ನವದೆಹಲಿ (ನ. 5): ಕೊರೋನಾ ಎಂಬ ಮಾರಣಾಂತಿಕ ವೈರಸ್ ಇಡೀ ವಿಶ್ವವನ್ನೇ ಆವರಿಸಿಕೊಂಡು, ಲಕ್ಷಾಂತರ ಜನರ ಜೀವವನ್ನೇ ಬಲಿ ತೆಗೆದುಕೊಂಡಿದೆ. ಕೊರೋನಾಗೆ ಚಿಕಿತ್ಸೆ ಕಂಡುಹಿಡಿಯಲು ಎಲ್ಲ ದೇಶಗಳ ವಿಜ್ಞಾನಿಗಳು ಪರದಾಡುತ್ತಿರುವಾಗ ಕೆನಡಾದಲ್ಲಿ ಮತ್ತೊಂದು ಬಗೆಯ ಹಂದಿಜ್ವರ ಕಾಣಿಸಿಕೊಂಡಿದೆ. ಈ ಬಗ್ಗೆ ನಿನ್ನೆ ಕೆನಡಾದ ಅಲ್ಬರ್ಟಾದ ಆರೋಗ್ಯಾಧಿಕಾರಿ ಡಾ. ಡೀನಾ ಹಿನ್ಶಾ ಪ್ರಕಟಣೆ ಹೊರಡಿಸಿದ್ದು, ವ್ಯಕ್ತಿಯೊಬ್ಬರು ಅತ್ಯಂತ ಅಪರೂಪದ ಹೆಚ್1ಎನ್ ಸೋಂಕಿಗೆ ತುತ್ತಾಗಿರುವ ಮೊದಲ ಪ್ರಕರಣ ಕೆನಡಾದಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದೆ.
ಅಕ್ಟೋಬರ್ ಅಂತ್ಯದಲ್ಲಿ ಕೆನಡಾದಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದು, ವ್ಯಕ್ತಿಯೊಬ್ಬರಿಗೆ ಅತ್ಯಂತ ಅಪರೂಪದ ಹಂದಿಜ್ವರದ ಲಕ್ಷಣಗಳು ಕಾಣಿಸಿಕೊಂಡಿದೆ. ಆದರೆ, ಆರಂಭಿಕ ಹಂತದಲ್ಲೇ ಈ ಸೋಂಕು ಪತ್ತೆಯಾಗಿರುವುದರಿಂದ ವ್ಯಕ್ತಿಯ ಜೀವಕ್ಕೆ ಯಾವುದೇ ಅಪಾಯವಿಲ್ಲ. ಕೆನಡಾ ಮೂಲದವರಲ್ಲೇ ಈ ಹೆಚ್1ಎನ್2 ಸೋಂಕು ಪತ್ತೆಯಾಗಿದ್ದು, ಔಷಧಿ ಕಂಡುಹಿಡಿಯುವ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ ಎಂದು ಕೆನಡಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಸೋಂಕು ಕಾಣಿಸಿಕೊಂಡ ರೋಗಿ ಅತಿಯಾದ ಚಳಿ, ಜ್ವರ, ಸುಸ್ತಿನಿಂದ ಬಳಲುತ್ತಿದ್ದರು. ಕೊರೋನಾ ಸೋಂಕು ತಗುಲಿರಬಹುದು ಎಂದು ಪರೀಕ್ಷೆ ಮಾಡಿದಾಗ ಹೆಚ್1ಎನ್2 ಸೋಂಕು ಹರಡಿರುವುದು ಪತ್ತೆಯಾಗಿದೆ. ಸದ್ಯದ ಮಟ್ಟಿಗೆ ಈ ವೈರಸ್ ಬೇರೆಯವರಿಗೂ ಹರಡುತ್ತದೆಯಾ? ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಕೆನಡಾದಲ್ಲಿ ಇದು ಹೆಚ್1ಎನ್2 ಮೊದಲ ಪ್ರಕರಣವಾಗಿರುವುದರಿಂದ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸೆಕ್ಯುರಿಟಿಗೆ ಮಾರಕಾಸ್ತ್ರಗಳಿಂದ ಹೆದರಿಸಿ ದರೋಡೆ ಮಾಡಿದ್ದ ಐವರ ಬಂಧನ
ಹೆಚ್1ಎನ್2 ವೈರಸ್ ಹೇಗೆ ರೋಗಿಯ ದೇಹದೊಳಗೆ ಪ್ರವೇಶಿಸಿತು? ಈ ಸೋಂಕು ಸಾಂಕ್ರಾಮಿಕವೇ? ಯಾವೆಲ್ಲ ರೀತಿಯಲ್ಲಿ ಈ ವೈರಸ್ ಹರಡುತ್ತದೆ ಎಂಬ ಬಗ್ಗೆ ಕೆನಡಾದ ಆರೋಗ್ಯ ಇಲಾಖೆ ಅಧ್ಯಯನ ನಡೆಸುತ್ತಿದೆ. 2005ರಿಂದ ಇಡೀ ವಿಶ್ವಾದ್ಯಂತ ಇದುವರೆಗೂ ಕೇವಲ 27 ಹೆಚ್1ಎನ್2 ಸೋಂಕು ಹರಡಿರುವ ಪ್ರಕರಣಗಳು ಪತ್ತೆಯಾಗಿವೆ. ಹೆಚ್1ಎನ್1 ರೀತಿಯ ಲಕ್ಷಣಗಳನ್ನೇ ಹೊಂದಿರುವ ಈ ವೈರಸ್ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ. ಕೆನಡಾದಲ್ಲಿ ಇದು ಮೊದಲ ಪ್ರಕರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ