ಜಪಾನ್​ಗೆ ಅಪ್ಪಳಿಸಿದ ಹಗಿಬೀಸ್​ ಚಂಡಮಾರುತ; ಭೀಕರ ಮಳೆಗೆ ತತ್ತರಿಸಿದ ಟೋಕಿಯೋ ಜನರು

ಮಳೆಯಿಂದಾಗಿ  ಟೋಕಿಯೋದಲ್ಲಿ ಏರ್ಪಡಿಸಲಾಗಿದ್ದ ರಗ್ಬಿ ವರ್ಲ್ಡ್​​ ಕಪ್​ ಮ್ಯಾಚನ್ನು  ರದ್ದುಗೊಳಿಸಲಾಗಿದೆ. ರೈಲ್ವೆ ಹಾಗೂ ವಿಮಾನ ಸೇವೆಗಳು ಕೂಡ ಸ್ಥಗಿತಗೊಂಡಿದೆ

Seema.R | news18-kannada
Updated:October 12, 2019, 2:00 PM IST
ಜಪಾನ್​ಗೆ ಅಪ್ಪಳಿಸಿದ ಹಗಿಬೀಸ್​ ಚಂಡಮಾರುತ; ಭೀಕರ ಮಳೆಗೆ ತತ್ತರಿಸಿದ ಟೋಕಿಯೋ ಜನರು
ಮಳೆಯ ದೃಶ್ಯ
  • Share this:
ಜಪಾನ್​ನಲ್ಲಿ ಆರು ದಶಕಗಳ ಬಳಿಕ ಭೀಕರ ಚಂಡಮಾರುತ ಅಪ್ಪಳಿಸಿದ್ದು, ಇದರಿಂದ ರಾಜಧಾನಿ ಟೋಕಿಯೋದಲ್ಲಿ ಭಾರೀ ಮಳೆಯಾಗುತ್ತಿದೆ. ಭೀಕರ ಮಳೆಗೆ ಭೂಕುಸಿತ ಉಂಟಾಗಿದ್ದು, ಮನೆಗಳು ಕುಸಿಯಲಾರಂಭಿಸಿದ್ದು, ಜನರು ತತ್ತರಿಸಿದ್ದಾರೆ.

ಫೆಸಿಫಿಕ್​ ಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಹಿಗಿಬೀಸ್​ ಚಂಡಮಾರುತ ಜಪಾನ್​ಗೆ ಅಪ್ಪಳಿಸಿದೆ. ಶಿಸೋಕಾ, ಮಿಯಾ ಪ್ರಿಫೆಕ್ಟರ್​, ನೈರುತ್ಯ ಟೋಕಿಯೋದಲ್ಲಿ ಮಳೆಯಾಗುತ್ತಿದ್ದು, ಅಪಾರ ಹಾನಿಯಾಗಿದೆ.

japan 1
ಮಳೆಯ ರುದ್ರ ನರ್ತನ ಚಿತ್ರ


ಮಳೆಗೆ ಓರ್ವ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅನೇಕ ಜನರು ಜೀವ ಸಂಕಷ್ಟದಲ್ಲಿದ್ದಾರೆ.

ಇನ್ನು ಮಳೆಯಿಂದಾಗಿ  ಟೋಕಿಯೋದಲ್ಲಿ ಏರ್ಪಡಿಸಲಾಗಿದ್ದ ರಗ್ಬಿ ವರ್ಲ್ಡ್​​ ಕಪ್​ ಮ್ಯಾಚನ್ನು  ರದ್ದುಗೊಳಿಸಲಾಗಿದೆ. ರೈಲ್ವೆ ಹಾಗೂ ವಿಮಾನ ಸೇವೆಗಳು ಕೂಡ ಸ್ಥಗಿತಗೊಂಡಿದೆ

ಹಿಗಿಬೀಸ್​ ಚಂಡಮಾರುತ ಮುನ್ಸೂಚನೆಯನ್ನು ಒಂದುವಾರದ ಮುಂದೆಯೇ ನೀಡಲಾಗಿದ್ದು, ಜನರಿಗೆ ಮನೆ ಬಿಟ್ಟು ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿತ್ತು.

First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading