Brave Lady: ಮಹಿಳೆಯ ಅಪಹರಣಕ್ಕೆ ಯತ್ನ; ರಿಕ್ಷಾದಿಂದ ಹಾರಿ ತಪ್ಪಿಸಿಕೊಂಡ ಯುವತಿ
ಹೆದರಿಕೆಯಾಗಿ ಮಹಿಳೆ ಹಿಂದಿಯಲ್ಲಿ ಜೋರಾಗಿ ಕೂಗಿಕೊಂಡಳು. ಆಕೆ ಅವನ ಭುಜದ ಮೇಲೆ 8 - 10 ಬಾರಿ ತನ್ನ ಕೈಯಿಂದ ತಟ್ಟಿದಾಗಲೂ ಚಾಲಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ
ನಾವು ಸಾಮಾನ್ಯವಾಗಿ ಆಟೋರಿಕ್ಷಾದಲ್ಲಿ( Autorickshaw) ಕುಳಿತುಕೊಂಡು ಹೋಗುತ್ತಿರುವಾಗ ನಮಗೆಲ್ಲರಿಗೂ ಒಂದು ಹೆದರಿಕೆ ಆಗಿರುತ್ತದೆ, ಅದೇನೆಂದರೆ ಈ ಆಟೋ ಚಾಲಕ (Driver) ಆಟೋ ನಿಲ್ಲಿಸದೇ ಹಾಗೆಯೇ ಬೇರೆ ಕಡೆಗೆ ಕರೆದುಕೊಂಡು ಹೋದರೆ ಏನು ಮಾಡುವುದು ಅಂತ ನಮಗೆಲ್ಲಾ ಸುಮಾರು ಬಾರಿ ಅನ್ನಿಸಿರುತ್ತದೆ. ಆಗ ನಮಗೆ ಬರುವ ಮೊದಲನೆಯ ಯೋಚನೆಯೇ ಚಲಿಸುತ್ತಿರುವ (Moving) ಆಟೋರಿಕ್ಷಾದಿಂದ ಚಂಗನೆ ಹೊರಕ್ಕೆ ಹಾರುವುದು ಅಲ್ಲವೇ. ಇದೇ ರೀತಿಯಾದ ಘಟನೆಯೊಂದು ಈ ವಾರದ ಆರಂಭದಲ್ಲಿ ಗುರಗಾಂವ್ನಲ್ಲಿ ನಡೆದಿದ್ದು, ಆಟೋರಿಕ್ಷಾ ಚಾಲಕ ತನ್ನನ್ನು ಅಪಹರಿಸಲು ಪ್ರಯತ್ನಿಸಿದ ನಂತರ ಗುರಗಾಂವ್ ನಿವಾಸಿಯೊಬ್ಬರು ತಾನು ಅನುಭವಿಸಿದ ಅತ್ಯಂತ ಭಯಾನಕ ಕ್ಷಣವನ್ನು ಇಲ್ಲಿ ವಿವರಿಸಿದ್ದಾರೆ. ಇವರು ಹತ್ತಿದ್ದ ಆಟೋರಿಕ್ಷಾದ ಚಾಲಕನು ನಿಲ್ಲಿಸಲು ನಿರಾಕರಿಸಿದ(Refused) ನಂತರ ಚಲಿಸುತ್ತಿರುವ ಆಟೋರಿಕ್ಷಾದಿಂದ ಜಿಗಿಯಬೇಕಾಯಿತು( Jump) ಎಂದು ಅವರು ಹೇಳಿದ್ದಾರೆ.
ಜನನಿಬಿಡ ಮಾರುಕಟ್ಟೆ
ಸೋಮವಾರ ಮಧ್ಯಾಹ್ನ ಗುರಗಾಂವ್ ಸೆಕ್ಟರ್ 22ರ ಜನನಿಬಿಡ ಮಾರುಕಟ್ಟೆಯಿಂದ ಆಟೋರಿಕ್ಷಾ ಹತ್ತಿಕೊಂಡು ಮನೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಮಹಿಳೆ ಹೇಳಿದರು. ನನ್ನ ಬಳಿ ನಗದು ಹಣ ಇಲ್ಲದ ಕಾರಣ ನಾನು ಪೇಟಿಎಂ ಮಾಡುತ್ತೇನೆ ಎಂದು ಆಟೋ ಡ್ರೈವರ್ಗೆ ಹೇಳಿದೆ ಮತ್ತು ಅವರು ಉಬರ್ಗಾಗಿ ಡ್ರೈವ್ ಮಾಡುವಂತೆ ಕಾಣುವ ಅವರ ಸೆಟಪ್ ಅನ್ನು ನೋಡಿದಾಗ, ಅವರಿಗೆ ಅದು ಅನುಕೂಲಕರವಾಗಿರುತ್ತದೆ ಎಂದು ನಾನು ಭಾವಿಸಿದೆ. ಅವರು ಒಪ್ಪಿದ ನಂತರವೇ ನಾನು ಆಟೋದಲ್ಲಿ ಕುಳಿತೆ. ಆಟೋದಲ್ಲಿ ಭಕ್ತಿ ಸಂಗೀತ ಕೇಳುತ್ತಿದ್ದರು" ಎಂದು ಮಹಿಳೆ ತಾನು ಮಾಡಿದ ಸರಣಿ ಟ್ವೀಟ್ಗಳಲ್ಲಿ ವಿವರಿಸಿದ್ದಾರೆ.
ದೇವರ ಹೆಸರ ಕೂಗಿದ
ಇನ್ನೇನು ಬಲಕ್ಕೆ ಆಟೋರಿಕ್ಷಾ ತಿರುಗಿಸಿದರೆ ನನ್ನ ಮನೆ ತಲುಪುತ್ತಿದ್ದೆ, ಆಗ ಆಟೋರಿಕ್ಷಾ ಚಾಲಕ ಎಡಕ್ಕೆ ತನ್ನ ಆಟೋರಿಕ್ಷಾವನ್ನು ತಿರುಗಿಸಿಕೊಂಡಿದ್ದಾನೆ. ಅದನ್ನು ನೋಡಿ ನಾನು ಅವನನ್ನು ಕೇಳಿದೆ 'ನೀವು ಎಡಕ್ಕೆ ತೆಗೆದುಕೊಳ್ಳುತ್ತಿದ್ದೀರಾ' ಎಂದು, ಆದರೆ ಅವನು ಅದನ್ನು ಕೇಳಿಸಿಕೊಳ್ಳದೆ, ಬದಲಿಗೆ ದೇವರ ಹೆಸರನ್ನು ಕೂಗಲು ಪ್ರಾರಂಭಿಸಿದನು" ಎಂದು ಮಹಿಳೆ ಹೇಳಿದರು.
ಯಾವುದೇ ಪ್ರತಿಕ್ರಿಯೆ ಇಲ್ಲ
ಇದನ್ನು ನೋಡಿ ಹೆದರಿಕೆಯಾಗಿ ಮಹಿಳೆ ಹಿಂದಿಯಲ್ಲಿ ಜೋರಾಗಿ ಕೂಗಿಕೊಂಡಳು. ಆಕೆ ಅವನ ಭುಜದ ಮೇಲೆ 8 - 10 ಬಾರಿ ತನ್ನ ಕೈಯಿಂದ ತಟ್ಟಿದಾಗಲೂ ಚಾಲಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ
ಆಟೋರಿಕ್ಷಾದಿಂದ ಹೊರಕ್ಕೆ ಹಾರಿದೆ
"ನನ್ನ ಮನಸ್ಸಿನಲ್ಲಿ ಬಂದ ಒಂದೇ ಆಲೋಚನೆ ಎಂದರೆ ಅದು ಚಲಿಸುತ್ತಿರುವ ಆಟೋರಿಕ್ಷಾದಿಂದ ಹೊರಕ್ಕೆ ಹಾರುವುದು. ಆ ಚಾಲಕ ಗಂಟೆಗೆ 35 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಆಟೋ ಚಲಾಯಿಸುತ್ತಿದ್ದನು ಮತ್ತು ಅವನು ವಾಹನವನ್ನು ಇನ್ನಷ್ಟು ವೇಗಗೊಳಿಸುವ ಮೊದಲೇ ನಾನು ಹಾರಿದೆ. ನನಗೆ ಆ ಧೈರ್ಯ ಹೇಗೆ ಬಂತು ಎಂದು ನನಗೆ ತಿಳಿದಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಆಟೋರಿಕ್ಷಾದಿಂದ ಹೊರಗೆ ಜಿಗಿದ ಮಹಿಳೆಗೆ ಅದೃಷ್ಟವಶಾತ್ ಯಾವುದೇ ದೊಡ್ಡ ರೀತಿಯ ಗಾಯಗಳಾಗಿಲ್ಲ.
ಆಟೋರಿಕ್ಷಾದಿಂದ ಜಿಗಿದ ನಂತರ, ಆಕೆ ತನ್ನ ಮನೆಯ ಕಡೆಗೆ ವೇಗವಾಗಿ ನಡೆದುಕೊಂಡು ಹೋಗಿ ಮನೆ ಸೇರಿಕೊಂಡಿದ್ದಾರೆ. ಘಟನೆ ನಡೆದ ಮರುದಿನ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ. ಆ ಚಾಲಕನನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ