• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Hajj Pilgrimage: ಹಜ್‌ ಯಾತ್ರಿಕರಿಗೆ ಕೇಂದ್ರದಿಂದ ಗುಡ್‌ನ್ಯೂಸ್, ಇನ್ಮೇಲೆ ಕಡಿಮೆ ಖರ್ಚಿಗೆ ಯಾತ್ರೆ ಮಾಡಬಹುದು!

Hajj Pilgrimage: ಹಜ್‌ ಯಾತ್ರಿಕರಿಗೆ ಕೇಂದ್ರದಿಂದ ಗುಡ್‌ನ್ಯೂಸ್, ಇನ್ಮೇಲೆ ಕಡಿಮೆ ಖರ್ಚಿಗೆ ಯಾತ್ರೆ ಮಾಡಬಹುದು!

ಹಜ್ ಯಾತ್ರೆ

ಹಜ್ ಯಾತ್ರೆ

ಈ ವರ್ಷ ಹಜ್‌ ಯಾತ್ರೆಗೆ ಸುಮಾರು 1.75 ಲಕ್ಷ ಕೋಟಾವನ್ನು ಭಾರತಕ್ಕೆ ನೀಡಲಾಗಿದ್ದು, ಹೊಸ ಹಜ್ ನಿಯಮದ ಪ್ರಕಾರ ಒಟ್ಟು ಕೋಟಾದ 90% ಅನ್ನು ಭಾರತದ ಹಜ್ ಸಮಿತಿಗೆ ಹಂಚಲಾಗುತ್ತದೆ. ಉಳಿದವು ಖಾಸಗಿ ನಿರ್ವಾಹಕರಿಗೆ ಮೀಸಲಿರಿಸಲಾಗುತ್ತದೆ. ಹೀಗಾಗಿ ಸೌದಿ ಅರೇಬಿಯಾದೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಈ ವರ್ಷ ಭಾರತದ ಹಜ್‌ ಕೋಟಾದಲ್ಲಿ 1,75,025 ಜನರು ಹಜ್ ಯಾತ್ರೆ ಕೈಗೊಳ್ಳಬಹುದು.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • New Delhi, India
 • Share this:

ನವದೆಹಲಿ: ಹಜ್ ಯಾತ್ರೆ ಅನ್ನೋದು ಮುಸ್ಲಿಮರ ಪವಿತ್ರ ಯಾತ್ರೆಗಳಲ್ಲಿ ಪ್ರಮುಖವಾದುದು. ಮನುಷ್ಯರಾಗಿ ಹುಟ್ಟಿದ ಮೇಳೆ ಒಂದು ಸಲ ಆದರೂ ಹಜ್‌ಗೆ ಹೋಗಿ ಬರಬೇಕು ಅನ್ನೋದು ಪ್ರತಿಯೊಬ್ಬ ಮುಸಲ್ಮಾನನ ಕನಸು. ಅದಕ್ಕಾಗಿ ಶ್ರದ್ಧಾ ಭಕ್ತಿಯಿಂದ ಅನೇಕ ನೀತಿ ನಿಯಮಗಳನ್ನು ಅನುಸರಿಸಿ ಹಜ್‌ ಯಾತ್ರೆಗೆ ಮುಸಲ್ಮಾನರು ಹೋಗು ಬರುತ್ತಾರೆ. ಇದೀಗ ಹಜ್ ಯಾತ್ರೆಗೆ ತೆರಳುವ ಮುಸ್ಲಿಮರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಈ ವರ್ಷ ಹಜ್ ಯಾತ್ರೆಯ ವೆಚ್ಚ ಕಡಿಮೆಯಾಗಲಿದೆ.


ಹೌದು.. ಈ ವರೆಗೆ ಒಬ್ಬ ವ್ಯಕ್ತಿ ಹಜ್‌ ಯಾತ್ರೆಗೆ ಹೋಗಿ ಬರಲು ಸಾಮಾನ್ಯವಾಗಿ 3 ರಿಂದ ಮೂರೂವರೆ ಲಕ್ಷದ ತನಕ ಖರ್ಚು ಆಗುತ್ತಿತ್ತು. ಆದರೆ ಈ ಬಾರಿ ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಪ್ರಯಾಣಿಕರಿಗೆ 50 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಅದರ ಜೊತೆಗೆ ಕಳೆದ ವರ್ಷ 400 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಿತ್ತು. ಆದರೆ ಈ ಬಾರಿ ಹಜ್ ಯಾತ್ರೆ ಕೈಗೊಳ್ಳುವ ಪ್ರಯಾಣಿಕರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವೂ ಇಲ್ಲ ಎಂದು ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹೊಸ ಹಜ್ ನೀತಿಯನ್ನು ಪ್ರಕಟ ಮಾಡಿದೆ.


ಇದನ್ನೂ ಓದಿ: Explainer: ವಿಐಪಿ ಹಜ್ ಕೋಟಾ ರದ್ದು; ಶೀಘ್ರದಲ್ಲೇ ಹೊಸ ನೀತಿ ಜಾರಿಗೆ ಕೇಂದ್ರದಿಂದ ಮಹತ್ವದ ನಿರ್ಧಾರ


ಎಷ್ಟು ಜನರಿಗೆ ಅವಕಾಶ


ಇನ್ನು ಈ ವರ್ಷ ಹಜ್‌ ಯಾತ್ರೆಗೆ ಸುಮಾರು 1.75 ಲಕ್ಷ ಕೋಟಾವನ್ನು ಭಾರತಕ್ಕೆ ನೀಡಲಾಗಿದ್ದು, ಹೊಸ ಹಜ್ ನಿಯಮದ ಪ್ರಕಾರ ಒಟ್ಟು ಕೋಟಾದ 90% ಅನ್ನು ಭಾರತದ ಹಜ್ ಸಮಿತಿಗೆ ಹಂಚಲಾಗುತ್ತದೆ. ಉಳಿದವು ಖಾಸಗಿ ನಿರ್ವಾಹಕರಿಗೆ ಮೀಸಲಿರಿಸಲಾಗುತ್ತದೆ. ಹೀಗಾಗಿ ಸೌದಿ ಅರೇಬಿಯಾದೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಈ ವರ್ಷ ಭಾರತದ ಹಜ್‌ ಕೋಟಾದಲ್ಲಿ 1,75,025 ಜನರು ಹಜ್ ಯಾತ್ರೆ ಕೈಗೊಳ್ಳಬಹುದು. ಆದರೆ ಕೇಂದ್ರ ಸರ್ಕಾರ ಇನ್ನೂ ಹಜ್‌ ಯಾತ್ರೆಗೆ ತೆರಳುವವರಿಗೆ ಅರ್ಜಿಗಳನ್ನು ತೆರೆದಿಲ್ಲ.


ಮೂಲಗಳ ಪ್ರಕಾರ, ‘ಈ ಬಾರಿ ಹಜ್‌ ಯಾತ್ರೆಯ ಅರ್ಜಿ ಸಲ್ಲಿಕೆ ಉಚಿತವಾಗಿರುತ್ತದೆ. ಎಲ್ಲಾ ಹಜ್‌ ಯಾತ್ರಿಗಳು ಯಾವುದೇ ವೆಚ್ಚ ಮಾಡದೆ ಅರ್ಜಿ ಸಲ್ಲಿಸಬಹುದು. ಬ್ಯಾಗ್‌, ಸೂಟ್‌ಕೇಸ್‌, ಕೊಡೆ ಅಥವಾ ಚಾಪೆ ಇತ್ಯಾದಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕದ ಬೇಡಿಕೆ ಇಡಲಾಗುವುದಿಲ್ಲ. ಆದ್ರೆ ಹಜ್‌ ಯಾತ್ರಿಗಳು ಯಾತ್ರೆಯ ಸಂದರ್ಭದಲ್ಲಿ ಮಾಡುವ ಖರೀದಿಯನ್ನು ತಮ್ಮದೇ ಖರ್ಚಿನಲ್ಲೇ ಭರಿಸಬೇಕು. ಹೊಸ ನೀತಿಯ ಅಡಿಯಲ್ಲಿ, ಹಜ್‌ ಯಾತ್ರೆಗೆ ಹಿರಿಯರು, ಮಹಿಳೆಯರು, ವಿಶೇಷ ಚೇತನರಿಗೆ ಯಾತ್ರೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರೂ ತಾವೇ ಅರ್ಜಿ ಸಲ್ಲಿಸಬಹುದು’ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Hubballi: ಹಜ್ ಯಾತ್ರೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ; ಪ್ರಮುಖ ಆರೋಪಿ ಸಾವಿನ ಸುತ್ತ ಅನುಮಾನದ ಹುತ್ತ!


ಇನ್ನು ಈ ಬಾರಿ ಹಜ್ ಯಾತ್ರೆ ಕೈಗೊಳ್ಳಲಿರುವ 1.75 ಲಕ್ಷ ಮುಸ್ಲಿಂ ಯಾತ್ರಿಕರ ಪೈಕಿ ಶೇಕಡಾ 80 ರಷ್ಟು ಜನರು ಹಜ್ ಕಮಿಟಿ ಮೂಲಕ ಯಾತ್ರೆ ಕೈಗೊಳ್ಳಬಹುದು. ಉಳಿದ 20 ಶೇಕಡಾ ಜನರು ಖಾಸಗಿ ಪ್ರವಾಸಿ ಆಪರೇಟರ್‌ಗಳ ನೆರವಿನಿಂದ ಹಜ್ ಯಾತ್ರೆ ಕೈಗೊಳ್ಳಬಹುದು.
ಆದರೆ ಮುಖ್ಯವಾಗಿ ಯಾತ್ರೆಯನ್ನು ಕೈಗೊಳ್ಳುವ ಪ್ರವಾಸಿಗರು ಆರೋಗ್ಯ ತಪಾಸಣೆಯನ್ನು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಮಾಡಬೇಕು. ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಿದ ತಪಾಸಣೆಯನ್ನು ಪರಿಗಣಿಸಲಾಗಿದೆ. ಈ ಕುರಿತು ಅಲ್ಪ ಸಂಖ್ಯಾತ ಸಚಿವಾಲಯವು ಆರೋಗ್ಯ ಇಲಾಖೆಯನ್ನು ಸಂಪರ್ಕ ಮಾಡಿದೆ. ಇದರ ಜೊತೆಗೆ ಪ್ರತಿ ರಾಜ್ಯದಿಂದಲೂ ಒಬ್ಬರು ಹಜ್ ಕಮಿಟಿಯಿಂದ ಅಧಿಕಾರಿಯಾಗಿ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು