ನವದೆಹಲಿ, ಮೇ 24: ಅಯೋಧ್ಯೆಯ (Ayodhya) ಬಾಬರಿ ಮಸೀದಿ (Babari Masajid) ಪ್ರಕರಣದ ಬೆನ್ನಲ್ಲೇ ವಾರಣಾಸಿಯ ಜ್ಞಾನವಾಪಿ ಮಸೀದಿ (Varanasi Gyanvapi Masajid) ದೇಶಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಾಣಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು (District Sessions Court) ಇಂದು ಐವರು ಹಿಂದೂ ಮಹಿಳೆಯರು (Women) ಸಲ್ಲಿಸಿರುವ ಅರ್ಜಿಯನ್ನು (Plea) ಮೊದಲು ವಿಚಾರಣೆ ನಡೆಸಬೇಕೋ ಅಥವಾ ವಾರಣಾಸಿಯ ಜ್ಞಾನವಾಪಿ ಮುಸೀದಿ ನಿರ್ವಹಣೆ ಮಾಡುತ್ತಿರುವ ಅಂಜುಮಾನ್ ಇಂತೆ ಝಾಮಿಯಾ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಬೇಕೋ ಎಂಬ ಬಗ್ಗೆ ಆದೇಶ ಹೊರಡಿಸಲಿದೆ.
ಹಿಂದೂ ಮಹಿಳೆಯರ ಅರ್ಜಿಯ ಬೇಡಿಕೆ ಏನು?
ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಂಡುಬಂದಿವೆ. ಆ ಹಿಂದೂ ದೇವತೆಗಳ ಪೂಜೆಗೆ ಅವಕಾಶ ನೀಡಬೇಕು. ಜೊತೆಗೆ ಇತ್ತೀಚೆಗೆ ನಡೆದ ವಿಡಿಯೋ ಸಮೀಕ್ಷೆ ವೇಳೆ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ಶಿವಲಿಂಗ ಮತ್ತು ಶೃಂಗಾರ ಗೌರಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ವಾರಣಾಸಿಯ ಐವರು ಹಿಂದೂ ಮಹಿಳೆಯರು ವಾರಣಾಸಿ ಜಿಲ್ಲಾ ಸೆಷನ್ ಕೋರ್ಟಿನಲ್ಲಿ ಸಿವಿಲ್ ಅರ್ಜಿ ಸಲ್ಲಿಸಿದ್ದಾರೆ.
ಮಸೀದಿ ಪರ ವಕೀಲರ ಅರ್ಜಿಯಲ್ಲಿ ಏನಿದೆ?
ಐವರು ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿಗೆ ಜ್ಞಾನವಾಪಿ ಮುಸೀದಿ ನಿರ್ವಹಣೆ ಮಾಡುತ್ತಿರುವ ಅಂಜುಮಾನ್ ಇಂತೆ ಝಾಮಿಯಾ ಸಮಿತಿಯ ಆಕ್ಷೇಪಣೆ ಎತ್ತಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಲವು ದಶಕಗಳಿಂದ ನಮಾಜ್ ನಡೆಯುತ್ತಿದೆ.
ಇದನ್ನೂ ಓದಿ: Sri Lanka: “ಸಾವೊಂದೇ ಕಟ್ಟ ಕಡೆಯ ಆಯ್ಕೆ ಅದು ನೂರು ಪ್ರತಿಶತ ಸಂಭವಿಸುತ್ತದೆ"; ಆಹಾರ ಕೊರತೆಯ ಬಗ್ಗೆ ಶ್ರೀಲಂಕಾ ಎಚ್ಚರಿಕೆ
1991ರ ಪೂಜಾ ಸ್ಥಳಗಳ ಕಾಯ್ದೆಯ ಅನ್ವಯ ಮಸೀದಿಯ ಮೇಲೆ ಸಿವಿಲ್ ದಾವೆ ಹೂಡಿರುವುದು ಕಾನೂನು ಬಾಹಿರವಾಗಿದೆ. ಕಾಯ್ದೆಯಲ್ಲಿ ಮಸೀದಿ ವಿರುದ್ಧ ದೂವೆ ಹೂಡಲು ಅವಕಾಶ ಇಲ್ಲ. ಆದುದರಿಂದ ಹಿಂದೂಗಳ ಅರ್ಜಿಯನ್ನು ತಕ್ಷಣವೇ ವಜಾ ಮಾಡಬೇಕು ಎಂದು ಮನವಿ ಮಾಡಿದೆ.
ಸಿವಿಲ್ ಕೋರ್ಟ್ ಟು ಸುಪ್ರೀಂ ಕೋರ್ಟ್
ಈ ಎರಡೂ ಅರ್ಜಿಗಳನ್ನು ವಾರಾಣಸಿ ಜಿಲ್ಲಾ ಸಿವಿಲ್ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ವಿಚಾರಣೆ ವೇಳೆ ಮಸೀದಿಯಲ್ಲಿ ವಿಡಿಯೊ ಸಮೀಕ್ಷೆ ನಡೆಸಲು ಆಯೋಗ ರಚಿಸಿ ಆದೇಶ ಮಾಡಿತ್ತು. ಆಯೋಗ ರಚನೆಯ ಆದೇಶದ ವಿರುದ್ಧ ಅಂಜುಮಾನ್ ಇಂತೆ ಝಾಮಿಯಾ ಸಮಿತಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅಲಹಾಬಾದ್ ಹೈಕೋರ್ಟ್ ಮೇಲ್ಮನವಿ ವಜಾ ಮಾಡಿದ ಹಿನ್ನೆಲೆಯಲ್ಲಿ ಅಂಜುಮಾನ್ ಇಂತೆ ಝಾಮಿಯಾ ಸಮಿತಿಯು ಸುಪ್ರೀಂ ಕೋರ್ಟಿಗೆ ಮೊರೆ ಹೋಗಿತ್ತು.
ಸುಪ್ರೀಂ ಕೋರ್ಟ್ ಟು ಸೆಷನ್ ಕೋರ್ಟ್
ಕಳೆದ ವಾರ ಅಂಜುಮಾನ್ ಇಂತೆ ಝಾಮಿಯಾ ಸಮಿತಿಯ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜ್ಞಾನವಾಪಿ ಮಸೀದಿಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿ ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ವಾರಣಾಸಿಯ ಜಿಲ್ಲಾ ಸೆಷನ್ ಕೋರ್ಟ್ ಹಿರಿಯ ಅನುಭವಿ ನ್ಯಾಯಾಧೀಶರು ವಿಚಾರಣೆ ನಡೆಸಬೇಕು ಎಂದು ಆದೇಶ ನೀಡಿತು. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ವಾರಣಾಸಿ ಜಿಲ್ಲಾ ಸೆಷನ್ ಕೋರ್ಟಿನ ನ್ಯಾ. ಡಾ. ಅಜಯ್ ಕೃಷ್ಣ ಅವರು ನಿನ್ನೆ ವಿಚಾರಣೆ ಆರಂಭಿಸಿದರು.
ಇದನ್ನೂ ಓದಿ: Gyanvapi Mosque Case: ಜ್ಞಾನವಾಪಿ ಮಸೀದಿ ಪ್ರಕರಣವನ್ನು ‘ಅನುಭವಿ’ ಆಲಿಸಲಿ ಎಂದು ಸುಪ್ರೀಂ ಹೇಳಿದ್ದೇಕೆ?
ಇಂದು ಮಹತ್ವದ ನಿರ್ಧಾರ
ನಿನ್ನೆಯ ವಿಚಾರಣೆ ವೇಳೆ ಹಿಂದೂ ಮಹಿಳೆಯರ ಪರ ವಕೀಲರು ಕೋರ್ಟ್ ಈಗಾಗಲೇ ಆಯೋಗ ರಚಿಸಿ ವರದಿ ತರಿಸಿಕೊಂಡಿದೆ. ಹಾಗಾಗಿ ನಮ್ಮ ಅರ್ಜಿಯನ್ನು ಮೊದಲು ವಿಚಾರಣೆ ಮಾಡಿ ಎಂದು ವಾದ ಮಾಡಿದರು. ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ಮಸೀದಿ ನಿರ್ವಹಣಾ ಸಂಸ್ಥೆ ಅಂಜುಮಾನ್ ಇಂತೆ ಝಾಮಿಯಾ ಸಮಿತಿಯ ವಕೀಲರು ವಾದ ಮಾಡಿದರು. ಎರಡೂ ವಾದ ಆಲಿಸಿದ ನ್ಯಾ. ಡಾ. ಅಜಯ್ ಕೃಷ್ಣ 'ಯಾರ ಅರ್ಜಿಯನ್ನು ಮೊದಲು ವಿಚಾರಣೆ ನಡೆಸಬೇಕೆಂದು ಮಂಗಳವಾರ ನಿರ್ಧರಿಸುವುದಾಗಿ' ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ