ಯೂಟ್ಯೂಬ್​ನಲ್ಲಿ 300 ಕೋಟಿ ಜನರು ನೋಡುವ ಭಾರತೀಯ ಗಾಯಕ ಯಾರು ಗೊತ್ತಾ?

news18
Updated:August 29, 2018, 3:27 PM IST
ಯೂಟ್ಯೂಬ್​ನಲ್ಲಿ 300 ಕೋಟಿ ಜನರು ನೋಡುವ ಭಾರತೀಯ ಗಾಯಕ ಯಾರು ಗೊತ್ತಾ?
news18
Updated: August 29, 2018, 3:27 PM IST
ನ್ಯೂಸ್​ 18 ಕನ್ನಡ 

ಈಗೇನಿದ್ದರೂ ಕೇವಲ ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್​ ಮೀಡಿಯಾದ್ದೇ ಸದ್ದು. ಹೌದು ಡಿಜಿಟಲ್​ ಯುಗದಲ್ಲಿ ಪ್ರತಿಭೆಗಳು ಬೆಳಕಿಗೆ ಬರಲು ಮಾಧ್ಯಮ ಅಥವಾ ಯಾವುದೇ ದೊಡ್ಡ ವೇದಿಕೆಗಳ ಅಗತ್ಯವೇ ಇಲ್ಲ. ಇದರಿಂದಾಗಿ ಪ್ರತಿಭೆಗಳು ಬಹಳ ಸುಲಭವಾಗಿ ಪ್ರಸಿದ್ಧಿಯಾಗುತ್ತಾರೆ.

ಪಂಜಾಬಿ ಹಾಡುಗಾರ ಗುರು ರಾಂಧಾವ ಸಹ ಇಂತಹ ಪ್ರತಿಭೆಗಳ ಪಟ್ಟಿಗೆ ಸೇರುತ್ತಾರೆ. ಎಷ್ಟೋ ಮಂದಿ ಹಾಡುಗಳ ಆಲ್ಬಂ ಮಾಡುತ್ತಾರೆ.  ಆದರೆ ಎಲ್ಲರೂ ಖ್ಯಾತಿ ಪಡೆಯೋದಿಲ್ಲ. ಆದರೆ ಗುರು ರಾಂಧಾವ ಮಾತ್ರ ತನ್ನ ಆಲ್ಬಂ ಹಾಡುಗಳ ಮೂಲಕವೇ ತನ್ನದೇ ಆದ ಪ್ರತ್ಯೇಕ ಗುರುತನ್ನು ಮಾಡಿಕೊಂಡವರು.

ಅವರ ಆಲ್ಬಂ ಹಾಡುಗಳನ್ನೇ ಸಿನಿಮಾ ಮಂದಿ ತಮ್ಮ ಸಿನಿಮಾಗಳಲ್ಲಿ ಬಳಸಿಕೊಂಡರು. ಹೀಗೆ ಹಂತ ಹಂತವಾಗಿ ಬೆಳೆದ ರಾಂಧಾವ ಈಗ ಯೂಟ್ಯೂಬ್​ನ ಅಧಿಕೃತ ಚಾನಲ್​ಗಳಲ್ಲಿ ಅತಿ ಹೆಚ್ಚು ಜನರು ನೋಡುವ ಭಾರತೀಯ ಗಾಯಕ. ಹೌದು ಅವರ ಆಲ್ಬಂಗಳನ್ನು 300 ಕೋಟಿ ಜನರು ಯೂಟ್ಯೂಬ್​ನಲ್ಲಿ ನೋಡುತ್ತಾರೆ.

'ಕುಡಿ ಲಾಹೋರ್​ ದಿ', 'ಬನ್​ ಜಾ ತು ಮೇರಿ ರಾಣಿ', 'ಸೂಟ್​ ಸೂಟ್​ ಸೂಟ್​ ಕರ್​ ದಾ' ಹಾಡುಗಳಿಂದಲೇ ಖ್ಯಾತಿ ಪಡೆದ ಭಾರತೀಯ ಗಾಯಕ ರಾಂಧಾವ. 2005ರಲ್ಲಿ ಗುರು ರಾಂಧಾವ ಅವರನ್ನು ಟಿ-ಸೀರೀಸ್​ ಮೊದಲ ಬಾರಿಗೆ 'ಪಟೋಲ' ಹಾಡಿಗಾಗಿ ಸಹಿ ಮಾಡಿಸಿಕೊಂಡಿತ್ತು.

ಇನ್ನೂ ಗುರು ತಮಗೆ ಅಭಿಮಾನಿಗಳು ನೀಡಿರುವ ಪ್ರೀತಿಗೆ ಧನ್ಯವಾದ ಸಹ ತಿಳಿಸಿದ್ದಾರೆ.

 
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ