ಅದೃಷ್ಟ ಪರೀಕ್ಷೆಗೆ ಹೀಗೂ ಮಾಡ್ತಾರಾ..?; ಆಟಕ್ಕೆ ಜೀವವೇ ಬಲಿ
news18
Updated:September 11, 2018, 4:47 PM IST
news18
Updated: September 11, 2018, 4:47 PM IST
-ನ್ಯೂಸ್ 18 ಕನ್ನಡ
ಭೋಪಾಲ್,(ಸೆ.11): 21 ವರ್ಷದ ಯುವತಿಯೋರ್ವಳು ತನ್ನ ಗೆಳತಿಯ ಜೊತೆ ವಾಟ್ಸಾಪ್ ವಿಡಿಯೋ ಚಾಟ್ನಲ್ಲಿ ಮಾರಕ 'ರಷ್ಯನ್ ರೂಲೆಟ್' ಗೇಮ್ ಆಡುವಾಗ ರಿವಾಲ್ವರ್ನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಕರೀಷ್ಮಾ ಯಾದವ್ ಮೃತಪಟ್ಟ ದುರ್ದೈವಿ. ಈಕೆ ಮಧ್ಯಪ್ರದೇಶದ ನಿವೃತ್ತ ಪೊಲೀಸ್ ಸಬೇದಾರ್ ಅರವಿಂದ್ ಯಾದವ್ ಅವರ ಮಗಳು ಎನ್ನಲಾಗಿದೆ. ಕರೀಷ್ಮಾ ಶುಕ್ರವಾರ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ತನ್ನ ಗೆಳತಿ ನಜ್ಮಾ ಜೊತೆ ವಾಟ್ಸಾಪ್ ವಿಡಿಯೋ ಚಾಟ್ನಲ್ಲಿ 'ರಷ್ಯನ್ ರೂಲೆಟ್' ಗೇಮ್ ಆಡುತ್ತಿದ್ದಳು. ಇದು ಜೀವಕ್ಕೆ ಕುತ್ತು ತರುವ ಆಟವಾಗಿದ್ದು, ಈ ವೇಳೆ ಕರೀಷ್ಮಾ ತನ್ನ ಅದೃಷ್ಟವನ್ನು ಪರೀಕ್ಷಿಸಲು ತನ್ನ ತಂದೆಯ ರಿವಾಲ್ವರ್ನಿಂದ ತಲೆಗೆ ಶೂಟ್ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರೀಷ್ಮಾ ತನ್ನ ಗೆಳತಿ ನಜ್ಮಾ ಜೊತೆಗೆ ಮಾತನಾಡಿರುವ ಕೊನೆಯ ಫೋನ್ ಕರೆಯ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ನಜ್ಮಾ ಗೆಳತಿ ಕರೀಷ್ಮಾ ಜೊತೆಗೆ ರಿವಾಲ್ವರ್ನಿಂದ ಆಡಿದ ಆಟ ಮತ್ತು ಅವರಿಬ್ಬರ ನಡುವೆ ನಡೆದಿರುವ ಮಾತುಕತೆ ಬಗ್ಗೆ ನಜ್ಮಾಳಿಂದ ಮತ್ತಷ್ಟು ಮಾಹಿತಿ ಪಡೆದಿದ್ದೇವೆ ಎಂದು ತನಿಖಾಧಿಕಾರಿ ಸುದೇಶ್ ತಿವಾರಿ ಹಿಂದೂಸ್ತಾನ್ ಟೈಮ್ಸ್ಗೆ ತಿಳಿಸಿದ್ದಾರೆ.ವಾಟ್ಸಪ್ ಲೈವ್ ವಿಡಿಯೋ ಚಾಟ್ನಲ್ಲಿ ಕರೀಷ್ಮಾ ತನ್ನ ಬಳಿಯಿದ್ದ ರಿವಾಲ್ವರ್ನ್ನು ನಜ್ಮಾಗೆ ತೋರಿಸಿ, "ಈ ರಿವಾಲ್ವರ್ನಲ್ಲಿ ಒಂದೇ ಒಂದು ಬುಲೆಟ್ ಇದೆ. ಆದರೆ ಅದು ಎಲ್ಲಿದೆ ಎಂದು ಗೊತ್ತಿಲ್ಲ". ಎಂದು ಹೇಳುತ್ತಾಳೆ. ನಂತರ ಆಕೆ ರಿವಾಲ್ವರ್ನ್ನು ತನ್ನ ಕಿವಿಯ ಮೇಲೆ ಇಟ್ಟುಕೊಂಡು, "ನನ್ನ ಅದೃಷ್ಟದಲ್ಲಿ ಸಾವು ಬರೆದಿದೆಯಾ ಎಂದು ನೋಡೋಣ" ಎಂದು ಹೇಳಿದಳು. ನಂತರ ಫೋನ್ ಕಾಲ್ ಸಂಪರ್ಕ ಕಡಿತಗೊಂಡಿತು. ಬಹುಶಃ ಆ ಸಮಯದಲ್ಲಿ ಕರೀಷ್ಮಾ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾಳೆ ಎಂದು ನಜ್ಮಾ ಪೊಲೀಸರಿಗೆ ತಿಳಿಸಿದ್ದಾಳೆ.
ಕರೀಷ್ಮಾಳ ಅಣ್ಣ ಮಾರ್ಕೆಟ್ನಿಂದ ಮನೆಗೆ ವಾಪಸ್ಸಾದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾಳೆ. ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆದರೆ ಸೋಮವಾರ ಬೆಳಿಗ್ಗೆ ಆಕೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

Loading...