• Home
  • »
  • News
  • »
  • national-international
  • »
  • Cryptocurrency: ಕದ್ದ 898 ಕೋಟಿ ರೂ. ಹಿಂತಿರುಗಿಸುವಂತೆ ಹ್ಯಾಕರ್‌ಗಳನ್ನು ಬೇಡಿಕೊಳ್ಳುತ್ತಿರುವ ಕ್ರಿಪ್ಟೋ ಕರೆನ್ಸಿ

Cryptocurrency: ಕದ್ದ 898 ಕೋಟಿ ರೂ. ಹಿಂತಿರುಗಿಸುವಂತೆ ಹ್ಯಾಕರ್‌ಗಳನ್ನು ಬೇಡಿಕೊಳ್ಳುತ್ತಿರುವ ಕ್ರಿಪ್ಟೋ ಕರೆನ್ಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Cryptocurrency:ಹ್ಯಾಕರ್‌ಗಳು ಸೈಟ್‌ನಲ್ಲಿ ದುರುದ್ದೇಶಪೂರಿತ ಸ್ಕ್ರಿಪ್ಟ್ ಅನ್ನು ಸೇರಿಸಿದರು, ಗ್ರಾಹಕರು ವ್ಯಾಲೆಟ್ ಅನುಮತಿಗಳನ್ನು ನೀಡುವಂತೆ ಪ್ರೇರೇಪಿಸಿದರು ಇದರಿಂದ, ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಅವರಿಗೆ ಅನುವು ಮಾಡಿಕೊಟ್ಟಂತಾಯಿತು

  • Share this:

ಅಪರಿಚಿತ ಹ್ಯಾಕರ್‌ಗಳ ಗುಂಪೊಂದು BadgerDAO ಹೆಸರಿನ ಬ್ಲಾಕ್‌ಚೈನ್ (Blockchain)ಕಂಪನಿಯಿಂದ 2,100 BTC ($118,500,000) ಹಾಗೂ 151 ETH ($679,000) ಮೌಲ್ಯದ ಕ್ರಿಪ್ಟೋ ಕರೆನ್ಸಿ (cryptocurrency.) ಟೋಕನ್‌ಗಳನ್ನು(Tokens) ಕದ್ದಿದ್ದು ಇದೀಗ ಕಂಪನಿಯು ಹಣವನ್ನು ಹಿಂತಿರುಗಿಸುವಂತೆ ಹ್ಯಾಕರ್‌ಗಳನ್ನು(Hackers) ಬೇಡಿಕೊಳ್ಳುತ್ತಿದೆ(Begging ). ಈ ಕುರಿತು BadgerDAO ಕಂಪನಿಯು ಇಮೇಲ್ ವಿಳಾಸಗಳನ್ನು ಲಿಸ್ಟ್ ಮಾಡುವ ಮೂಲಕ, ನಿಮಗೆ ಸೇರಿಲ್ಲದೇ ಇರುವ ಫಂಡ್‌ಗಳನ್ನು ನೀವು ಕದ್ದಿದ್ದೀರಿ ಅದಾಗ್ಯೂ ನಾವು ನಿಮ್ಮೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಸಿಸ್ಟಮ್‌ಗಳಲ್ಲಿನ ಈ ದುರ್ಬಲತೆಯನ್ನು ಗುರುತಿಸಲು ನಿಮಗೆ ಪರಿಹಾರವನ್ನು ನೀಡುತ್ತೇವೆ ಎಂದು ಹೇಳಿಕೊಂಡಿದೆ.


ದುರುದ್ದೇಶಪೂರಿತ ಸ್ಕ್ರಿಪ್ಟ್
ಅಲ್ಲದೇ ನಾವು ಯಾವುದೇ ಹೊರಗಿನ ಪಕ್ಷಗಳನ್ನು ಒಳಗೊಳ್ಳದೆ ಶಾಂತಿಯುತ ನಿರ್ಣಯವನ್ನು ಚರ್ಚಿಸಲು ನಿಮಗೆ ನೇರ ಸಂವಹನ ಮಾರ್ಗವನ್ನು ಒದಗಿಸುತ್ತಿದ್ದೇವೆ. ಮತ್ತಷ್ಟು ಚರ್ಚಿಸಲು ಮತ್ತು ಸಮುದಾಯದ ಪರವಾಗಿ ಸರಿಯಾದ ಕೆಲಸವನ್ನು ಮಾಡಲು ನಮ್ಮನ್ನು ಸಂಪರ್ಕಿಸಿ ಎಂಬುದಾಗಿ ಸಾರ್ವಜನಿಕ ಹೇಳಿಕೆಯನ್ನು ಬರೆದುಕೊಂಡಿದೆ.


ಇದನ್ನೂ ಓದಿ: Cryptocurrency: ಕ್ರಿಪ್ಟೊ ಎಕ್ಸ್‌ಚೇಂಜ್‌ಗಳಲ್ಲಿ KYC ಪರಿಶೀಲನೆ ಮಾಡಿಕೊಳ್ಳುವುದು ಹೇಗೆ? ಫುಲ್ ಡೀಟೆಲ್ಸ್ ಇಲ್ಲಿದೆ


ಕಳೆದ ವಾರ ಹ್ಯಾಕಿಂಗ್ ಘಟನೆ ನಡೆದಿದ್ದು, ಹ್ಯಾಕರ್‌ಗಳು ಹಳೆಯ ಶೈಲಿಯ ತಂತ್ರವನ್ನು ಹೂಡಿದ್ದಾರೆ ಎಂದು ವೈಸ್ ನ್ಯೂಸ್ ವರದಿ ಮಾಡಿದೆ. ಅದರ ಪ್ರಕಾರ, ಹ್ಯಾಕರ್‌ಗಳು ಸೈಟ್‌ನಲ್ಲಿ ದುರುದ್ದೇಶಪೂರಿತ ಸ್ಕ್ರಿಪ್ಟ್ ಅನ್ನು ಸೇರಿಸಿದರು, ಗ್ರಾಹಕರು ವ್ಯಾಲೆಟ್ ಅನುಮತಿಗಳನ್ನು ನೀಡುವಂತೆ ಪ್ರೇರೇಪಿಸಿದರು ಇದರಿಂದ, ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಅವರಿಗೆ ಅನುವು ಮಾಡಿಕೊಟ್ಟಂತಾಯಿತು.


ಆತ್ಮೀಯ ಹ್ಯಾಕರ್
BadgerDAO ಕಂಪನಿಯ ಸದಸ್ಯರೊಬ್ಬರು ವೈಯಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕವಾಗಿ ತಿಳಿಸಲು ಇಚ್ಛೆಇಲ್ಲ ಎಂದು ತಿಳಿಸಿದ್ದು ನಾವು ತಂತ್ರವನ್ನು ನಿರ್ವಹಿಸುವ ವೃತ್ತಿಪರರನ್ನು ಹೊಂದಿದ್ದೇವೆ ಮತ್ತು ಅದರ ಮೇಲೆ ಪರಿಣಾಮ ಬೀರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಕದ್ದ ಹಣವನ್ನು ಹಿಂತಿರುಗಿಸುವಂತೆ ಹ್ಯಾಕರ್‌ಗಳನ್ನು ಮನವಿ ಮಾಡುವುದು ಹಾಸ್ಯಸ್ಪದವಾಗಿ ಕಂಡರೂ ವೈಸ್ ನ್ಯೂಸ್ ವರದಿ ಮಾಡಿರುವಂತೆ ಈ ಹಿಂದೆ ಕೂಡ ಪಾಲಿ ನೆಟ್‌ವರ್ಕ್ ಕೂಡ ಇದೇ ವಿಜ್ಞಾಪನೆಯ ತಂತ್ರವನ್ನು ಅನುಸರಿಸಿದ್ದನ್ನು ನೆನಪು ಮಾಡಿಕೊಟ್ಟಿದೆ.


ಈ ವರ್ಷದ ಆರಂಭದಲ್ಲಿ ಕ್ರಿಪ್ಟೋಕರೆನ್ಸಿ ಪ್ಲಾಟ್‌ಫಾರ್ಮ್ ಪಾಲಿ ನೆಟ್‌ವರ್ಕ್ ಹ್ಯಾಕರ್‌ಗಳಿಂದಾಗಿ $600 ಮಿಲಿಯನ್ ಕಳೆದುಕೊಂಡಿತು. ಟ್ವಿಟ್ಟರ್‌ನಲ್ಲಿ ಈ ಪ್ಲಾಟ್‌ಫಾರ್ಮ್ ಮಾಡಿಕೊಂಡು ವಿಜ್ಞಾಪನೆಯು BadgerDAO’s ಗಿಂತ ಭಾವನಾತ್ಮಕವಾಗಿತ್ತು. ಅವರು ಪತ್ರದ ಒಕ್ಕಣೆಯನ್ನು ಆರಂಭಿಸಿದ್ದೇ “ಆತ್ಮೀಯ ಹ್ಯಾಕರ್” ಎಂಬ ಪದದಿಂದ ಎಂಬುದನ್ನು ಇಲ್ಲಿ ಗಮನಿಸಲೇಬೇಕು.


ನಿಮ್ಮೊಂದಿಗೆ ಚರ್ಚಿಸಲೇಬೇಕು
ನಾವು ನಿಮ್ಮೊಂದಿಗೆ ಸಂವಹನವನ್ನು ಸ್ಥಾಪಿಸಲು ಬಯಸುತ್ತೇವೆ ಮತ್ತು ಹ್ಯಾಕ್ ಮಾಡಿದ ಸ್ವತ್ತುಗಳನ್ನು ಹಿಂತಿರುಗಿಸಲು ನಿಮ್ಮನ್ನು ಒತ್ತಾಯಿಸುತ್ತೇವೆ. ನೀವು ಹ್ಯಾಕ್ ಮಾಡಿದ ಹಣದ ಮೊತ್ತವು DeFi ಇತಿಹಾಸದಲ್ಲಿ ಅತಿ ದೊಡ್ಡದಾಗಿದೆ. ಯಾವುದೇ ದೇಶದಲ್ಲಿ ಕಾನೂನು ಜಾರಿ ಮಾಡುವವರು ಇದನ್ನು ಪ್ರಮುಖ ಆರ್ಥಿಕ ಅಪರಾಧವೆಂದು ಪರಿಗಣಿಸುತ್ತಾರೆ ಮತ್ತು ನಿಮ್ಮನ್ನು ಹಿಂಬಾಲಿಸಲಾಗುತ್ತದೆ.


ಯಾವುದೇ ಹೆಚ್ಚಿನ ವಹಿವಾಟುಗಳನ್ನು ನಡೆಸುವುದು ಅವಿವೇಕವಾಗುತ್ತದೆ. ನೀವು ಕದ್ದಿರುವ ಹಣವು ಕ್ರಿಪ್ಟೋ ಸಮುದಾಯದ ಸದಸ್ಯರದ್ದಾಗಿದೆ ಹಾಗಾಗಿ ಅವರಿಗೆ ನೀಡಬೇಕಾದ ಪರಿಹಾರವನ್ನು ಒದಗಿಸಲು ನಿಮ್ಮೊಂದಿಗೆ ಚರ್ಚಿಸಲೇಬೇಕು ಎಂದು ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿತ್ತು.


ಕ್ರಮ ಏಕೆ ಕೈಗೊಳ್ಳುತ್ತಿಲ್ಲ
ಕ್ರಿಪ್ಟೋ ಕರೆನ್ಸಿ ಪ್ಲಾಟ್‌ಫಾರ್ಮ್‌ಗಳು ಹ್ಯಾಕರ್‌ಗಳೊಂದಿಗೆ ವಿನಂತಿಸುವ ಬದಲಿಗೆ ಬೇರೆ ಕ್ರಮಗಳನ್ನು ಏಕೆ ಕೈಗೊಳ್ಳುತ್ತಿಲ್ಲ ಎಂಬುದು ಇಲ್ಲಿ ಪ್ರಶ್ನಾರ್ಥಕವಾಗಿದೆ. 2018 ರಲ್ಲಿ ಹ್ಯಾಕರ್‌ಗಳು ತಾವು ಕದ್ದಿದ್ದ ಹಣವನ್ನು ಹಿಂತಿರುಗಿಸಲು ಮನಸ್ಸು ಮಾಡಿದ್ದರು. ಕದ್ದ ಸುಮಾರು ಒಂದು ವರ್ಷದ ನಂತರ ಹ್ಯಾಕರ್‌ಗಳು $17 ಮಿಲಿಯನ್ USD ಮೌಲ್ಯದ ಈಥರ್ ಅನ್ನು ಮರಳಿಸಿದ್ದರು.


ಇದನ್ನೂ ಓದಿ: Blockchain Technology- ವಿಶ್ವಾಸಾರ್ಹ ಸಮಾಜಕ್ಕೆ ಬ್ಲಾಕ್​ಚೈನ್ ಟೆಕ್ನಾಲಜಿ ಅಗತ್ಯ: ಮುಕೇಶ್ ಅಂಬಾನಿ


ಆಪಾದಿತ ಹ್ಯಾಕರ್‌ಗಳು ಕೊಯಿಂಡಾಶ್ ಸ್ಟಾರ್ಟಪ್‌ನ ವೆಬ್‌ಸೈಟ್ ಮೇಲೆ ದಾಳಿ ಮಾಡಿ ಕಳ್ಳತನ ನಡೆಸಿದ್ದರು. ವಿಚಿತ್ರದ ಸಂಗತಿ ಎಂದರೆ ಅಂದಿನಿಂದ ಹ್ಯಾಕರ್‌ಗಳು ತಾವು ಕದ್ದ ಹಣವನ್ನು ನಿಧಾನವಾಗಿ ಹಾಗೂ ನೇರವಾಗಿ ಕೊಯಿಂಡಾಶ್‌ಗೆ ಮರಳಿಸಲು ಆರಂಭಿಸಿದರು.

Published by:vanithasanjevani vanithasanjevani
First published: