ಕಾಂಗ್ರೆಸ್​ ಹಿರಿಯ ನಾಯಕ ಗುರುದಾಸ್​ ಕಾಮತ್​ ನಿಧನ

news18
Updated:August 22, 2018, 11:21 AM IST
ಕಾಂಗ್ರೆಸ್​ ಹಿರಿಯ ನಾಯಕ ಗುರುದಾಸ್​ ಕಾಮತ್​ ನಿಧನ
news18
Updated: August 22, 2018, 11:21 AM IST
ನ್ಯೂಸ್​ 18

ನವದೆಹಲಿ (ಆ.22) : ಕಾಂಗ್ರೆಸ್​ ಹಿರಿಯ ನಾಯಯ, ಮಾಜಿ ಕೇಂದ್ರ ಸಚಿವ ಗುರುದಾಸ್​ ಕಾಮತ್​ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

63 ವರ್ಷದ ಗುರುದಾಸ್​ ಅವರನ್ನು ತಕ್ಷಣಕ್ಕೆ ಚಾಣಕ್ಯಪುರಿಯ ಆಸ್ಪತ್ರೆಗೆ ಕರೆತರಲಾಯಿತಾದರೂ ಪ್ರಯೋಜನವಾಗಿಲ್ಲ.

2009ರಲ್ಲಿ ಮುಂಬೈನ ವಾಯುವ್ಯ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 1984,1991. 1998 ಮತ್ತು 2004ರಲ್ಲಿ ಈಶಾನ್ಯ ಮುಂಬೈನಿಂದ ಗೆದಿದ್ದರು. 2009ರಿಂದ 2011ರ ವರೆಗೆ ರಾಜ್ಯ ಗೃಹ ಖಾತೆ ಹಾಗೂ ಮಾಹಿತಿ ಮತ್ತು ಸಂಪರ್ಕ ಸಚಿವರಾಗಿ  ಕಾರ್ಯ ನಿರ್ವಹಿಸಿದ್ದರು. 2011ರಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವೃತ್ತಿ ವಕೀಲರಾಗಿದ್ದ ಕಾಮತ್​  ಮುಂಬಯಿ ಪ್ರದೇಶ ಕಾಂಗ್ರೆಸ್​ ಸಮಿತಿ ಸದಸ್ಯರಾಗಿಕೂಡ ಅಧ್ಯಕ್ಷರಾಗಿ ಇವರು ಸೇವೆ  ಸಲ್ಲಿಸಿದ್ದರು.

ಗುರುವಾರ ರಾತ್ರಿ ಕಾಮತ್​ ಬಕ್ರಿದ್​ ಈದ್​ ಶುಭಾಶಯ ತಿಳಿಸಿದ್ದರು. ಆದರೆ  ಮುಂಜಾನೆ ಹೊತ್ತಿಗೆ ಅವರು ಸಾವನ್ನಪ್ಪಿದ್ದಾರೆ.
Loading...

ಕಾಮತ್​ ಅವರ ನಿಧನಕ್ಕೆ ಕಾಂಗ್ರೆಸ್​ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಮತ್​ ಧೈರ್ಯಶಾಲಿ ಮತ್ತು ಕಾಂಗ್ರೆಸ್​ ಮಹಾನ್​ ನಾಯಕ ನಮ್ಮನ್ನು ಅಗಲಿದ್ದಾರೆ  ಮಹಾರಾಷ್ಟ್ರ ಕಾಂಗ್ರೆಸ್​ ವಕ್ತಾರ ಸಚಿನ್​ ಸಾವಂತ್​ ಟ್ವೀಟ್​ ಮಾಡಿದ್ದಾರೆ.

ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್​ ಕೂಡ ಅವರ ಕಾಮತ್​ ಅವರ ಸಾವು ತುಂಬಲಾರದ ನಷ್ಟ ಎಂದು ಟ್ವೀಟ್​ ಮಾಡಿದರು.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...