ಕಂಡಿದ್ದಾರೆ. ಚಲಿಸುವ ಕಾರಿನಿಂದ ಹೊರಗೆಸೆಯಲ್ಪಟ್ಟ ಈಕೆಯ ದೇಹದ ಮೇಲೆ ಹಿಂದಿನಿಂದ ಬಂದ ವಾಹನಗಳೂ ಹತ್ತಿಸಿಕೊಂಡು ಹೋಗಿವೆ. ಪರಿಣಾಮವಾಗಿ ಈಕೆಯ ತಲೆ ಮತ್ತು ಮುಖ ಅಪ್ಪಚ್ಚಿಯಾಗಿದೆ. ಹೀಗಾಗಿ, ಈಕೆಯ ಗುರುತು ಸಿಕ್ಕದಂತಾಗಿದೆ.

  ರಸ್ತೆಯಲ್ಲಿ ಸಾಗುತ್ತಿದ್ದ ಕೆಲ ವಾಹನ ಸವಾರರು ಈ ಮೃತ ದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ. ಬಳಿಕ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮೊದಲು ಇದು ಅಪಘಾತ ಘಟನೆ ಇರಬಹುದು. ಮಹಿಳೆ ರಸ್ತೆ ದಾಟುವಾಗ ಅಪಘಾತವಾಗಿದ್ದಿರಬಹುದು ಎಂದು ಶಂಕಿಸಿದ್ದರು. ಆದರೆ, ರಸ್ತೆಯ ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿತ್ತು. ಅದನ್ನು ಪರಿಶೀಲಿಸಿದಾಗ, ಸ್ಕಾರ್ಪಿಯೋ ಕಾರಿನಿಂದ ಈಕೆಯ ಅರೆಬೆತ್ತಲೆ ಮೃತ ದೇಹವನ್ನು ಹೊರಗೆ ಎಸೆಯಲಾಗಿರುವುದು ಬೆಳಕಿಗೆ ಬಂದಿದೆ. ಈಕೆಯನ್ನ ಕಾರಿನಿಂದ ಹೊರಗೆ ಎಸೆಯುವಾಗ ಮಹಿಳೆ ಜೀವಂತವಾಗಿದ್ದಳಾ? ಅಥವಾ ಮೊದಲೇ ಕೊಲೆ ಮಾಡಿ ನಂತರ ಶವವನ್ನು ಎಸೆಯಲಾಗಿತ್ತಾ ಎಂಬುದು ಇನ್ನೂ ಗೊತ್ತಾಗಿಲ್ಲ.

  ಸದ್ಯ ಪೊಲೀಸರು ಈ ಅಪರಿಚಿತ ಮಹಿಳೆಯ ಮೃತ ದೇಹವನ್ನು ಕೊಯಮತ್ತೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದ್ದು ಅಲ್ಲಿ ಶವಪರೀಕ್ಷೆ ನಡೆಸಲಾಗಿದೆ. ಪೀಲಮೇಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ಧಾರೆ. ಮೃತ ಮಹಿಳೆಯ ದೇಹ ಅರೆನಗ್ನ ಸ್ಥಿತಿಯಲ್ಲಿದ್ದರಿಂದ ಈಕೆಯನ್ನ ಕಾರಿನಲ್ಲಿ ರೇಪ್ ಮಾಡಿ ಕೊಲೆ ಮಾಡಲಾಯಿತಾ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾಎರ. ಸದ್ಯಕ್ಕೆ ಎರಡು ವಿಶೇಷ ತಂಡಗಳನ್ನ ರಚಿಸಲಾಗಿದ್ದು, ಸ್ಕಾರ್ಪಿಯೋ ಕಾರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ.

  ಇದನ್ನೂ ಓದಿ: Crime News: ಅಂಗಡಿ ಮಾಲೀಕನ ಹೆಂಡತಿ ಜೊತೆ ಮಲಗಲು 10 ಸಾವಿರ ಆಫರ್​ ಕೊಟ್ಟ 80 ವರ್ಷದ ಮುದುಕ: ಆಮೇಲೇನಾಯ್ತು?

  ಘಾಜಿಯಾಬಾದ್​ನಲ್ಲಿ ಕಾರು ಅಪಘಾತಕ್ಕೆ ಐವರು ಬಲಿ: ಇವತ್ತು ದೆಲ್ಲಿ ಮೀರತ್ ಎಕ್ಸ್​ಪ್ರೆಸ್ ವೇ ಹೆದ್ದಾರಿಯಲ್ಲಿ ಸಂಭವಿಸಿದ ಮತ್ತೊಂದು ಅವಘಡದಲ್ಲಿ ಐವರು ವ್ಯಕ್ತಿಗಳು ಸಾವನ್ನಪ್ಪಿದ್ಧಾರೆ. ಉತ್ತರ ಪ್ರದೇಶದ ಘಾಜಿಯಾಬಾದ್​ನ ಮಸೂರಿ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಟ್ರಕ್​ಗೆ ಕಾರು ಗುದ್ದಿದೆ. ಕಾರಿನಲ್ಲಿದ್ದ ಏಳು ಮಂದಿ ಪೈಕಿ ಐವರು ಮೃತಪಟ್ಟಿದ್ಧಾರೆ. ಈ ಕಾರಿನಲ್ಲಿ ಎರಡು ಕುಟುಂಬಗಳ ಸದಸ್ಯರಿದ್ದರೆನ್ನಲಾಗಿದೆ. ಉತ್ತರಾಖಂಡ್​ನ ಹರಿದ್ವಾರದಿಂದ ಇವರು ಘಾಜಿಯಾಬಾದ್​ಗೆ ಮರಳುತ್ತಿದ್ಧಾಗ ಅಪಘಾತವಾಗಿದೆ. ಉತ್ತರ ಪ್ರದೇಶ ಮತ್ತು ದೆಹಲಿಯನ್ನು ಸಂಪರ್ಕಿಸುವ ದೆಹಲಿ ಮೀರತ್ ಎಕ್ಸ್ ಪ್ರೆಸ್ ವೇ ಹೆದ್ದಾರಿ ಇನ್ನೂ ಅಧಿಕೃತವಾಗಿ ಉದ್ಘಾಟನೆಯಾಗದಿದ್ದರೂ ಇದೇ ಏಪ್ರಿಲ್ ತಿಂಗಳಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)
  Published by:Vijayasarthy SN
  First published: