Ambubachi Mela: ಗುವಾಹಟಿ ಕಾಮಾಕ್ಯ ದೇವಾಲಯದ ಪವಿತ್ರ ಅಂಬುಬಾಚಿ ಮೇಳ ಶುರು!

ಎರಡು ವರ್ಷಗಳಿಂದ ನಡೆಯದೆ ಇದ್ದಂತಹ ಅಸ್ಸಾಂನ ಗುವಾಹಟಿ ಭಾಗದ ಭಕ್ತರ ಅತಿದೊಡ್ಡ ಮೇಳವಾದ ಅಂಬುಬಾಚಿ ಮೇಳವು ಬುಧವಾರ ಪ್ರಾರಂಭವಾಯಿತು. ಪ್ರಸಿದ್ಧ ಕಾಮಾಕ್ಯ ದೇವಸ್ಥಾನದಲ್ಲಿ ಈ ಮೇಳವು ನಡೆಯುತ್ತಿದ್ದು, ಎರಡು ವರ್ಷಗಳ ನಂತರ ಮತ್ತೊಮ್ಮೆ ಭಕ್ತರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಗುವಾಹಟಿ ಕಾಮಾಕ್ಯ ದೇವಾಲಯ

ಗುವಾಹಟಿ ಕಾಮಾಕ್ಯ ದೇವಾಲಯ

  • Share this:
ದೇಶಾದ್ಯಂತ ಅನೇಕ ದೇವಾಲಯಗಳು (Temples) ಈ ಕೋವಿಡ್ -19 ಸಾಂಕ್ರಾಮಿಕ ರೋಗದ ಹಾವಳಿಂದಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ರೀತಿಯ ಮೇಳ ಮತ್ತು ಜಾತ್ರೆಯನ್ನು (Fair) ಮಾಡಿರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಚಾರವೇ ಆಗಿದೆ. ಹೀಗೆಯೇ ಎರಡು ವರ್ಷಗಳಿಂದ ನಡೆಯದೆ ಇದ್ದಂತಹ ಅಸ್ಸಾಂನ ಗುವಾಹಟಿ (Guwahati) ಭಾಗದ ಭಕ್ತರ ಅತಿದೊಡ್ಡ ಮೇಳವಾದ ಅಂಬುಬಾಚಿ ಮೇಳವು (Ambubachi Mela) ಬುಧವಾರ ಪ್ರಾರಂಭವಾಯಿತು. ಪ್ರಸಿದ್ಧ ಕಾಮಾಕ್ಯ ದೇವಸ್ಥಾನದಲ್ಲಿ (Kamakhya Temple) ಈ ಮೇಳವು ನಡೆಯುತ್ತಿದ್ದು, ಎರಡು ವರ್ಷಗಳ ನಂತರ ಮತ್ತೊಮ್ಮೆ ಭಕ್ತರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಧಾರ್ಮಿಕ ಆಚರಣೆಗಳ ಭಾಗವಾಗಿ, ಬುಧವಾರ 'ಪ್ರವೃತ್ತಿ'ಯೊಂದಿಗೆ ನಾಲ್ಕು ದಿನಗಳ ಕಾಲ ದೇವಾಲಯದ ಬಾಗಿಲುಗಳನ್ನು ಸಾಂಕೇತಿಕವಾಗಿ ಮುಚ್ಚಲಾಗಿದೆ ಎಂದು ಕಾಮಾಕ್ಯ ದೇವಾಲಯದ ಪ್ರಧಾನ ಅರ್ಚಕರಾದ ಕಬಿನಾಥ್ ಶರ್ಮಾ ತಿಳಿಸಿದ್ದಾರೆ.

ಶುಭ ಅಂಬುಬಾಚಿ ಮೇಳ
ಜೂನ್ 26ರ ಬೆಳಿಗ್ಗೆ 'ನಿವೃತಿ' ಅಥವಾ ಬಾಗಿಲು ತೆರೆಯುವ ಕಾರ್ಯಕ್ರಮ ನಡೆಯಲಿದೆ ಎಂದು ಅರ್ಚಕರು ಹೇಳಿದರು. ರಾಜ್ಯದಲ್ಲಿನ ವಿನಾಶಕಾರಿ ಪ್ರವಾಹದ ಹಿನ್ನೆಲೆಯಲ್ಲಿ, ಈ ಬಾರಿ ಉತ್ಸವವನ್ನು ತುಂಬಾನೇ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಇವರು ತಿಳಿಸಿದರು.

ಮುಖ್ಯಮಂತ್ರಿಯಿಂದ ಪ್ರಾರ್ಥನೆ
"ಶುಭ ಅಂಬುಬಾಚಿ ಮೇಳ ಬುಧವಾರದಂದು ಪ್ರಾರಂಭವಾಗಿದೆ,. ಎಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಆ ದೇವತೆ ನಿಮಗೆಲ್ಲಾ ಕರುಣಿಸಲಿ ಅಂತ ಕಾಮಾಕ್ಯ ದೇವತೆಯನ್ನು ಪ್ರಾರ್ಥಿಸುತ್ತೇನೆ, ಜೊತೆಗೆ ಎಲ್ಲಾ ದುಷ್ಕೃತ್ಯಗಳನ್ನು ತೊಡೆದು ಹಾಕಲು ನಮಗೆ ದೇವತೆ ಸಹಾಯ ಮಾಡುತ್ತಾರೆ" ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಪುಟದಲ್ಲಿ ಟ್ವೀಟ್ ಮಾಡಿದ್ದಾರೆ.

ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ವಿಸ್ತೃತ ವ್ಯವಸ್ಥೆ
ಗುವಾಹಟಿಯ ನಿಲಚಲ್ ಬೆಟ್ಟಗಳ ಮೇಲಿರುವ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ವಿಸ್ತೃತ ವ್ಯವಸ್ಥೆಗಳನ್ನು ಮಾಡಲಾಗಿದೆ, ಆದರೆ ಯಾವುದೇ ವೈಯಕ್ತಿಕ ವಾಹನಗಳು ಅಥವಾ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲಾಗುತ್ತಿಲ್ಲ ಎಂದು ಕಾಮರೂಪ್ ಮೆಟ್ರೋಪಾಲಿಟನ್ ನ ಡೆಪ್ಯುಟಿ ಕಮಿಷನರ್ ಆದಂತಹ ಪಲ್ಲವ್ ಗೋಪಾಲ್ ಝಾ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

30,000 ಭಕ್ತರನ್ನು ಇರಿಸುವ  ಮೂರು ಟೆಂಟ್ ವಸತಿಗೃಹ ಸ್ಥಾಪನೆ
ಜಿಲ್ಲಾಡಳಿತವು ಒದಗಿಸುವ ವಾಹನಗಳಲ್ಲಿಯೇ ಹಿರಿಯ ನಾಗರಿಕರು ಮತ್ತು ವಿಶೇಷ ಅಗತ್ಯವುಳ್ಳ ಭಕ್ತರನ್ನು ಬೆಟ್ಟದ ತುದಿಗೆ ಕರೆದೊಯ್ಯಲಾಗುತ್ತಿದೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು. ಅಲ್ಲದೆ ಇಲ್ಲಿಗೆ ಬಂದಂತಹ ಭಕ್ತರು ಉಳಿದುಕೊಳ್ಳುವುದಕ್ಕೆ ಪಾಂಡು ಪೋರ್ಟ್ ಕ್ಯಾಂಪ್, ಮಾಲಿಗಾಂವ್ ಮತ್ತು ಫ್ಯಾನ್ಸಿ ಬಜಾರ್ ನಲ್ಲಿರುವ ಓಲ್ಡ್ ಜೈಲ್ ಕಾಂಪ್ಲೆಕ್ಸ್ ನಲ್ಲಿ ತಲಾ 30,000 ಭಕ್ತರನ್ನು ಇರಿಸುವ ಸಾಮರ್ಥ್ಯದ ಮೂರು ಟೆಂಟ್ ವಸತಿಗೃಹಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:  Viral Video: ಜೀವದ ಹಂಗು ತೊರೆದು ಕರ್ತವ್ಯ ಪಾಲನೆ! ಇವರು ಮಾಡಿದ ಕೆಲಸವೇನು ನೋಡಿ

ದೇವಾಲಯಕ್ಕೆ ಹೋಗುವ ರಸ್ತೆಯುದ್ದಕ್ಕೂ ನಿಯೋಜಿತ ಸ್ಥಳಗಳಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರಿನ ಮತ್ತು ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫಲವತ್ತತೆಯ ಅಂಬುಬಾಚಿ ಮೇಳವು ಈ ದೇವಾಲಯದ ಅತ್ಯಂತ ಪ್ರಮುಖ ಧಾರ್ಮಿಕ ಘಟನೆಯಾಗಿದೆ. ಇದು ರಾಜ್ಯದ ಪ್ರವಾಸೋದ್ಯಮ ಕ್ಯಾಲೆಂಡರ್ ನ ಪ್ರಮುಖ ಭಾಗವಾಗಿದ್ದು, ಉತ್ಸವದ ಸಮಯದಲ್ಲಿ ಸಾಮಾನ್ಯವಾಗಿ ಸುಮಾರು 25 ಲಕ್ಷ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ.

ನಾಲ್ಕು ದಿನ ದೇವಾಲಯದ ಬಾಗಿಲು ಮುಚ್ಚಿರುವುದು ಏಕೆ?
ದೇವಾಲಯದ ಬಾಗಿಲುಗಳನ್ನು ನಾಲ್ಕು ದಿನಗಳವರೆಗೆ ಮುಚ್ಚಲಾಗುತ್ತದೆ, ಇದು ಕಾಮಾಕ್ಯ ದೇವಿಯ ವಾರ್ಷಿಕ ಋತುಚಕ್ರವು ಈ ಸಮಯದಲ್ಲಿ ಸಂಭವಿಸುತ್ತದೆ ಎಂಬ ನಂಬಿಕೆಯನ್ನು ಸೂಚಿಸುತ್ತದೆ. ಐದನೇ ದಿನ ಭಕ್ತರಿಗಾಗಿ ಈ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ.

ಇದನ್ನೂ ಓದಿ:  Man Steals Puppy: ಮಾಂಸದ ಅಡುಗೆ ತಿನ್ನಲು ನಾಯಿಮರಿ ಕದ್ದ ವ್ಯಕ್ತಿ!

ಕಳೆದ ಎರಡು ವರ್ಷಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಾಮಾಕ್ಯ ದೇವಾಲಯವನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು ಮತ್ತು ಅಂಬುಬಾಚಿ ಆಚರಣೆಗಳನ್ನು ಪುರೋಹಿತರು ಮಾತ್ರ ಮಾಡುತ್ತಿದ್ದರು. 2020 ರಲ್ಲಿ ಮಾರ್ಚ್ 20 ರಿಂದ ಅಕ್ಟೋಬರ್ 11 ರವರೆಗೆ ದೇವಾಲಯವನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು ಮತ್ತು ಕಳೆದ ವರ್ಷ ಎಂದರೆ 2021 ರಲ್ಲಿ ಮೇ 13 ರಿಂದ ಆಗಸ್ಟ್ 21 ರವರೆಗೆ ಮತ್ತೊಮ್ಮೆ ದೇವಾಲಯವನ್ನು ಸಾರ್ವಜನಿಕರಿಗಾಗಿ ಮುಚ್ಚಲಾಗಿತ್ತು.
Published by:Ashwini Prabhu
First published: