ಹಸಿದವರಿಗೆ ಅನ್ನ ಹಾಕಬೇಕು ಎಂಬ ಮಾತಿದೆ. ಹಸಿದ ಹೊಟ್ಟೆಗಳಿಗೆ ಹಾಕಿದರೆ ಪುಣ್ಯ ಬರುತ್ತದೆ ಎಂಬ ಮಾತುಗಳನ್ನು ಕೇಳಿರುತ್ತೇವೆ. ಆದರೆ, ಹರಿಯಾಣದ ಗುರುಗ್ರಾಮದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಿದಕ್ಕೆ ತೊಂದರೆಗೆ ಸಿಲುಕಿದ ಪ್ರಸಂಗ ಸೋಮವಾರ ರಾತ್ರಿ ನಡೆದಿದೆ. ಹಸಿದ ನಾಯಿಗಳಿಗೆ ಆಹಾರ ನೀಡಿದ ಜನರಿಗೆ ತೊಂದರೆ ಆಗಿರುವುದು ನಾಯಿಗಳಿಂದ ಅಲ್ಲ ಬದಲಾಗಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಜನರಿಂದ. ಹೇಗೆಂದರೆ ಬೀದಿ ನಾಯಿಗಳಿಗೆ ಆಹಾರ ಹಾಕಿದ್ದಕ್ಕೆ ಒಂದು ಕುಟುಂಬದ ಮೂವರು ಸದಸ್ಯರನ್ನು ಕಾರಿನಲ್ಲಿ ಬಂಧಿಯಾಗುವಂತೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಬೀದಿ ನಾಯಿಗಳಿಗೆ ಆಹಾರ ಹಾಕಿದ್ದಕ್ಕಾಗಿ ಅಲ್ಲಿನ ಅಪಾರ್ಟ್ಮೆಂಟ್ ಜನರು ಈ ರೀತಿ ನಡೆದುಕೊಂಡಿದ್ದು, ಅಮಾನವೀಯ ಅನಿಸುತ್ತದೆ. ಆದರೆ, ಬೀದಿ ನಾಯಿಗಳಿಂದ ಗುರುಗ್ರಾಮ ಸೆಕ್ಟರ್ 83ರ ವಾಟಿಕಾ 21 ಹೌಸಿಂಗ್ ಸೊಸೈಟಿ ಅಪಾರ್ಟ್ಮೆಂಟ್ ಜನರು ನಿದ್ದೆಗೆಡುವಂತೆ ಆಗಿದೆ. ಇದೇ ಬಡಾವಣೆಯಲ್ಲಿ ನಾಯಿ ಪ್ರಿಯರೊಬ್ಬರು, ತಮ್ಮ ಪತ್ನಿ ಮತ್ತು ಮೂರು ವರ್ಷದ ಮಗಳೊಂದಿಗೆ ಕಾರಿನಲ್ಲಿ ಹೊರಗಡೆ ಹೋಗಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುವ ಜನರು ಸುತ್ತಲು ಪ್ರವೇಶಿಸಿ, ನಾಯಿಗಳಿಗೆ ಆಹಾರವನ್ನು ಹಾಕುತ್ತಿರುವುದನ್ನು ವಿರೋಧಿಸಿ ಬಾಹರ್ ನಿಕ್ಲೊ ಕುತ್ತೆ ಕೋ (bring the dog out) ಎಂದು ಘೋಷಣೆ ಕೂಗಿದ್ದಾರೆ.
ದೂರು ದಾಖಲಾಗಿಲ್ಲ:
ಜನರ ಆಕ್ರೋಶಕ್ಕೆ ಗುರಿಯಾದ ನಾಯಿ ಪ್ರಿಯರು ಜನವಸತಿ ಇರುವ ಪ್ರದೇಶದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುತ್ತಿದ್ದರು. ಹಸಿದ ಬೀದಿ ನಾಯಿಗಳು ಆಹಾರ ಹಾಕದೆ ಇದ್ದಾಗ ಆಹಾರಕ್ಕಾಗಿ ನಾಯಿಗಳು ಹುಡುಕಾಟ ನಡೆಸುವಾಗ ಬಡಾವಣೆಯ ಮಕ್ಕಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆಗಳು ನಡೆದಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಅಪಹರಣಕ್ಕೊಳಗಾಗಿದ್ದ ನೈಜೀರಿಯಾ ಶಾಲೆಯ 279 ವಿದ್ಯಾರ್ಥಿನಿಯರ ಬಿಡುಗಡೆ!
ಇತ್ತೀಚೆಗೆ ಬಡಾವಣೆಯ ನಿವಾಸಿಯೊಬ್ಬರಿಗೆ ಬೀದಿ ನಾಯಿ ಕಚ್ಚಿದ ಪರಿಣಾಮ ಜನವಸತಿ ಸ್ಥಳದಲ್ಲಿ ಅಶಾಂತಿಗೆ ಕಾರಣವಾಗಿದೆ.ಇನ್ನು, ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಪೊಲೀಸರಿಗೆ ಘಟನೆ ಬಗ್ಗೆ ಗಮನಕ್ಕೆ ಬಂದಿದೆ. ಆದರೆ, ಈ ಕುರಿತಾಗಿ ಯಾವ ವ್ಯಕ್ತಿಯೂ ದೂರು ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಬೀದಿ ನಾಯಿಗಳಿಗೆ ಆಹಾರ ನೀಡುವುದು ತಪ್ಪೇ?:
ಹಸಿದ ಹೊಟ್ಟೆಗಳ ನೋವು ಹಸಿದ ಹೊಟ್ಟೆಗಳಿಗೆ ಅರ್ಥ ಆಗುತ್ತದೆ. ಇನ್ನು, ಹಸಿದ ಹೊಟ್ಟೆಗಳಿಗೆ ಅನ್ನ ಹಾಕಿದರೇ ದೇವರು ನಮಗೆ ಯಾವುದೋ ರೂಪದಲ್ಲಿ ಅನ್ನ ನೀಡುತ್ತಾನೆ ಎಂಬ ನಂಬಿಕೆಯಿದೆ. ದುಡ್ಡು ಇರುವ ಶ್ರೀಮಂತರ ಮನೆಯಲ್ಲಿನ ಪ್ರಾಣಿಗಳು ಸರಿಯಾದ ಸಮಯಕ್ಕೆ ಉತ್ತಮ ಗುಣಮಟ್ಟದ ಆಹಾರವನ್ನು ತಿನ್ನುತ್ತವೆ. ಆದರೆ, ಬೀದಿ ನಾಯಿಗಳು ಕೆಲವೊಮ್ಮೆ ಆಹಾರ ಇಲ್ಲದೇ ನರಳುತ್ತಿರುವ ದೃಶ್ಯಗಳು ಸಾಮಾನ್ಯ ಆಗಿರುತ್ತವೆ. ಬೀದಿ ನಾಯಿಗಳಿಗೆ ಒಮ್ಮೆ ಆಹಾರ ನೀಡಿದರೇ ಆ ವ್ಯಕ್ತಿಯನ್ನು ಗುರುತಿಸಿ ಬಾಲ ಅಲ್ಲಾಡಿಸಿಕೊಂಡು ಬರುತ್ತವೆ. ಆದರೆ, ಬೀದಿ ನಾಯಿಗಳು ಮಕ್ಕಳಿಗೆ ಕಚ್ಚುವುದರಿಂದ ಪಾಲಕರು ಆತಂಕವಾಗಿದ್ದಾರೆ.
ಬೀದಿ ನಾಯಿಗಳಿಗೆ ಆಹಾರ ಹಾಕುವುದು ಉತ್ತಮ ಕೆಲಸ ಆದರೆ, ಹಸಿದ ನಾಯಿಗಳಿಗೆ ಯಾರು ಆಹಾರ ಹಾಕದೇ ಇದ್ದಾಗ ಅವುಗಳು ಮಕ್ಕಳ ಮೇಲೆ ದಾಳಿ ಮಾಡುತ್ತವೆ ಎಂದು ಪೋಷಕರ ಆಕ್ರೋಶ. ಹಾಗಾದರೆ ಬೀದಿ ನಾಯಿಗಳಿಗೆ ಆಹಾರ ನೀಡುವುದು ಕಾನೂನುಬಾಹಿರವೇ ಎಂಬ ಪ್ರಶ್ನೆ ಎದುರಾಗುತ್ತದೆ. ಇನ್ನು 2011ರಲ್ಲಿ ದೆಹಲಿ ಹೈಕೋರ್ಟ್ ಬೀದಿ ನಾಯಿಗಳಿಗೆ ಆಹಾರ ನೀಡಲು ಅನೇಕ ನಿಯಮಗಳನ್ನು ವಿಧಿಸಿತ್ತು.
ಭಾರತ ಸಂವಿಧಾನದ ಪ್ರಕಾರ, ನಾಗರಿಕರು ಎಲ್ಲಾ ಜೀವಿಗಳಿಗೆ ಕಾಳಜಿ ತೋರಿಸುವ ಕರ್ತವ್ಯವನ್ನು ಹೊಂದಿದ್ದಾನೆ. ಬೀದಿ ಪ್ರಾಣಿಗಳಿಗೆ ಆಹಾರವನ್ನು ನೀಡುವುದನ್ನು ನಿಷೇಧಿಸಲು ಯಾವುದೇ ಕಾನೂನು ಇಲ್ಲ ಎಂದು ಬೀದಿ ಪ್ರಾಣಿಗಳ ಪರ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ತೀರ್ಪು ಎತ್ತಿಹಿಡಿದಿವೆ.
ದೆಹಲಿ ಹೈಕೋರ್ಟ್ 2011ರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವವರಿಗೆ ಕೆಲವು ನಿಯಮಗಳನ್ನು ಪಾಲಿಸಲು ಗೈಡ್ಲೈನ್ಸ್ ನೀಡಿವೆ. ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲದೇ ಇದ್ದರೆ ಆಹಾರವನ್ನು ಹಾಕಬಹುದು. ಸಾರ್ವಜನಿಕ ಬೀದಿಗಳು, ಪುಟ್ಪಾತ್, ಪಾದಚಾರಿ ಮಾರ್ಗಗಳು, ಇನ್ನು, ಅಪಾರ್ಟ್ಮೆಂಟ್ನ ಪ್ರವೇಶದ್ವಾರಗಳ ಹೊರಗಿನ ಸಾಮಾನ್ಯ ಸಾರ್ವಜನಿಕ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ನಾಯಿ ಪ್ರಿಯರು ನೀಡಬಹುದು ಎಂದು ನ್ಯಾಯಲಯ ನಿರ್ದೇಶಿಸಿದೆ.
ಆದರೆ, ಗುರುಗ್ರಾಮ್ ಅಪಾರ್ಟ್ಮೆಂಟ್ನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಿದ ಕಾರಣಕ್ಕಾಗಿ ಒಂದು ಕುಟುಂಬದ ಮೂವರು ಸದಸ್ಯರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವುದು ಸರಿಯಲ್ಲ. ಆದರೆ, ದೆಹಲಿಯಲ್ಲಿ ಹೆಚ್ಚುತ್ತಿರುವ ನಾಯಿ ಕಚ್ಚುವಿಕೆ ಹೆಚ್ಚಾಗಿದೆ. ಇದರಿಂದಾಗಿ ಸಾರ್ವಜನಿಕರು ಬೀದಿ ನಾಯಿಗಳ ಪಾಲನೆ ಮತ್ತು ನಿಯಂತ್ರಣ ಯಾರ ಹೊಣೆ ಎಂದು ಪ್ರಶ್ನಿಸುವಂತಾಗಿದೆ.
ಇನ್ನು, 2020ರ ಆಗಸ್ಟ್ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದೆಹಲಿಯಲ್ಲಿ 2017ರಿಂದ ಪ್ರತಿದಿನ ಸರಾಸರಿ 120 ನಾಯಿಗಳು ಕಡಿತ ಪ್ರಕರಣಗಳು ನಡೆಯುತ್ತಿವೆ ಎಂದು ಪ್ರಕಟಿಸಿದೆ. ನಾಯಿ ಕಚ್ಚುವಿಕೆ ಕಾರಣದಿಂದಾಗಿ ಅಂದಿನಿಂದ 1.5 ಲಕ್ಷಕ್ಕೂ ಹೆಚ್ಚು ಜನರು ಕ್ಲಿನಿಕಲ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ