H-1B Visa Rules: ಎಚ್-1ಬಿ ವೀಸಾ ನಿಷೇಧದ ನಿಯಮ ಸಡಿಲಿಕೆ; ಹಳೇ ಉದ್ಯೋಗಕ್ಕೆ ಮರಳಲು ಅಮೆರಿಕ ಅನುಮತಿ

ಎಚ್-​1ಬಿ ವೀಸಾ ನಿಷೇಧಕ್ಕೂ ಮೊದಲು ಉದ್ಯೋಗಿಗಳು ಯಾವ ಉದ್ಯೋಗದಲ್ಲಿದ್ದರೋ ಆ ಹಳೇ ಉದ್ಯೋಗಕ್ಕೆ ಮರಳಲು ಅಮೆರಿಕ ಸರ್ಕಾರ ಅವಕಾಶ ಕಲ್ಪಿಸಿದೆ.

Sushma Chakre | news18-kannada
Updated:August 13, 2020, 10:11 AM IST
H-1B Visa Rules: ಎಚ್-1ಬಿ ವೀಸಾ ನಿಷೇಧದ ನಿಯಮ ಸಡಿಲಿಕೆ; ಹಳೇ ಉದ್ಯೋಗಕ್ಕೆ ಮರಳಲು ಅಮೆರಿಕ ಅನುಮತಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಆ. 13): ಅಮೆರಿಕದಲ್ಲಿ ಈ ವರ್ಷಾಂತ್ಯದವರೆಗೆ ಎಚ್-​1ಬಿ ವೀಸಾವನ್ನು ರದ್ದುಪಡಿಸಿತ್ತು. ಆದರೆ, ಇದೀಗ ಆ ಆದೇಶವನ್ನು ಸಡಿಲಗೊಳಿಸಲಾಗಿದ್ದು, ಎಚ್-​1ಬಿ ವೀಸಾಗೆ ನಿಷೇಧ ಹೇರುವ ಮೊದಲು ಆ ವೀಸಾದ ಬಳಕೆದಾರರು ಯಾವ ಉದ್ಯೋಗದಲ್ಲಿದ್ದರೋ ಅದೇ ಉದ್ಯೋಗಕ್ಕೆ ಮತ್ತೆ ಮರಳಲು ಇಚ್ಛಿಸುವವರಿಗೆ ಅನುಮತಿ ನೀಡಲಾಗಿದೆ.

ಇತ್ತೀಚೆಗೆ ಹೊಸ ನಿಯಮ ಜಾರಿಗೊಳಿಸಿದ್ದ ಅಮೆರಿಕದ ಟ್ರಂಪ್ ಸರ್ಕಾರ ಎಚ್-​1ಬಿ ವೀಸಾ ಹೊಂದಿರುವ ವಿದೇಶೀಯರಿಗೆ ನಿರ್ಬಂಧ ಹೇರಿತ್ತು. ಆದರೆ, ಇದೀಗ ಅವರಿಗೆ ಅಮೆರಿಕಕ್ಕೆ ಮರಳಲು ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ಎಚ್-​1ಬಿ ಉದ್ಯೋಗ ವೀಸಾ ನಿಷೇಧಕ್ಕೂ ಮೊದಲು ಉದ್ಯೋಗಿಗಳು ಯಾವ ಉದ್ಯೋಗದಲ್ಲಿದ್ದರೋ ಆ ಉದ್ಯೋಗಕ್ಕೆ ಮರಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಅವರು ಬೇರೆ ಉದ್ಯೋಗಗಳಿಗೆ ಸೇರುವಂತಿಲ್ಲ.

ಇದನ್ನೂ ಓದಿ: Bihar Flood: ಬಿಹಾರದಲ್ಲಿ ಪ್ರವಾಹ ಭೀತಿ ಮತ್ತಷ್ಟು ಹೆಚ್ಚಳ; 77 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ


ಎಚ್-​1ಬಿ ವೀಸಾ ಹೊಂದಿದ್ದ ಉದ್ಯೋಗಿಗಳು ತಮ್ಮ ಹಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರುವುದಾದರೆ ಅವರು ಅಮೆರಿಕಕ್ಕೆ ವಾಪಾಸ್ ಬರಬಹುದು. ತಮ್ಮ ಜೊತೆಗೆ ಹೆಂಡತಿ,  ಮಕ್ಕಳನ್ನು ಕೂಡ ಕರೆದುಕೊಂಡು ಬರಬಹುದು. ಅದೇ ಹಳೆಯ ವೀಸಾ ವರ್ಗೀಕರಣದೊಂದಿಗೆ ಎಚ್-​1ಬಿ ವೀಸಾ ಹೊಂದಿದ್ದ ಉದ್ಯೋಗಿಗಳು ಅಮೆರಿಕಕ್ಕೆ ಪ್ರಯಾಣಿಸಬಹುದು ಎಂದು ಅಮೆರಿಕ ಸರ್ಕಾರ ತಿಳಿಸಿದೆ.

ಜಗತ್ತಿನೆಲ್ಲೆಡೆ ಕೊರೋನಾ ಅಬ್ಬರ ಹೆಚ್ಚಾಗಿದ್ದಾಗ ಜೂನ್ 22ರಂದು ಅಮೆರಿಕ ಎಚ್-​1ಬಿ ಉದ್ಯೋಗದ ವೀಸಾವನ್ನು ರದ್ದುಗೊಳಿಸಲಾಗಿತ್ತು. 2020ರ ಅಂತ್ಯದವರೆಗೆ ಎಚ್-​1ಬಿ, ಎಚ್​2-ಬಿ, ಎಲ್​ ಮತ್ತು ಜೆ ವಿಭಾಗಗಳಲ್ಲಿ ಉದ್ಯೋಗದ ವೀಸಾಗಳನ್ನು ರದ್ದುಗೊಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆದೇಶ ಹೊರಡಿಸಿದ್ದರು. ಇದರಿಂದಾಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ವಿದೇಶೀಯರಿಗೆ ಅದರಲ್ಲೂ ಭಾರತೀಯರಿಗೆ ಸಂಕಷ್ಟ ಎದುರಾಗಿತ್ತು.
Published by: Sushma Chakre
First published: August 13, 2020, 10:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading