ಕಾಸ್ಮಾಸ್​ ಬ್ಯಾಂಕ್​ನಿಂದ 94 ಕೋಟಿ ರೂ ಲಪಟಾಯಿಸಿದ ಆನ್​ಲೈನ್​ ದರೋಡೆಕೋರರು

news18
Updated:August 14, 2018, 10:26 AM IST
ಕಾಸ್ಮಾಸ್​ ಬ್ಯಾಂಕ್​ನಿಂದ 94 ಕೋಟಿ ರೂ ಲಪಟಾಯಿಸಿದ ಆನ್​ಲೈನ್​ ದರೋಡೆಕೋರರು
news18
Updated: August 14, 2018, 10:26 AM IST
ನ್ಯೂಸ್​ 18 ಕನ್ನಡ

ಪುಣೆ (ಆ.14): . ಡಿಜಿಟಲ್ ಯುಗದಲ್ಲಿ ವ್ಯವಹಾರಗಳು ಎಷ್ಟು ಸುಲಭವಾಗಿದೆಯೋ ಕಳ್ಳತನಗಳು ಅಷ್ಟೇ ಹೈಟೆಕ್​ ಕೂಡ ಆಗಿದೆ. ತಂತ್ರಜ್ಞಾನದ ಮಾಹಿತಿ ಇದ್ದರೆ ಸಾಕು ಯಾವುದೊ ಮೂಲೆಯಲ್ಲಿ ಕುಳಿತು ಬೇರೆಯವರ ಖಾತೆಗೆ ಕನ್ನ ಹಾಕಬಹುದು.

ಇಲ್ಲೊಬ್ಬ ಹೈಟೆಕ್​ ಕಳ್ಳ ಕೂಡ ತನ್ನ ಬುದ್ದಿಸಾಮಾರ್ಥ್ಯ ಬಳಸಿ 94 ಕೋಟಿ ರೂವನ್ನು ಲೂಟಿ ಮಾಡಿದ್ದಾನೆ. ಪುಣೆಯಲ್ಲಿರುವ ಕಾಸ್ಮಾಸ್​ ಬ್ಯಾಂಕ್​ನ ಹಲವು ಬ್ರಾಂಚ್​​ಗಳಿಗೆ ಈತ ಕನ್ನ ಹಾಕಿದ್ದು, ಈ ಹಣ ಹಾಂಕ್​ಕಾಂಗ್​ ಮತ್ತು ಭಾರತದ ಕೆಲವು ಖಾತೆಗಳಿಗೆ ವರ್ಗಾವಣೆಯಾಗಿದೆ.

ಮೊದಲು ಆಗಸ್ಟ್​ 11ರಂದು ಬ್ಯಾಂಕ್​ ಸರ್ವರ್​ಗೆ ಹ್ಯಾಕ್​ ಮಾಡಲಾಗಿದ್ದು, 78 ಕೋಟಿಯನ್ನು ಲಪಾಟಯಿಸಲಾಗಿತ್ತು. ಈ ಹಣ ದೇಶದ ಹೊರಗೆ ವರ್ಗಾವಣೆಯಾಗಿದೆ. ಇನ್ನು 2.5 ಕೋಟಿ ರೂವನ್ನು ವೀಸಾ ಎನ್​ಸಿಪಿಐ ಬಳಸಿ ಭಾರತದಲ್ಲಿ ವರ್ಗಾವಣೆ ಮಾಡಲಾಗಿದೆ.

ಆಗಸ್ಟ್​ 13ರಂದು ಮತ್ತೆ ಬ್ಯಾಂಕ್​ ಸರ್ವರ್​ ಹ್ಯಾಕ್​ ಆಗಿದ್ದು 14 ಕೋಟಿ ಹಣವನ್ನು ಸ್ವಿಫ್ಟ್​ ವಹಿವಾಟಿನ ಮೂಲಕ ಹಾಂಕ್​ಕಾಂಗ್​​ ನಲ್ಲಿರುವ ಹಾಂಗ್​ ಸೆಂಗ್​ ಬ್ಯಾಂಕ್​ನ ಎಎಲ್​ಎಂ ಟ್ರೆಂಡಿಂಗ್​ ಲಿಮಿಟೆಡ್​ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಘಟನೆ ನಡೆದ ಬಳಿಕ​ ಹಾಂಗ್​ಕಾಂಗ್​ನ ಈ ಎಎಲ್​ಎಂ ಟ್ರೆಂಡಿಂಗ್​ ಲಿಮಿಟೆಡ್​ ವಿರುದ್ಧ ಪುಣೆಯ ಅಪರಿಚಿತ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...