ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಗರಣ; ಜಿವಿಕೆ ಮುಖ್ಯಸ್ಥನ ವಿರುದ್ಧ ಕೇಸ್​ ದಾಖಲಿಸಿದ ಸಿಬಿಐ

2012-18 ಅವಧಿಯಲ್ಲಿ ಮುಂಬೈ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಮಾಡಲು ಹಾಗೂ ನಿರ್ವಹಣೆ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಜಿವಿಕೆ ಏರ್ಪೋರ್ಟ್ ಹೋಲ್ಡಿಂಗ್ಸ್ ಒಂದಾಗಿದ್ದವು. ಈ ವೇಳೆ 705 ಕೋಟಿ ರೂಪಾಯಿ ಅಕ್ರಮ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ.

news18-kannada
Updated:July 2, 2020, 11:53 AM IST
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಗರಣ; ಜಿವಿಕೆ ಮುಖ್ಯಸ್ಥನ ವಿರುದ್ಧ ಕೇಸ್​ ದಾಖಲಿಸಿದ ಸಿಬಿಐ
ಮುಂಬೈ ವಿಮಾನ ನಿಲ್ದಾಣ
  • Share this:
ಮುಂಬೈ (ಜು.2): ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ 705 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಗಿವಿಕೆ ಗ್ರುಪ್​ನ ಮುಖ್ಯಸ್ಥ ವೆಂಕಟೇಶ್​ ಕೃಷ್ಣ ರೆಡ್ಡಿ, ಅವರ ಮಗ ಜಿವಿ ರೆಡ್ಡಿ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಕೇಸ್​ ದಾಖಲು ಮಾಡಿಕೊಂಡಿದೆ.

ಜಿವಿಕೆ ಏರ್​ಪೋರ್ಟ್​ ಹೋಲ್ಡಿಂಗ್ಸ್​ ಲಿಮಿಟೆಡ್​, ಏ​ಪೋರ್ಟ್​ ಅಥೋರಿಟಿ ಆಫ್​ ಇಂಡಿಯಾ (ಎಎಐ) ಹಾಗೂ ಕೆಲ ವಿದೇಶಿ ಘಟಕಗು ಸೇರಿ ಮುಂಬೈ ಇಂಟರ್​ ನ್ಯಾಷನಲ್​ ಏರ್​ಪೋರ್ಟ್​ ಲಿಮಿಟೆಡ್​ (ಎಂಐಎಎಲ್​) ವೆಂಚರ್​ ರಚನೆ ಮಾಡಿದ್ದವು. ಜಿವಿಕೆ ಶೇ.50.5 ಹಾಗೂ ಎಎಐ ಶೇ. 26 ಶೇರು ಹೊಂದಿತ್ತು.

ಎಂಐಎಎಲ್​ಗೆ ಮುಂಬೈ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ನೀಡಲಾಗಿತ್ತು. ವಿಮಾನ ನಿಲ್ದಾಣದಿಂದ ಬರುವ ಆದಾಯದಲ್ಲಿ ಶೇ. 38.7 ಹಣವನ್ನು ವರ್ಷದ ಸಂಭವಾನೆ ಎಂದು ಎಎಐಗೆ ನೀಡಬೇಕು ಹಾಗೂ ಉಳಿದ ಹಣವನ್ನು ವಿಮಾನ ನಿಲ್ದಾಣದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು.

2012-18 ಅವಧಿಯಲ್ಲಿ ಯಾವುದೇ ಕೆಲಸ ಮಾಡದಿದ್ದರೂ ಸಾಕಷ್ಟು ಕೆಲಸಗಳನ್ನು ಮಾಡಿರುವುದಾಗಿ ತೋರಿಸಿ ಜಿವಿಕೆ ಸುಮಾರು 705 ಕೋಟಿ ರೂಪಾಯಿ ಹಣ ನುಂಗಿದೆ ಎನ್ನಲಾಗಿದೆ.
First published: July 2, 2020, 11:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading