HOME » NEWS » National-international » HALF KG HAIR AND SHAMPOO PACKET REMOVED FROM GIRLS STOMACH IN TAMIL NADU COIMBATORE SCT

ಹೊಟ್ಟೆನೋವಿನಿಂದ ನರಳುತ್ತಿದ್ದ ಬಾಲಕಿಗೆ ಆಪರೇಷನ್ ಮಾಡಿದ ವೈದ್ಯರಿಗೆ ಕಾದಿತ್ತು ಶಾಕ್!

ಕೆಲ ತಿಂಗಳಿನಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 7ನೇ ತರಗತಿಯ ವಿದ್ಯಾರ್ಥಿನಿಯನ್ನು ಆಕೆಯ ಪೋಷಕರು ವಿಜಿಎಂ ಆಸ್ಪತ್ರೆಗೆ ಕರೆತಂದಿದ್ದರು. ಸ್ಕ್ಯಾನಿಂಗ್​ನಲ್ಲಿ ಬಾಲಕಿಯ ಹೊಟ್ಟೆಯಲ್ಲಿ ​ಚೆಂಡಿನಂತಹ ಗಟ್ಟಿಯಾದ ವಸ್ತುಇರುವುದು ಕಂಡು ಬಂದಿತ್ತು.

Sushma Chakre | news18-kannada
Updated:January 28, 2020, 3:51 PM IST
ಹೊಟ್ಟೆನೋವಿನಿಂದ ನರಳುತ್ತಿದ್ದ ಬಾಲಕಿಗೆ ಆಪರೇಷನ್ ಮಾಡಿದ ವೈದ್ಯರಿಗೆ ಕಾದಿತ್ತು ಶಾಕ್!
ಸಾಂದರ್ಭಿಕ ಚಿತ್ರ
  • Share this:
ಕೊಯಮತ್ತೂರು (ಜ. 28): ತಮಿಳುನಾಡಿನ ಕೊಯಮತ್ತೂರಿನ ಬಾಲಕಿಗೆ ಇತ್ತೀಚೆಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಆಕೆಗೆ ಏನಾದರೂ ದೊಡ್ಡ ರೋಗವಿರಬಹುದು ಎಂದು ಗಾಬರಿಯಿಂದ ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರಿಗೆ ಮೇಲ್ನೋಟಕ್ಕೆ ಯಾವುದೇ ಸಮಸ್ಯೆಯೂ ಆಕೆಯಲ್ಲಿ ಕಂಡುಬರಲಿಲ್ಲ. ಆದರೆ, ಹೊಟ್ಟೆನೋವಿನಿಂದ ನರಳುತ್ತಿದ್ದ ಆಕೆಯ ನೋವಿನ ಕಾರಣವನ್ನು ತಿಳಿಯಲೇಬೇಕಿತ್ತು. ಹೀಗಾಗಿ, ಸ್ಕ್ಯಾನಿಂಗ್ ರಿಪೋರ್ಟ್​ ನೋಡಿ ಅನುಮಾನದಿಂದ ಆಪರೇಷನ್ ಮಾಡಿದ ವೈದ್ಯರೇ ಶಾಕ್ ಆಗಿದ್ದಾರೆ!

ವೈದ್ಯರು ಶಾಕ್ ಆಗಲು ಕಾರಣವೇನೆಂದು ಯೋಚಿಸುತ್ತಿದ್ದೀರಾ? ಹೊಟ್ಟೆನೋವಿನಿಂದ ಆಸ್ಪತ್ರೆಗೆ ಬಂದಿದ್ದ ಆ 13 ವರ್ಷದ ಬಾಲಕಿಯ ಹೊಟ್ಟೆಯಲ್ಲಿದ್ದಿದ್ದು ಯಾವುದೋ ಗಡ್ಡೆಯಲ್ಲ. ಬದಲಾಗಿ ಆಕೆಯ ಹೊಟ್ಟೆಯಲ್ಲಿ ಅರ್ಧ ಕೆಜಿ ಕೂದಲು ಮತ್ತು ಖಾಲಿ ಶಾಂಪೂ ಪ್ಯಾಕೆಟ್ ಸಿಕ್ಕಿದೆ. ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಸಿಂಗನಲ್ಲೂರಿನಲ್ಲಿರುವ ವಿಜಿಎಂ ಆಸ್ಪತ್ರೆಯ ವೈದ್ಯರು ಇಂಥದ್ದೊಂದು ಅಚ್ಚರಿಯ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ: ಶಾಹೀನ್​ ಬಾಗ್​ನ ಪ್ರತಿಭಟನಾಕಾರರು ಮನೆಗೆ ನುಗ್ಗಿ ಅತ್ಯಾಚಾರ ನಡೆಸಬಹುದು; ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

ಕೆಲ ತಿಂಗಳಿನಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 7ನೇ ತರಗತಿಯ ವಿದ್ಯಾರ್ಥಿನಿಯನ್ನು ಆಕೆಯ ಪೋಷಕರು ವಿಜಿಎಂ ಆಸ್ಪತ್ರೆಗೆ ಕರೆತಂದಿದ್ದರು. ಸ್ಕ್ಯಾನಿಂಗ್​ನಲ್ಲಿ ಬಾಲಕಿಯ ಹೊಟ್ಟೆಯಲ್ಲಿ ​ಚೆಂಡಿನಂತಹ ಗಟ್ಟಿಯಾದ ವಸ್ತುಇರುವುದು ಕಂಡು ಬಂದಿತ್ತು. ಅದು ಕ್ಯಾನ್ಸರ್​ ಗಡ್ಡೆ ಇರಬಹುದಾ? ಎಂಬ ಅನುಮಾನವೂ ವೈದ್ಯರನ್ನು ಕಾಡಿತ್ತು. ಎಂಡೋಸ್ಕೋಪಿ ಮೂಲಕ ಆ ವಸ್ತುವನ್ನು ಹೊರ ತೆಗೆಯಲು ವೈದ್ಯರು ಪ್ರಯತ್ನಿಸಿದ್ದರು. ಆದರೆ, ಅದರಲ್ಲಿ ವಿಫಲವಾದ ಕಾರಣ ಆಪರೇಷನ್ ಮಾಡಿದ್ದಾರೆ.

ಬಾಲಕಿಯ ಹೊಟ್ಟೆಯಲ್ಲಿ ಸಿಕ್ಕ ಕೂದಲು


ಆಪರೇಷನ್ ಮಾಡಿದಾಗ ಆ ಬಾಲಕಿಯ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ನೋಡಿ ವೈದ್ಯರೇ ದಂಗಾಗಿದ್ದಾರೆ. ಬಾಲಕಿಯ ಹೊಟ್ಟೆಯಲ್ಲಿ 500 ಗ್ರಾಂ ತಲೆಕೂದಲು ಹಾಗೂ ಒಂದು ಖಾಲಿ ಶಾಂಪೂ ಪ್ಯಾಕೆಟ್ ಸಿಕ್ಕಿದೆ ಎಂದು ವಿಜಿಎಂ ಆಸ್ಪತ್ರೆ ಚೇರ್ಮನ್ ವಿ.ಜಿ. ಮೋಹನ್ ಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ: ವಧುವಿನ ಅಮ್ಮನ ಜೊತೆ ವರನ ಅಪ್ಪ ಪರಾರಿ; ವಿಚಿತ್ರ ಲವ್ ಸ್ಟೋರಿಯಿಂದ ಮಕ್ಕಳ ಮದುವೆ ಕ್ಯಾನ್ಸಲ್!ಆ 13 ವರ್ಷದ ಬಾಲಕಿಯ ಆಪ್ತ ಸಂಬಂಧಿಕರೊಬ್ಬರು ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು. ಇದರಿಂದಾಗಿ ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಖಿನ್ನತೆಯಿಂದ ಬಳಲುತ್ತಿದ್ದ ಆಕೆ ತನ್ನ ಒತ್ತಡವನ್ನು ತಡೆಯಲಾರದೆ ತಲೆಕೂದಲು ಮತ್ತು ಸಿಕ್ಕ ವಸ್ತುಗಳನ್ನೆಲ್ಲ ತಿನ್ನುತ್ತಿದ್ದಳು ಎಂದು ಆಕೆಯ ತಾಯಿ ಹೇಳಿದ್ದಾರೆ. ಇದೀಗ ಆಪರೇಷನ್​ ನಂತರ ಬಾಲಕಿ ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ.
Youtube Video
First published: January 28, 2020, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories