26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕ್ ನ್ಯಾಯಾಲಯ
ಪ್ಯಾರಿಸ್ನಲ್ಲಿ ಹಣಕಾಸು ಕ್ರಿಯಾ ಪಡೆ (ಎಫ್ಎಟಿಎಫ್) ಸಭೆ ಸೇರಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ (ಬ್ಲಾಕ್ ಲಿಸ್ಟಿಂಗ್) ಸೇರಿಸಬೇಕೋ ಅಥವಾ ಬೂದು ಪಟ್ಟಿಗೆ (ಗ್ರೇ ಲಿಸ್ಟಿಂಗ್) ಸೇರಿಸಬೇಕೋ ಎಂಬುದನ್ನು ತೀರ್ಮಾನ ಮಾಡುವ ಎರಡು ದಿನದ ಮೊದಲೇ ಈ ಬೆಳವಣಿಗೆ ನಡೆದಿದೆ.
ನವದೆಹಲಿ: 26/11ಮುಂಬೈ ಉಗ್ರರ ದಾಳಿಯ ರೂವಾರಿ ಮತ್ತು ಜಮಾದ್ ಉದ್ ದಾವಾ (ಜೆಯುಡಿ) ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ಗೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಭಯೋತ್ಪಾದಕ ಸಂಘಟನೆಗಳ ಹಣಕಾಸು ಪ್ರಕರಗಳ ಸಂಬಂಧ ಉಗ್ರ ಹಫೀಜ್ಗೆ ಐದು ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
2008ರಲ್ಲಿ ಮುಂಬೈ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿ 166 ಜನರ ಸಾವಿಗೆ ಕಾರಣನಾದ ಹಫೀಜ್ ಸಯೀದ್ ಟೆರರ್ ಫಂಡಿಂಗ್ ಪ್ರಕರಣಗಳಲ್ಲಿ ಆಪಾದಿತ ಎಂದು ರುಜುವಾತಾಗಿದ್ದು, ಐದು ವರ್ಷಗಳ ಶಿಕ್ಷೆ ವಿಧಿಸಲಾಗಿದೆ.