ನವದೆಹಲಿ(ಜ.11): ಹಜ್ ಯಾತ್ರಿಕರ (Hajj 2023) ವಿಐಪಿ ಕೋಟಾವನ್ನು (V(P Quota) ಕೇಂದ್ರ ಸರ್ಕಾರ ಬುಧವಾರ ರದ್ದುಗೊಳಿಸಿದೆ. ಸರ್ಕಾರದ ಈ ನಿರ್ಧಾರದಿಂದ ಇನ್ಮುಂದೆ ವಿಐಪಿ ಯಾತ್ರಿಗಳು (VIP Pilgrimage) ಸಾಮಾನ್ಯ ಹಜ್ ಯಾತ್ರಿಗಳಂತೆ ಪ್ರಯಾಣಿಸಬೇಕಾಗುತ್ತದೆ. ಮೂಲಗಳಿಂದ ಬಂದ ಮಾಹಿತಿ ಅನ್ವಯ ಪ್ರಧಾನಿ, ರಾಷ್ಟ್ರಪತಿ, ಉಪಾಧ್ಯಕ್ಷ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಹಾಗೂ ಭಾರತದ ಹಜ್ ಸಮಿತಿಗೆ ನೀಡಲಾಗಿದ್ದ ವಿಐಪಿ ಕೋಟಾವನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಲಭ್ಯವಾದ ಮಾಹಿತಿ ಪ್ರಕಾರ 2012ರಲ್ಲಿ ಈ ವಿಐಪಿ ಕೋಟಾ ಜಾರಿಯಾಗಿದ್ದು, ಇದಕ್ಕಾಗಿ 5,000 ಸೀಟುಗಳನ್ನು ನಿಗದಿಪಡಿಸಲಾಗಿತ್ತು. ಆದರೀಗ ಅದನ್ನು ರದ್ದುಗೊಳಿಸಲಾಗಿದೆಯಾದರೂ, ನಂತರ ಈ ಸೀಟುಗಳನ್ನು ಸಾಮಾನ್ಯ ಜನರಿಗೆ ಹಂಚಿಕೆ ಮಾಡಬಹುದು ಎನ್ನಲಾಗಿದೆ. ಸೌದಿ ಅರೇಬಿಯಾದಲ್ಲಿ ವಾರ್ಷಿಕ ಹಜ್ ಯಾತ್ರೆ ಸಂದರ್ಭದಲ್ಲಿ ಈ ವರ್ಷ ಕೊರೊನಾ ವೈರಸ್ ನಿಯಂತ್ರಿಸಲು ವಿಧಿಸಲಾದ ನಿರ್ಬಂಧಗಳನ್ನು ಹಿಂಪಡೆಯಲಾಗಿದೆ. ಹೀಗಿರುವಾಗ ಯಾತ್ರಿಕರ ಸಂಕ್ಯೆ ಹೆಚ್ಚಳವಾಗಿ ಮತ್ತೆ ಸೋಂಕು ಉತ್ತುಂಗಕ್ಕೇರುವ ನಿರೀಕ್ಷೆಯಿದೆ.
ಇದನ್ನೂ ಓದಿ: Hubballi: ಹಜ್ ಯಾತ್ರೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ; ಪ್ರಮುಖ ಆರೋಪಿ ಸಾವಿನ ಸುತ್ತ ಅನುಮಾನದ ಹುತ್ತ!
ಇಸ್ಲಾಂನಲ್ಲಿ, ಎಲ್ಲಾ ಸಮರ್ಥ ಮುಸ್ಲಿಮರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಹಜ್ ಮಾಡುವುದು ಅವಶ್ಯಕ. ವಾರ್ಷಿಕ ಹಜ್ ಸಂದರ್ಭದಲ್ಲಿ ಪ್ರಪಂಚದಾದ್ಯಂತದ ಅನೇಕ ದೇಶಗಳಿಂದ ಲಕ್ಷಾಂತರ ಜನರು ಇಸ್ಲಾಂನ ಪವಿತ್ರ ನಗರವಾದ ಮೆಕ್ಕಾದಲ್ಲಿ ಸೇರುತ್ತಾರೆ. ಹೀಗಾಗಿ ಇದು ಜನರ ಅತಿದೊಡ್ಡ ಕೂಟವೆಂದು ಪರಿಗಣಿಸಲಾಗಿದೆ.
2019 ರಲ್ಲಿ, ಕೊರೊನಾ ವೈರಸ್ ದಾಳಿ ಇಡುವುದಕ್ಕೂ ಮುನ್ನ, 24 ಲಕ್ಷ ಜನರು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದರು, ಆದರೆ 2020 ರಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ವಿಧಿಸಲಾದ ಲಾಕ್ಡೌನ್ನಿಂದಾಗಿ, ಸೌದಿ ಅರೇಬಿಯಾ ಯಾತ್ರಿಕರ ಸಂಖ್ಯೆಯನ್ನು ಕೇವಲ 1000 ಕ್ಕೆ ಸೀಮಿತಗೊಳಿಸಿತು.
ಇದನ್ನೂ ಓದಿ: Conversion to Islam: ಇಸ್ಲಾಂಗೆ ಮತಾಂತರಗೊಂಡ ಖ್ಯಾತ ಮಾಡೆಲ್! ವೈರಲ್ ಆಯ್ತು ಹಜ್ ಯಾತ್ರೆ ಫೋಟೋ
ಈ ಕ್ರಮವು ಅಭೂತಪೂರ್ವವಾಗಿತ್ತು ಏಕೆಂದರೆ 1918 ರ ಫ್ಲೂ ಸಾಂಕ್ರಾಮಿಕ ಸಮಯದಲ್ಲಿ ವಿಶ್ವದಾದ್ಯಂತ ಲಕ್ಷಾಂತರ ಜನರು ಈ ಕಾಯಿಲೆಗೆ ತಮ್ಮ ಜೀವ ಕಳೆದುಕೊಂಡಾಗಲೂ ಇಂತಹುದ್ದೊಂದು ನಿರ್ಬಂಧ ವಿಧಿಸಿರಲಿಲ್ಲ. ಆದರೀಗ ಈ ವರ್ಷ, ಎಲ್ಲಾ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಹೀಗಿರುವಾಗಲಕ್ಷಾಂತರ ಜನರು ಹಜ್ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ