ತೇಜಸ್ ಯುದ್ಧವಿಮಾನ ಖರೀದಿಗೆ ಹೆಚ್ಎಎಲ್ ಜೊತೆ 48,000 ಕೋಟಿ ರೂ ಒಪ್ಪಂದಕ್ಕೆ ಸಹಿ

ತೇಜಸ್ ಎಲ್​ಸಿಎ

ತೇಜಸ್ ಎಲ್​ಸಿಎ

ಸಿಂಗಲ್ ಎಂಜಿನ್ ಇರುವ ಹಾಗೂ ಮಲ್ಟಿರೋಲ್ ಸೂಪರ್ ಸಾನಿಕ್ ಫೈಟರ್ ಜೆಟ್ ಎನಿಸಿರುವ ತೇಜಸ್ ಯುದ್ಧವಿಮಾನಗಳನ್ನ ಹೆಚ್ಎಎಲ್ ದೇಶೀಯವಾಗಿ ಅಭಿವೃದ್ಧಿಪಡಿಸಿದೆ. ಭಾರತದ ವಾಯುಪಡೆಯ ಬತ್ತಳಿಕೆಗೆ ಈಗ ಇಂಥ 83 ಜೆಟ್​ಗಳು ಸೇರ್ಪಡೆಯಾಗಲಿವೆ.

 • News18
 • 5-MIN READ
 • Last Updated :
 • Share this:

  ಬೆಂಗಳೂರು(ಫೆ. 03): ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋನ ಮೊದಲ ದಿನ ಹೆಚ್​ಎಎಲ್ ಸಂಸ್ಥೆಗೆ ಭರ್ಜರಿ ಒಪ್ಪಂದ ಸಿಕ್ಕಿದೆ. 83 ತೇಜಸ್ ಲೈಟ್ ಕಾಂಬಾಟ್ ಯುದ್ಧವಿಮಾನಗಳ ಖರೀದಿಗಾಗಿ ಹೆಚ್​ಎಎಲ್ ಜೊತೆ ಸರ್ಕಾರ 48,000 ಕೋಟಿ ರೂ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ ಹಾಕಿದೆ. ಇವತ್ತಿನ ಏರೋ ಇಂಡಿಯಾ ಶೋನ ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಇಲಾಖೆ ಡಿಜಿ ವಿ ಎಲ್ ಕಾಂತ ರಾವ್ ಅವರು ಒಪ್ಪಂದವನ್ನ ಹೆಚ್​ಎಲ್​ನ ಛೇರ್ಮನ್ ಮತ್ತು ಎಂಡಿ ಆರ್ ಮಾಧವನ್ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪಸ್ಥಿತರಿದ್ದರು.


  ಹೆಚ್​ಎಲ್ ಸಂಸ್ಥೆಯೇ ತೇಜಸ್ ಅನ್ನ ದೇಶೀಯವಾಗಿ ಅಭಿವೃದ್ಧಿಪಡಿಸಿದೆ. ತೇಜಸ್ ಹಗುರ ಯುದ್ಧವಿಮಾನವಾದರೂ ಬಹಳ ಶಕ್ತಿಶಾಲಿಯಾಗಿದೆ. ಸಿಂಗಲ್ ಎಂಜಿನ್​ನ ಮಲ್ಟಿ ರೋಲ್ ಸೂಪರ್ ಸಾನಿಕ್ ಫೈಟರ್ ವಿಮಾನವಾಗಿರುವ ತೇಜಸ್ ಎಂಥದ್ದೇ ಅಪಾಯದ ವಾತಾವರಣದಲ್ಲೂ ಕ್ಷಮತೆಯಿಂದ ಕಾರ್ಯನಿರ್ವಹಿಸಬಲ್ಲುದು. ಭಾರತದ ವಾಯುಪಡೆಗೆ ಈ ಯುದ್ಧವಿಮಾನಗಳು ಪ್ರಬಲ ಅಸ್ತ್ರವೆನಿಸಲಿವೆ.


  ಹೆಚ್​ಎಎಲ್​ನಿಂದ 73 ತೇಜಸ್ ಮಾರ್ಕ್-1A ಮತ್ತು 10 ಎಲ್​ಸಿಎ ಮಾರ್ಕ್-1 ತರಬೇತಿ ವಿಮಾನಗಳನ್ನ ಖರೀದಿಸುವ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ತಿಂಗಳು ನಡೆದ ಸಂಪುಟ ಭದ್ರತಾ ಸಮಿತಿ ಅನುಮೋದನೆ ನೀಡಿತ್ತು.


  ಇದನ್ನೂ ಓದಿ: ಭಾರತದೊಂದಿಗಿನ ಬಂದರು ಅಭಿವೃದ್ಧಿ ಒಪ್ಪಂದ ರದ್ದುಗೊಳಿಸಿ ಶಾಕ್ ಕೊಟ್ಟ ಶ್ರೀಲಂಕಾ


  “ಹೆಚ್​ಎಎಲ್ ದೇಶೀಯವಾಗಿ ಅಭಿವೃದ್ಧಿಪಡಿಸಿರುವ 83 ಹೊಸ ತೇಜಸ್ MK1A ಎಲ್​ಸಿಎಗಳನ್ನ ಖರೀದಿಸಲು ಭಾರತೀಯ ವಾಯು ಪಡೆ 48 ಸಾವಿರ ಕೋಟಿ ರೂ ಮೊತ್ತದ ಆರ್ಡರ್​ಗಳನ್ನ ನೀಡಿದ್ದು ನನಗೆ ಸಂತಸ ತಂದಿದೆ. ಇದು ಮೇಕ್ ಇನ್ ಇಂಡಿಯಾ ಆಶಯದಲ್ಲಿ ನಡೆದ ಅತಿದೊಡ್ಡ ರಕ್ಷಣಾ ಒಪ್ಪಂಕವಾಗಿದೆ” ಎಂದು ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

  Published by:Vijayasarthy SN
  First published: