ಕೇರಳ/ತಿರುವನಂತಪುರಂ: ಭಾರತದ ಶ್ರೀಮಂತ ದೇಗುಲಗಳಲ್ಲಿ ಗುರುವಾಯೂರಿನ (Guruvayur Devaswom) ಶ್ರೀ ಕೃಷ್ಣ ದೇಗುಲ (Sree Krishna Guruvayur Temple) ಕೂಡ ಒಂದು. ಕೇರಳದ (Kerala) ಮಧ್ಯ ಭಾಗದಲ್ಲಿ ಇರುವ ಈ ದೇವಾಲಯದಲ್ಲಿ 263.637 ಕೆ.ಜಿ. ಚಿನ್ನದ (Gold) ಸಂಗ್ರಹವಿದೆ. ಅಷ್ಟೇ ಅಲ್ಲದೇ ಬರೋಬ್ಬರಿ 1,700 ಕೋಟಿ ರೂ. ಬ್ಯಾಂಕ್ ಠೇವಣಿ ಹೊಂದಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ. ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಗುರುವಾಯೂರು ಶ್ರೀಕೃಷ್ಣ ದೇಗುಲದ ಆಡಳಿತ ಮಂಡಳಿಯು, ತನ್ನ ಬಳಿ 263.637 ಕೆಜಿ ಚಿನ್ನಾಭರಣ ಇರುವುದಾಗಿ ತಿಳಿಸಿದೆ.
ದೇಗುಲದಲ್ಲಿದೆ 20 ಸಾವಿರಕ್ಕೂ ಹೆಚ್ಚು ಚಿನ್ನದ ಲಾಕೆಟ್ಗಳು
ಈ ಪೈಕಿ ಅಮೂಲ್ಯ ಹರಳುಗಳು, ನಾಣ್ಯಗಳೂ ಕೂಡಾ ಇವೆ. ಎಲ್ಲಕ್ಕಿಂತ ಹೆಚ್ಚಾಗಿ 20 ಸಾವಿರಕ್ಕೂ ಹೆಚ್ಚು ಚಿನ್ನದ ಲಾಕೆಟ್ಗಳು ಇವೆ. ಜೊತೆಗೆ ತನ್ನ ಬಳಿ 6,605 ಕೆ. ಜಿ. ಬೆಳ್ಳಿ ಇದೆ ಎಂದೂ ಹೇಳಿದೆ. 19,981 ಚಿನ್ನದ ಲಾಕೆಟ್ಗಳಿವೆ. ಅಷ್ಟೇ ಅಲ್ಲದೇ 5,359 ಬೆಳ್ಳಿ ಲಾಕೆಟ್ಗಳೂ ಇವೆ ಎಂದು ಮಾಹಿತಿ ನೀಡಿದೆ.
ಈ ಬಗ್ಗೆ ಎರ್ನಾಕುಲಂ ಮೂಲದ ಪಾಪ್ಯುಲರ್ ಚಾನೆಲ್ ನ ಅಧ್ಯಕ್ಷ ಹರಿದಾಸ್ ರಿಯಾಕ್ಷನ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಎರ್ನಾಕುಲಂ ಮೂಲದ ಪಾಪ್ಯುಲರ್ ಚಾನೆಲ್ ನ ಅಧ್ಯಕ್ಷ ಹರಿದಾಸ್ ಅವರು, ದೇವಾಲಯದ ಅಭಿವೃದ್ಧಿ ಮತ್ತು ಭಕ್ತರಿಗೆ ಸೌಲಭ್ಯ ಒದಗಿಸುವ ಕುರಿತು ಗುರುವಾಯೂರ್ ದೇವಸ್ವಂ (ದೇವಾಲಯದ ಆಡಳಿತ ಮಂಡಳಿ) ನಿರ್ಲಕ್ಷ್ಯ ತೋರಿಸುತ್ತಿದ್ದರಿಂದ ಆರ್ಟಿಐ ಮೂಲಕ ಈ ಮಾಹಿತಿ ಕೇಳಿದ್ದೇನೆ. ಅಲ್ಲದೇ ಭದ್ರತೆಯ ನೆಪ ಹೇಳಿ ದೇಗುಲದ ಆಡಳಿತ ಮಂಡಳಿಯು ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಲು ಈ ಹಿಂದೆ ನಿರಾಕರಿಸಿತ್ತು. ಆದರೆ ಇದೀಗ ಸತ್ಯಾಂಶ ಹೊರ ಹಾಕಿದೆ ಎಂದು ತಿಳಿಸಿದ್ದಾರೆ.
271.05 ಎಕರೆ ಜಮೀನು ಹೊಂದಿರುವ ದೇವಾಲಯ
ದೇವಾಲಯವು ₹1,737.04 ಕೋಟಿ ಬ್ಯಾಂಕ್ ಠೇವಣಿಯನ್ನು ಹಾಗೂ 271.05 ಎಕರೆ ಜಮೀನನ್ನು ಹೊಂದಿರುವುದು ಈ ಹಿಂದೆ ಆರ್ಟಿಐ ಮೂಲಕ ಪಡೆದ ಮಾಹಿತಿಯಿಂದ ಬಹಿರಂಗಗೊಂಡಿತ್ತು.
ಇತ್ತೀಚೆಗಷ್ಟೇ ಶಬರಿ ಮಲೆಯಲ್ಲಿ ಮಕರ ಜ್ಯೋತಿ ದರ್ಶನ
ಇತ್ತೀಚೆಗಷ್ಟೇ ಶಬರಿಮಲೆಯಲ್ಲಿ ಲಕ್ಷಾಂತರ ಜನರು ಮಕರ ಜ್ಯೋತಿ ದರ್ಶನ ಪಡೆದರು. ಪ್ರತಿ ವರ್ಷದಂತೆ ಈ ಬಾರಿಯು ಶಬರಿಮಲೆಯಲ್ಲಿ ಮಕರ ಜ್ಯೋತಿ ಕಾಣಿಸಿಕೊಂಡಿರು. ಮಕರ ಸಂಕ್ರಾಮಣ ದಿನದಂದು ಶಬರಿಮಲೆಯ ಪೊನ್ನಂಬಲಮೇಡುವಿನಲ್ಲಿ ಸಂಜೆ ಮೂರು ಬಾರಿ ಮಕರ ಜ್ಯೋತಿ ಕಾಣಿಸಿಕೊಂಡಿತ್ತು. ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಜ್ಯೋತಿಯ ಬೆಳಕನ್ನು ನೋಡಿ ಕಣ್ತುಂಬಿಕೊಂಡರು.
ಮಕರ ಜ್ಯೋತಿ ನೋಡಲು ಜಮಾಯಿಸಿದ್ದ ಲಕ್ಷಾಂತರ ಮಂದಿ
ಪ್ರತಿ ವರ್ಷ ಈ ದಿನದಂದು ಶ್ರೀಮಂತರು ಮತ್ತು ಬಡವರು ಎಂಬ ಭೇದ-ಭಾವವಿಲ್ಲದೇ ಎಲ್ಲ ಭಕ್ತರು ಜ್ಯೋತಿಯ ದರ್ಶನ ಪಡೆದರು. ಮಕರ ಜ್ಯೋತಿ ನೋಡಲು ಲಕ್ಷಾಂತರ ಜನರು ಶಬರಿಮಲೆಗೆ ಬರುವುದರಿಂದ ಯಾವುದೇ ನೂಕು-ನುಗ್ಗಲು, ಸಾವು-ನೋವು ಸಂಭವಿಸದಂತೆ ತಡೆಯಲು ಪೊಲೀಸ್ ಬಂದೋಬಸ್ತ್ ಹಾಗೂ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: Tirupati Laddu History: 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ, ಅತ್ಯಂತ ಶ್ರೀಮಂತ ದೇವರ ಪ್ರಸಾದದ ಹಿಂದಿನ ಇಂಟರೆಸ್ಟಿಂಗ್ ಕಹಾನಿ
ಭಕ್ತರಿಂದ ಮುಗಿಲು ಮುಟ್ಟಿದ್ದ ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆ
ಮಕರ ಜ್ಯೋತಿ ಬೆಳಕನ್ನು ನೋಡಲು ಕೇವಲ ದಕ್ಷಿಣ ಭಾರತ ರಾಜ್ಯಗಳಿಂದಷ್ಟೇ ಅಲ್ಲದೆ ಉತ್ತರ ಭಾರತದ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಅಲ್ಲದೇ ಮಕರ ಜ್ಯೋತಿ ಗೋಚರಿಸುತ್ತಿದ್ದಂತೆಯೇ ಭಕ್ತರಿಂದ ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆ ಮುಗಿಲು ಮುಟ್ಟಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ