Gurugram: ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಗೋ ಕಳ್ಳರನ್ನು ಸೆರೆಹಿಡಿದ ಗುರುಗ್ರಾಮ್ ಪೊಲೀಸರು

ಗುರುಗ್ರಾಮ್ (Gurugram) ಪೊಲೀಸರು ಸೋಹ್ನಾದಲ್ಲಿ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ 5 ಜನರನ್ನು ಶನಿವಾರ ಬಂಧಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಚೇಸಿಂಗ್ ಮಾಡುವ ಮೂಲಕ ಐವರನ್ನು ಬಂದಿಸಿರುವ (Arrested) ಪೊಲೀಸರು, ಸದ್ಯ ಗೋ (Cow) ಕಳ್ಳಸಾಗಾಣಿಕೆ ಮಾಡುತ್ತಿದ್ದವರನ್ನು ಕಸ್ಟಡಿಗೆ ಪಡೆದಿದ್ದಾರೆ.

ಗೋ ಕಳ್ಳರನ್ನು ಹಿಡಿಯುವ ವೇಳೆ ತೆಗೆದ ದೃಶ್ಯ

ಗೋ ಕಳ್ಳರನ್ನು ಹಿಡಿಯುವ ವೇಳೆ ತೆಗೆದ ದೃಶ್ಯ

  • Share this:
ಗುರುಗ್ರಾಮ್ (ಏಪ್ರಿಲ್ 10): ಗುರುಗ್ರಾಮ್ (Gurugram) ಪೊಲೀಸರು ಸೋಹ್ನಾದಲ್ಲಿ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ 5 ಜನರನ್ನು ಶನಿವಾರ ಬಂಧಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಚೇಸಿಂಗ್ ಮಾಡುವ ಮೂಲಕ ಐವರನ್ನು ಬಂದಿಸಿರುವ (Arrested) ಪೊಲೀಸರು, ಸದ್ಯ ಗೋ (Cow) ಕಳ್ಳಸಾಗಾಣಿಕೆ ಮಾಡುತ್ತಿದ್ದವರನ್ನು ಕಸ್ಟಡಿಗೆ ಪಡೆದಿದ್ದಾರೆ. ಇದಕ್ಕೂ ಮೊದಲು ಕಳ್ಳಸಾಗಾಣಿಕೆ ಮಾಡುತ್ತಿದ್ದವರು ಬಜರಂಗದಳದ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿದ್ದರು, ನಂತರ ಬಜರಂಗದಳದವರ ದೂರಿನ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು (Police) ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು, ಯಾಹ್ಯಾ, ಬಲ್ಲು, ತಸ್ಲೀಮ್, ಖಾಲಿದ್ ಮತ್ತು ಸಾಹಿದ್ ಬಂಧಿತ ಐವರು ಆರೋಪಿಗಳು ಎಂದು ಗುರುತಿಸಲಾಗಿದೆ.

ಮಿನಿಟ್ರಕ್‌ನಲ್ಲಿ ಗೋ ಸಾಗಾಣಿಕೆ:

ಬಜರಂಗದಳ ಕಾರ್ಯಕರ್ತ ಮೋಹಿತ್ ಅವರ ಹೇಳಿಕೆಯ ಅನ್ವಯ, ಕೆಲವು ಜಾನುವಾರು ಕಳ್ಳಸಾಗಣೆದಾರರು ಮಿನಿಟ್ರಕ್​ ನಲ್ಲಿ ಗೋವುಗಳನ್ನು ಸಾಗಾಣಿಕೆ ಮಾಡುತ್ತಿರುವುದು ನಮಗೆ ಮುಂಜಾನೆ 3 ಗಂಟೆಗೆ ತಿಳಿದುಬಂದಿತು. ಇದನ್ನು ತಿಳಿದ ನಂತರ ಬಜರಂಗದಳದ ತಂಡದೊಂದಿಗೆ ದೆಹಲಿ-ಗುರ್ಗಾಂವ್ ಗಡಿಯಲ್ಲಿ ಕಳ್ಳ ಸಾಗಾಣಿಕೆ ದಾರರನ್ನು ಹಿಡಿಯಲು ನಿಂತೆವು. ಆದರೆ ಅವರು ಬಜರಂಗದಳದವರನ್ನು ನೋಡಿದ ತಕ್ಷಣ ಟ್ರಕ್‌ನಿಂದ ಹಸುವನ್ನು ಎಸೆದು ಪರಾರಿಯಾಗಲು ಪ್ರಯತ್ನಿಸಿದರು. ಬಜರಂಗದಳದವರು ಅವರನ್ನು ಹಿಂಬಾಲಿಸಿದಾಗ ಆರೋಪಿಗಳು ಮೋಹಿತ್ ಹಾಗೂ ಆತನ ಸ್ನೇಹಿತರ ಮೇಲೆ ಗುಂಡನ್ನು ಹಾರಿಸಿದರು ಎಂದು ಅವರು ಹೇಳಿದ್ದಾರೆ

ಸಿನಿಮೀಯ ರೀತಿಯಲ್ಲಿ ಚೇಸಿಂಗ್:

ಈ ಮಧ್ಯೆ, ಬಜರಂಗದಳವರು ಗುರುಗ್ರಾಮ್ ಪೋಲೀಸ್ ತುರ್ತು ಸಂಖ್ಯೆ 112 ಗೆ ಕರೆ ಮಾಡಿದ್ದಾರೆ. ಭೋಂಡ್ಸಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳನ್ನು ತಡೆಯಲು ಬ್ಯಾಟಿಕೇಡ್​ ಗಳನ್ನು ಹಾಕಿದ್ದರು. ಆದರೆ ಇದನ್ನು ಕಂಡ ಆರೋಪಿಗಳು ಫ್ಲೈಓವರ್‌ ಮೇಲೆ ಟ್ರಕ್‌ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದು, 5 ಮಂದಿಯನ್ನು ಬಂಧಿಸಿ ಓರ್ವ ಪರಾರಿಯಾಗಿದ್ದಾನೆ.





ಇಬ್ಬರು ಕಳ್ಳಸಾಗಣೆದಾರರು ಪರಾರಿಯಾಗುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅವರಲ್ಲಿ ನಾಲ್ವರು ಓಡಿಹೋಗಲು ಸೇತುವೆಯಿಂದ ಜಿಗಿದಿದ್ದರು ಮತ್ತು ಅವರಲ್ಲಿ ಒಬ್ಬನಾದ ಶಾಹಿದ್ ವಾಹನದಿಂದ ಜಿಗಿಯುತ್ತಿದ್ದಂತೆ ಟ್ರಕ್‌ಗೆ ಡಿಕ್ಕಿ ಹೊಡೆದನು. ವೇಗವಾಗಿ ಬಂದ ಲಾರಿಯಿಂದ ಎಸೆದ ಪರಿಣಾಮ ಎರಡು ಹಸುಗಳಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ಗೋಕುಲಧಾಮ, ಜಜ್ಜರ್‌ಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಗುರುಗ್ರಾಮ ಆಕಾಶ ಆವರಿಸಿಕೊಂಡ ಬಳಿಕ ದೆಹಲಿಗೆ ಲಗ್ಗೆ ಇಟ್ಟ ಮಿಡತೆಗಳ ಹಿಂಡು; ತುರ್ತು ಸಭೆ ಕರೆದ ಪರಿಸರ ಸಚಿವ

ಬೆನ್ನಟ್ಟಿದ ವಿಡಿಯೋ ವೈರಲ್:

ಗುರುಗ್ರಾಮ್ ಪೊಲೀಸ್ ಡಿಸಿಪಿ ಹೇಳಿಕೆಯಲ್ಲಿ, ‘ಕೆಲವು ವ್ಯಕ್ತಿಗಳು ವಧೆಗಾಗಿ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಗುರುಗ್ರಾಮ್ ಸೆಕ್ಟರ್ 29 ರಿಂದ ನಮಗೆ ಮಾಹಿತಿ ಬಂದಿತು. ಆದ್ದರಿಂದ ಪೋಲೀಸ್ ಸ್ಕ್ವಾಡ್ ಅವರನ್ನು ಹಿಂಬಾಲಿಸಿ ಭೋಂಡ್ಸಿ ಪೊಲೀಸ್ ಠಾಣೆ ಬಳಿ ಬಂಧಿಸಿದೆ. ಐವರು ಶಂಕಿತರನ್ನು ಬಂಧಿಸಲಾಗಿದೆ. ಇದೇ ವೇಳೆ ಗಾಯಗೊಂಡ ಹಸುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಗ್ಯಾಂಗ್‌ನ ಇತರ ಸದಸ್ಯರನ್ನು ಹುಡುಕಲಾಗುತ್ತಿದೆ. ಕಳ್ಳಸಾಗಣೆದಾರರಿಂದ ಕೆಲವು ಜೀವಂತ ಗುಂಡುಗಳೊಂದಿಗೆ ಸ್ವದೇಶಿ ಬಂದೂಕನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ಸುಮಅರು ಒಂದು ಗಂಟೆಗೂ ಹೆಚ್ಚು ಕಾಲ ಕಳ್ಳಸಾಗಣೆ ದಾರರನ್ನು ಚೇಸಿಂಗ್ ಮಾಡಿದ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಸದ್ಯ ಆರೋಪಿಗಳನ್ನು ಬಂಧಿಸುವಾಗ ಮಾಡಿರುವ ಚೇಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Same Sex Wedding: ಮನೆಯಿಂದ ಓಡಿಹೋಗಿ ಮದುವೆಯಾದ ಇಬ್ಬರು ಯುವತಿಯರು, ಪ್ರೀತಿಗೆ ದೇವರೇ ಸಾಕ್ಷಿ !

ಸೆಕ್ಷನ್ 307ರ ಅಡಿ ಪ್ರಕರಣ ದಾಖಲು:

ಹರಿಯಾಣ ಗೌವಂಶ್ ಸಂರಕ್ಷಣ್ ಮತ್ತು ಗೌಸಂವರ್ಧನ್ ಕಾಯಿದೆ, 2015 ರ ಸೆಕ್ಷನ್ 13(2) (ಹತ್ಯೆಗಾಗಿ ಹಸುವನ್ನು ರಫ್ತು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನದ ಶಿಕ್ಷೆ) ಅಡಿಯಲ್ಲಿ ಭೋಂಡ್ಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Published by:shrikrishna bhat
First published: