• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Gyanvapi Masjid: ನಾನು ಮನೆಯಿಂದ ಹೊರಗೆ ಹೋದರೆ ಹೆಂಡತಿ ಭಯ ಪಡುತ್ತಾಳೆ! ನ್ಯಾಯಾಧೀಶರೇ ಹೀಗೆ ಹೇಳಿದ್ಯಾಕೆ?

Gyanvapi Masjid: ನಾನು ಮನೆಯಿಂದ ಹೊರಗೆ ಹೋದರೆ ಹೆಂಡತಿ ಭಯ ಪಡುತ್ತಾಳೆ! ನ್ಯಾಯಾಧೀಶರೇ ಹೀಗೆ ಹೇಳಿದ್ಯಾಕೆ?

ಜ್ಞಾನವಾಪಿ ಮಸೀದಿ

ಜ್ಞಾನವಾಪಿ ಮಸೀದಿ

ಹಿಂದೂ-ಮುಸ್ಲಿಂ ವಿವಾದ ಒಂದು ಕಡೆಯಾದರೆಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಒಳಗೆ ಚಿತ್ರೀಕರಣಕ್ಕೆ ಅನುಮತಿ ನೀಡಿದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಗೆ ಸದ್ಯ ಜೀವ ಭಯ ಕಾಡುತ್ತಿದೆಯಂತೆ.

  • Share this:

ಅಯೋಧ್ಯೆ ರಾಮ ಮಂದಿರ (Ayodhya Ram Mandir) ವಿಚಾರದ ನಂತರ ಇದೀಗ ವಾರಣಾಸಿಯ (Varanasi) ಕಾಶಿ ವಿಶ್ವನಾಥ್ ಮಂದಿರದ (Kashi Vishwanath Mandir) ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ವಿವಾದ (Mosque Controversy) ಹಿಂದೂ ಮತ್ತು ಮುಸ್ಲಿಮರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಹಿಂದೂ-ಮುಸ್ಲಿಂ ವಿವಾದ ಒಂದು ಕಡೆಯಾದರೆ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಒಳಗೆ ಚಿತ್ರೀಕರಣಕ್ಕೆ ಅನುಮತಿ ನೀಡಿದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ (Ravikumar Diwakar) ಸದ್ಯ ಜೀವ ಭಯ ಕಾಡುತ್ತಿದೆಯಂತೆ. ಸಾಮಾನ್ಯ ಸಿವಿಲ್ ವಿಷಯವನ್ನು ಅಸಾಧಾರಣ ಸಮಸ್ಯೆಯಾಗಿ ಪರಿವರ್ತಿಸಿರುವುದರಿಂದ ಅವರ ಕುಟುಂಬವು ನನ್ನ ಸುರಕ್ಷತೆಯ ಬಗ್ಗೆ ಮತ್ತು ನಾನು ಅವರ ಸುರಕ್ಷತೆಯ ಬಗ್ಗೆ ಚಿಂತಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ನಾನು ಮನೆಯಿಂದ ಹೊರಗೆ ಹೋದಾಗೆಲ್ಲಾ ಹೆಂಡತಿ ಭಯ ಪಡುವಂಥ ಸ್ಥಿತಿ ಇದೆ
ವಾರಣಾಸಿಯ ಕೆಳ ನ್ಯಾಯಾಲಯಗಳ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ತಮ್ಮ ತೀರ್ಪಿನಲ್ಲಿ ನಾಗರಿಕ ಪ್ರಕರಣವನ್ನು ದೊಡ್ಡ ವಿಷಯವಾಗಿ ಮಾಡಿ ಭಯದ ವಾತಾವರಣವನ್ನು ಸೃಷ್ಟಿಸಲಾಗಿದೆ. ನನ್ನ ಕುಟುಂಬವು ನನ್ನ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ.


ನಾನು ಮನೆಯಿಂದ ಹೊರಗೆ ಹೋದಾಗೆಲ್ಲಾ ಹೆಂಡತಿ ಭಯ ಪಡುವಂಥ ಸ್ಥಿತಿ ಇದೆ. ನಾನು ಸಮೀಕ್ಷೆ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಮಾಧ್ಯಮಗಳಲ್ಲಿ ಕೆಲವು ವರದಿಗಳು ಬಂದ ನಂತರ ನನ್ನ ತಾಯಿ ಮತ್ತು ಹೆಂಡತಿ ಅಲ್ಲಿಗೆ ಹೋಗಬೇಡಿ ಎಂದು ಒತ್ತಾಯಿಸುತ್ತಿದ್ದಾರೆ. ಅವರಿಗೆ ನನ್ನ ಜೀವದ ಬಗ್ಗೆ ಭಾರಿ ಆತಂಕ ಶುರುವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.


ಜ್ಞಾನವಾಪಿ ಮಸೀದಿಯೊಳಗೆ ವೀಡಿಯೊಗ್ರಫಿ ಮಾಡಬಹುದು
ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಅರ್ಜಿದಾರರು ಕೇಳಿದಂತೆ ಜ್ಞಾನವಾಪಿ ಮಸೀದಿಯೊಳಗೆ ಎಲ್ಲಾ ಸ್ಥಳಗಳಲ್ಲಿ ವೀಡಿಯೊಗ್ರಫಿ ಮಾಡಬಹುದು ಎಂದು ಆದೇಶ ಹೊರಡಿಸಿದೆ.

ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಹಿಂದೂ ದೇಗುಲಕ್ಕೆ ವರ್ಷಪೂರ್ತಿ ಪ್ರವೇಶವನ್ನು ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಗಳ ನಂತರ ಏಪ್ರಿಲ್‌ನಲ್ಲಿ ನ್ಯಾಯಾಲಯವು ತಪಾಸಣೆಗೆ ಆದೇಶಿಸಿತ್ತು.


ಏನಿದು ಜ್ಞಾನವಾಪಿ ಮಸೀದಿ ವಿವಾದ?
1669ರಲ್ಲಿ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯ ಪುರೋಹಿತರ ಗುಂಪೊಂದು ವಾರಣಾಸಿ ನ್ಯಾಯಾಲಯಕ್ಕೆ ತೆರಳಿ 1991 ರಲ್ಲಿ ಅರ್ಜಿ ಸಲ್ಲಿಸಿತ್ತು. ಅಲ್ಲಿಂದ ಶುರುವಾದ ವಿವಾದ ಸದ್ಯ ಸರ್ವೇಕ್ಷಣೆ ನಡೆಸುವವರೆಗೆ ಬಂದು ತಲುಪಿದೆ.


ಇದನ್ನೂ ಓದಿ:  Kali Swamy: ಪೂಜೆ ಮುಗಿಸಿ ಹಿಂದಿರುಗ್ತಿದ್ದ ಕಾಳಿ ಸ್ವಾಮಿ ಮುಖಕ್ಕೆ ಮಸಿ: ನಾನು ನಿಮ್ಮನ್ನ ತಲುಪಿದ್ದೇನೆ ಅಂದ್ರು ಸ್ವಾಮೀಜಿ

ಜ್ಞಾನವಾಪಿ ಮಸೀದಿ ಆವರಣದಲ್ಲಿ ಶೃಂಗಾರ್ ಗೌರಿ ಮತ್ತಿತರ ದೇವರುಗಳ ವಿಗ್ರಹಗಳಿದ್ದು ಅಲ್ಲಿ ದಿನವೂ ಪೂಜೆ ಸಲ್ಲಿಸಬೇಕೆಂದು ಐವರು ಮಹಿಳೆಯರು ಕಳೆದ ವರ್ಷ ವಿಶೇಷ ಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿರುವ ಹಿಂದೂ ದೇವರ ವಿಗ್ರಹಗಳಿಗೆ ಯಾವುದೇ ಹಾನಿಯಾಗದಂತೆ ಭದ್ರತೆ ಒದಗಿಸಬೇಕೆಂದು ಇವರು ಕೋರಿದ್ದರು.


ಗೋಚರ ಮತ್ತು ಅದೃಶ್ಯ ದೇವತೆಗಳ ಪತ್ತೆಗಾಗಿ ಅನುಮತಿ ಕೇಳಿ ಅರ್ಜಿ
ಈ ಅರ್ಜಿ ಮೇರೆಗೆ ವಾರಾಣಸಿಯ ಸಿವಿಲ್ ಕೋರ್ಟ್, ಅಡ್ವೊಕೇಟ್ ಆಯುಕ್ತರಿಗೆ ಈದ್ ಬಳಿಕ ಆ ಸ್ಥಳದಲ್ಲಿ ವಿಡಿಯೋ ಸರ್ವೆ ನಡೆಸಿ ಮೇ 10ರೊಳಗೆ ವರದಿ ಸಲ್ಲಿಸಬೇಕೆಂದು ಏಪ್ರಿಲ್ 26ರಂದು ಆದೇಶ ಮಾಡಿತ್ತು. ಇಲ್ಲಿ ಪ್ರಸ್ತುತ ವರ್ಷಕ್ಕೊಮ್ಮೆ ಪ್ರಾರ್ಥನೆಗಾಗಿ ತೆರೆದಿರುತ್ತದೆ. ಮಹಿಳೆಯರು ಅಲ್ಲಿ ನಿಯಮಿತವಾಗಿ ಪ್ರಾರ್ಥನೆ ಸಲ್ಲಿಸಲು ಮತ್ತು ಹಳೆಯ ದೇವಾಲಯದ ಸಂಕೀರ್ಣದಲ್ಲಿರುವ ಇತರ "ಗೋಚರ ಮತ್ತು ಅದೃಶ್ಯ ದೇವತೆಗಳ” ಪತ್ತೆಗಾಗಿ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದರು.


ಇದನ್ನೂ ಓದಿ: Online Scam: 100 ರೂ. ಲಿಪ್​ಸ್ಟಿಕ್ ಕೊಳ್ಳುವ ಭರದಲ್ಲಿ ಕಳೆದುಕೊಂಡಿದ್ದು ಲಕ್ಷ ಲಕ್ಷ!

ಸ್ಥಳೀಯ ನ್ಯಾಯಾಲಯವು ಈ ಹಿಂದೆ ಮೇ 10 ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು. ಕಳೆದ ಶುಕ್ರವಾರ ಪ್ರಾರಂಭವಾದ ಸಮೀಕ್ಷೆಯು ಮಸೀದಿಯೊಳಗೆ ವೀಡಿಯೋಗ್ರಫಿ ವಿವಾದದ ಕಾರಣ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮೇ 17 ರೊಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ನಿನ್ನೆ ಗುರುವಾರ ನೀಡಿದ ತೀರ್ಪಿನಲ್ಲಿ ವಾರಣಾಸಿಯ ನ್ಯಾಯಾಲಯವು, ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಸಂಕೀರ್ಣದಲ್ಲಿ ಮೇ 17ರೊಳಗೆ ಸರ್ವೇಕ್ಷಣೆ ನಡೆಸಬೇಕು ಎಂದು ತಿಳಿಸಿದೆ.

Published by:Ashwini Prabhu
First published: