ವಾರಣಾಸಿ (ಯುಪಿ)(ಮೇ.19): ವಾರಣಾಸಿಯ ಜ್ಞಾನವಾಪಿ ಮಸೀದಿಯ (Gyanvapi Mosque) ಚಿತ್ರೀಕರಣದ ವರದಿಯನ್ನು (Report) ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮಸೀದಿ ಸಂಕೀರ್ಣವನ್ನು ಚಿತ್ರೀಕರಿಸಿದ ತಂಡವು ಮೂರು ಫೋಲ್ಡರ್‌ಗಳಲ್ಲಿ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ಸಲ್ಲಿಸಿದೆ. ಚಿತ್ರೀಕರಣದ ವೀಡಿಯೊಗಳು ಮತ್ತು ಫೋಟೋಗಳಿರುವ ಚಿಪ್ ಅನ್ನು ಸಹ ಹಸ್ತಾಂತರಿಸಲಾಗಿದೆ ಎಂದು ನ್ಯಾಯಾಲಯದಿಂದ (Court) ನೇಮಕಗೊಂಡ ಕಮಿಷನರ್ ವಿಶಾಲ್ ಸಿಂಗ್ ತಿಳಿಸಿದ್ದಾರೆ. ಜ್ಞಾನವಾಪಿ ಸಂಕೀರ್ಣದ ಚಿತ್ರೀಕರಣವನ್ನು (Shooting) ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಸದ್ಯಕ್ಕೆ ಯಾವುದೇ ಆದೇಶಗಳನ್ನು ನೀಡಬೇಡಿ ಎಂದು ವಾರಣಾಸಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಹಿಂದೂ ಅರ್ಜಿದಾರರ ಪರ ವಕೀಲರು ವಿಚಾರಣೆ ಮುಂದೂಡುವಂತೆ ಕೋರಿದ ನಂತರ ನಾಳೆ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣಕ್ಕೆ ಪ್ರವೇಶ ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿಯನ್ನು ವಾರಣಾಸಿ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ಕೊಳದೊಳಗೆ ಇತ್ತು ಶಿವಲಿಂಗ
ಮಸೀದಿಯಲ್ಲಿ ಚಿತ್ರೀಕರಣದಲ್ಲಿ ತೊಡಗಿರುವ ವಕೀಲರೊಬ್ಬರು, ನಮಾಜ್‌ಗೆ ಮೊದಲು ಸಾಂಪ್ರದಾಯಿಕವಾಗಿ "ವಾಝೂ" ಅಥವಾ ಇಸ್ಲಾಮಿಕ್ ಶುದ್ಧೀಕರಣ ಆಚರಣೆಗಳಿಗಾಗಿ ಬಳಸಲಾಗುವ ಕೊಳದೊಳಗೆ "ಶಿವಲಿಂಗ" ಕಂಡುಬಂದಿದೆ ಎಂದು ಹೇಳಿದ್ದಾರೆ.
ಮುಸ್ಲಿಮರ ಪ್ರಾರ್ಥನೆ ತಡೆಯಬೇಡಿ
ಸಂಕೀರ್ಣದಲ್ಲಿ "ಶಿವಲಿಂಗ" ಕಂಡುಬಂದರೆ, ಆ ಪ್ರದೇಶವನ್ನು ರಕ್ಷಿಸಬೇಕು. ಆದರೆ ಮುಸ್ಲಿಮರು ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದನ್ನು ತಡೆಯಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮಸೀದಿಯ ಒಳಗಿನ ವೀಡಿಯೊಗಳು ಮತ್ತು ಫೊಟೋಗಳ ವರದಿ
ಚಿತ್ರೀಕರಣದ ನೇತೃತ್ವದ ಉನ್ನತ ಅಧಿಕಾರಿ, ಅಡ್ವೊಕೇಟ್ ಕಮಿಷನರ್ ಅಜಯ್ ಪ್ರತಾಪ್ ಸಿಂಗ್ ಅವರು, ಮಸೀದಿಯ ಒಳಗಿನ ವೀಡಿಯೊಗಳು ಮತ್ತು ಚಿತ್ರಗಳನ್ನು ಒಳಗೊಂಡಂತೆ ವರದಿಯನ್ನು ತಯಾರಿಸಲು ರಾತ್ರಿಯಿಡೀ ರಾತ್ರಿ ಪೂರಾ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?
ನ್ಯಾಯಾಲಯವು ನಮಗೆ ದೊಡ್ಡ ಜವಾಬ್ದಾರಿಯನ್ನು ನೀಡಿತ್ತು. ಕೊಳಕು ನೆಲಮಾಳಿಗೆಯಲ್ಲೂ ನಾವು ಬಿಸಿಲಿನ ತಾಪದಲ್ಲಿ ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸಿದ್ದೇವೆ. ನಾವು ಎಲ್ಲಾ ಪಕ್ಷಗಳು, ಅರ್ಜಿದಾರರು ಮತ್ತು ಮಸೀದಿ ಪ್ರತಿನಿಧಿಗಳನ್ನು ಕರೆದುಕೊಂಡು ಹೋದೆವು, ಆದ್ದರಿಂದ ಅನುಚಿತತೆಯ ಪ್ರಶ್ನೆಯೇ ಇಲ್ಲ, ಎಂದು ಅವರು ಹೇಳಿದ್ದಾರೆ.
ಕಾಶಿ ವಿಶ್ವನಾಥ ದೇಗುಲದ ನಂದಿ ವಿಗ್ರಹಕ್ಕೆ ಎದುರಿಗಿರುವ ಮಸೀದಿ ಗೋಡೆಗೆ ಎದುರಾಗಿರುವ ಅವಶೇಷಗಳನ್ನು ತೆಗೆದು, ದೇವಾಲಯದ ಭಾಗಗಳೆಂದು ತಾವು ನಂಬಿರುವ ಪ್ರದೇಶಗಳನ್ನು ಪ್ರವೇಶಿಸಲು ಮತ್ತು ಚಿತ್ರೀಕರಿಸಲು ಕೋರಿ ಮೂಲ ಅರ್ಜಿದಾರರಲ್ಲಿ ಮೂವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: Varanasi Gyanvapi Mosque: ವಾರಣಾಸಿಯ ಜ್ಞಾನವಾಪಿ ಮಸೀದಿ ಸರ್ವೆ ನಿಲ್ಲಿಸ್ಬೇಡಿ; ಕೋರ್ಟ್ ಖಡಕ್ ಸೂಚನೆ
ವಾರಣಾಸಿ ನ್ಯಾಯಾಲಯವು ಮಂಗಳವಾರ ಚಿತ್ರೀಕರಣದ ನೇತೃತ್ವ ವಹಿಸಿದ್ದ ಅಜಯ್ ಮಿಶ್ರಾ ಅವರನ್ನು "ವೈಯಕ್ತಿಕ ಕ್ಯಾಮರಾಪರ್ಸನ್" ನೇಮಿಸಿದ ವರದಿಯಿಂದ ಸೋರಿಕೆಯಾಗಿದೆ ಎಂದು ವಜಾಗೊಳಿಸಿದೆ. ಅವರ ಸ್ಥಾನಕ್ಕೆ ತಂಡದ ಸದಸ್ಯ ವಿಶಾಲ್ ಸಿಂಗ್ ಅವರನ್ನು ನೇಮಿಸಲಾಯಿತು.
ಏನಿದು ವಿವಾದ?
ಜ್ಞಾನವ್ಯಾಪಿ ಮಸೀದಿಯು ಉತ್ತರ ಪ್ರದೇಶದ (Uttar Pradesh) ಬನಾರಸ್‌ನಲ್ಲಿದೆ (Banaras). ಇದನ್ನು 1669ರಲ್ಲಿ ಮೊಘಲ ದೊರೆ ಔರಂಗಜೇಬ (Aurangzeb) ಕೆಡವಿದ ಹಳೆಯ ಶಿವ ದೇವಾಲಯದ (Shiva Temple) ಸ್ಥಳದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಈ ಸ್ಥಳವು ಮೂಲತಃ ವಿಶ್ವೇಶ್ವರ ದೇವಸ್ಥಾನವನ್ನು ದಿದ್ದು, ಜೊತೆಯಲ್ಲಿ ಬಸಾರಸ್‌ನ ಅತ್ಯಂತ ಪ್ರಸಿದ್ಧ ಬ್ರಾಹ್ಮಣ ಕುಟುಂಬದ ನಾರಾಯಣ ಭಟ್ಟರು ಸ್ಶಾಪಿಸಿದರು ಎನ್ನಲಾಗಿದೆ. ಜ್ಞಾನವಾಪಿ ಮಸೀದಿಯನ್ನು ಬನಾರಸ್‌ನ ವಿಶ್ವೇಶ್ವರ ದೇವಸ್ಥಾನ ಎಂದು ಜೇಮ್ಸ್ ಪ್ರಿನ್ಸೆಸ್ ಎನ್ನುವವರು ಚಿತ್ರಿಸಿದ್ದಾರೆ. ಈಗ ಕೆಡವಲಾದ ದೇವಾಲಯದ ಮೂಲ ಗೋಡೆ ಇಂದಿಗೂ ಮಸೀದಿಯಲ್ಲಿದೆ. ಇದೀಗ ವಿವಾದವು ನ್ಯಾಯಾಲಯದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ