Gurez: ಭಯೋತ್ಪಾದಕರಿಂದ ತುಂಬಿದ್ದ ಕಾಶ್ಮೀರದ ಈ ಪ್ರದೇಶ ಈಗ ಪ್ರವಾಸಿಗರ ನೆಚ್ಚಿನ ತಾಣ!

ಗುರೆಜ್ ಕಣಿವೆ

ಗುರೆಜ್ ಕಣಿವೆ

ಗುರೆಜ್ ಕಣಿವೆಯು ಭಾರತದ ಅತ್ಯುತ್ತಮ ಆಫ್‌ಬೀಟ್ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವಾಹ್‌..! ಎಂದು ಹುಬ್ಬೆರಿಸುತ್ತಿದ್ದೀರಾ? ಹೌದು ಇದು ನಿಜ. ಗುರೆಜ್‌ ಕಣಿವೆಯು ಅತ್ಯುತ್ತಮ ಪ್ರವಾಸಿ ತಾಣವಾಗಿ ಹೊರ ಹೊಮ್ಮಿದೆ.

  • Share this:

ಜಮ್ಮು ಮತ್ತು ಕಾಶ್ಮೀರ: ಉತ್ತರ ಕಾಶ್ಮೀರದ ಗುರೇಜ್ (Gurez) ಸೆಕ್ಟರ್ ಪ್ರದೇಶವು ಗಡಿ ನಿಯಂತ್ರಣ ರೇಖೆಗೆ ಸಮೀಪವಿರುವ ಅತ್ಯಂತ ಅಸ್ಥಿರ ಪ್ರದೇಶಗಳಲ್ಲಿ ಒಂದಾಗಿದೆ. ಇದು ಭಯೋತ್ಪಾದಕರ (Terrorists) ಸಾಂಪ್ರದಾಯಿಕ ತಾಣವಾಗಿತ್ತು. ಇದು ಯಾವಾಗಲೂ ನಿರಂತರ ಕದನ ವಿರಾಮ ಉಲ್ಲಂಘನೆಗೆ ಹೆಚ್ಚು ಒಳಗಾಗಿತ್ತು. ಈಗ, ಗುರೆಜ್ ಕಣಿವೆಯು ಭಾರತದ ಅತ್ಯುತ್ತಮ ಆಫ್‌ಬೀಟ್ ಪ್ರವಾಸಿ ತಾಣಗಳಲ್ಲಿ (Offbeat tourist spot) ಒಂದಾಗಿದೆ. ವಾಹ್‌..! ಎಂದು ಹುಬ್ಬೆರಿಸುತ್ತಿದ್ದೀರಾ? ಹೌದು ಇದು ನಿಜ. ಗುರೆಜ್‌ ಕಣಿವೆಯು ಅತ್ಯುತ್ತಮ ಪ್ರವಾಸಿ ತಾಣವಾಗಿ ಹೊರ ಹೊಮ್ಮಿದೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ, ಗುರೆಜ್‌ಗೆ ಭಾರತದ ಅತ್ಯುತ್ತಮ ಆಫ್‌ಬೀಟ್ ಪ್ರವಾಸಿ ತಾಣ ಎಂಬ ಪ್ರಶಸ್ತಿಯನ್ನು ನೀಡಲಾಯಿತು.


ಇದಕ್ಕೆಲ್ಲ ನೇರ ಕಾರಣೀಕರ್ತರೆಂದರೆ ಭಾರತೀಯ ಸೇನೆ ಆಗಿದೆ. ಭಾರತೀಯ ಸೇನೆಯ ಈ ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕಿದೆ.  ಕಾಶ್ಮೀರ ಕಣಿವೆಯ ಈ ಭಾಗಕ್ಕೆ ಪ್ರವಾಸಿಗರನ್ನು ಕರೆತರಲು ಭಾರತೀಯ ಸೇನೆಯು ನಾಗರಿಕ ಆಡಳಿತದೊಂದಿಗೆ ಗುರೇಜ್ ಅನ್ನು ಉತ್ತೇಜಿಸಲು ಶ್ರಮಿಸುತ್ತಿದೆ.


ಸೈನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದ ಸ್ಥಳೀಯರು 
ಈ ಪ್ರವಾಸಿ ತಾಣಕ್ಕೆ 2021 ರ ಬೇಸಿಗೆಯಿಂದ ಸುಮಾರು 0.4 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ತಾಣದ ಗಡಿಗಳನ್ನು ಭದ್ರಪಡಿಸುವುದು ಮತ್ತು ಪ್ರವಾಸಿಗರಿಗೆ ಗುರೆಜ್‌ಗೆ ರಸ್ತೆಯನ್ನು ತೆರೆಯುವುದು ಭಾರತೀಯ ಸೇನೆಯ ಆದ್ಯತೆಯಾಗಿದೆ ಮತ್ತು ಸ್ಥಳದ ಸ್ಥಳೀಯರು ತಮ್ಮ ಪ್ರತಿಯೊಂದು ಅಗತ್ಯಕ್ಕೂ ಸಹಾಯ ಮಾಡಿದ್ದಕ್ಕಾಗಿ ಸೈನಿಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.




ಪ್ರಾಂತ್ಯವು ಅನೇಕ ರೀತಿಯಲ್ಲಿ ಬದಲಾವಣೆ ಹೊಂದಿದೆ ಅಂತೆ
“ಭಾರತೀಯ ಸೇನೆಯು ಗುರೇಜ್ ಜನರಿಗಾಗಿ ತುಂಬಾ ಒಳ್ಳೆಯ ಕೆಲಸ ಮಾಡಿದೆ. ಅದನ್ನು ನಾವೆಂದು ಮರೆಯಲು ಸಾಧ್ಯವೇ ಇಲ್ಲ. ದೇಶದ ಸೈನಿಕರು ನಮ್ಮ ಹೃದಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಜಮ್ಮು ಕಾಶ್ಮೀರ ಒಕ್ಕೂಟವಾದ ನಂತರ ಸಂಭವಿಸಿದ ಬದಲಾವಣೆಯೊಂದಿಗೆ ಪ್ರಾಂತ್ಯವು ಅನೇಕ ರೀತಿಯಲ್ಲಿ ಬದಲಾವಣೆ ಹೊಂದಿದೆ. ನಾವು ಈಗ ಇಲ್ಲಿ ಮೊಬೈಲ್ ಫೋನ್ ಸೇವೆಯನ್ನು ಸಹ ಹೊಂದಿದ್ದೇವೆ" ಎಂದು ಗುಲಾಮ್ ಮೊಹಮ್ಮದ್ ಮಾಧ್ಯಮವೊಂದಕ್ಕೆ  ತಿಳಿಸಿದರು.


ಭವಿಷ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ನೀರಿಕ್ಷೆ
"ನಮ್ಮ ಹೆಣ್ಣುಮಕ್ಕಳು ಗುರೆಜ್‌ನಿಂದ ಆನ್‌ಲೈನ್ ತರಗತಿಗಳನ್ನು ನಡೆಸಬಹುದು. ಇದಕ್ಕೆ ನಾವು ಭಾರತೀಯ ಸೇನೆಗೆ ಕೃತಜ್ಞರಾಗಿರುತ್ತೇವೆ. ಸೇನೆಯು ಈ ಪ್ರದೇಶವನ್ನು ಭದ್ರಪಡಿಸುತ್ತಿದೆ ಮತ್ತು ಪ್ರವಾಸಿಗರನ್ನು ಇಲ್ಲಿಗೆ ಕರೆತರಲು ನಮಗೆ ಸಹಾಯ ಮಾಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ, ಸಾಕಷ್ಟು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಭವಿಷ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ನೀರಿಕ್ಷೆಯನ್ನು ಹೊಂದಿದ್ದೇವೆ. ಇಲ್ಲಿ ಚಾಲನೆಯಲ್ಲಿರುವ ಎಲ್ಲಾ ಯೋಜನೆಗಳು ಭಾರತೀಯ ಸೇನೆಯ ಕಾರಣದಿಂದಾಗಿವೆ” ಎಂದು ಅವರು ಹೇಳಿದರು.


ಇದನ್ನೂ ಓದಿ:   World’s Loneliest Tree: ಹವಾಮಾನ ಬದಲಾವಣೆ ಬಗ್ಗೆ ತಿಳಿಸಲಿದೆ 'ವಿಶ್ವದ ಏಕಾಂಗಿ ಮರ'!


ಗುರೆಜ್ ಕಣಿವೆಯಲ್ಲಿ ಹತ್ತಾರು ಹೊಸ ಹೊಟೇಲ್‌ಗಳು ಮತ್ತು ಹೋಂಸ್ಟೇಗಳು ಇವೆ. ಸ್ಥಳೀಯರು ತಮ್ಮ ಮನೆಗಳನ್ನು ಹೋಮ್‌ಸ್ಟೇಗಳಾಗಿ ಪರಿವರ್ತಿಸುತ್ತಿದ್ದಾರೆ ಮತ್ತು ಪ್ರವಾಸಿಗರಿಗೆ ಗುರೆಜ್ ಕಣಿವೆಯ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿಯಲು ಅವಕಾಶ ಮಾಡಿಕೊಡುತ್ತಿದ್ದಾರೆ. ಪ್ರವಾಸಿಗರ ಆಗಮನದಿಂದ ಈ ಎಲ್ಲಾ ಹೋಟೆಲ್ ಮಾಲೀಕರು ಮತ್ತು ಅತಿಥಿ ಗೃಹ ಮಾಲೀಕರು ಅಪಾರ ಲಾಭ ಗಳಿಸುತ್ತಿದ್ದಾರೆ. ಗುರೆಜ್ ಕಣಿವೆಯಾದ್ಯಂತ ಸ್ಥಳೀಯರು ನಡೆಸುತ್ತಿರುವ ಹಲವಾರು ಶಿಬಿರಗಳಿವೆ. ಪ್ರಪಂಚದಾದ್ಯಂತದ ಚಾರಣಿಗರು ಹಿಮಾಲಯ ಪ್ರದೇಶದ ಪರ್ವತಗಳಿಗೆ ಭೇಟಿ ನೀಡುತ್ತಾರೆ ಮತ್ತು ಪಾದಯಾತ್ರೆ ಮಾಡುತ್ತಿದ್ದಾರೆ.




"ನಾವು ಒಂದು ವರ್ಷದಲ್ಲಿ ಸುಮಾರು 9 ಲಕ್ಷ ರೂಪಾಯಿಗಳ ವ್ಯವಹಾರವನ್ನು ಮಾಡಲು ಸಾಧ್ಯವಾಗಿದೆ. ಎಲ್ಲಾ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳನ್ನು ಕಾಯ್ದಿರಿಸಲಾಗಿದೆ. ಈ ಸ್ಥಳದಲ್ಲಿ ಕದನ ವಿರಾಮ ಉಲ್ಲಂಘನೆ ಮತ್ತು ಶೆಲ್ ದಾಳಿಗಳು ನಡೆದಿವೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಇದು ಶಾಂತಿಯುತವಾಗಿದೆ ಮತ್ತು ಅದು ಉತ್ತಮ ತಾಣವಾಗಿ ಪರಿವರ್ತನೆಗೊಂಡಿರುವುದು ನಿಜಕ್ಕೂ ಸಂತಸದ ವಿಚಾರ ಆಗಿದೆ” ಎಂದು ಅಲ್ಲಿನ ಸ್ಥಳೀಯರು ಹೇಳಿದರು.


ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುವ ಸ್ಥಳವಂತೆ 
ಈಗ ಕಾಶ್ಮೀರ ನಿಜವಾದ ಸ್ವರ್ಗ ಮತ್ತು ಜನರು ಭೇಟಿ ನೀಡಲು ಕಣಿವೆಯಲ್ಲಿ ಹೊಸ ಸ್ಥಳಗಳನ್ನು ಹುಡುಕುತ್ತಿದ್ದಾರೆ. ಭಾರತೀಯ ಸೇನೆಯ ಸಹಾಯವಿಲ್ಲದೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ . ಸೇನೆಯು ಪ್ರವಾಸಿಗರೊಂದಿಗೆ ಸಂವಾದ ನಡೆಸಿದೆ ಮತ್ತು ಪ್ರವಾಸಿಗರಿಗೆ ಈ ಸ್ಥಳವು ವಿಭಿನ್ನ ಅನುಭವ ನೀಡಿದೆ” ಎಂದು ಹೋಟೆಲ್ ಉದ್ಯಮಿ ಮೊಹ್ಸಿನ್ ಲೋನ್ ಹೇಳಿದರು.




“ಪ್ರವಾಸೋದ್ಯಮ ಇಲಾಖೆಯು ಉತ್ಸವಗಳನ್ನು ನಡೆಸುತ್ತಿದೆ ಮತ್ತು ಭಾರತದಾದ್ಯಂತ ರೋಡ್ ಶೋಗಳು ಮತ್ತು ಪ್ರಚಾರದ ಮೂಲಕ ಈ ಸ್ಥಳಗಳನ್ನು ಪ್ರಚಾರ ಮಾಡುತ್ತಿದೆ. ಸ್ಥಳೀಯರ ಮನೆಗಳನ್ನು ಹೋಂಸ್ಟೇಗಳನ್ನಾಗಿ ಪರಿವರ್ತಿಸಲು ಇಲಾಖೆ ಸಹಾಯ ಮಾಡುತ್ತಿದೆ. ಈ ಹಿಂದೆ, ಜನರು ಗುರೇಜ್ ಕಣಿವೆಗೆ ಹೋಗಲು ಆಡಳಿತ ಮತ್ತು ಭದ್ರತಾ ಪಡೆಗಳಿಂದ ಅನುಮತಿ ಅಗತ್ಯವಿತ್ತು. ಅದರ ಅಗತ್ಯ ಇನ್ನು ಮುಂದೆ ಇಲ್ಲ. ಗುರೆಜ್ ಪ್ರವಾಸಿಗರಿಗೆ ಉತ್ತಮ ತಾಣವಾಗಿದೆ. ನಾವು ಸ್ಥಳಗಳನ್ನು ಪ್ರಚಾರ ಮಾಡುತ್ತಿದ್ದೇವೆ ಮತ್ತು ಇದನ್ನು ಪ್ರವಾಸಿಗರಿಗೆ ಪ್ರದರ್ಶಿಸುತ್ತಿದ್ದೇವೆ” ಎಂದು ಸ್ಥಳೀಯರು ಹೇಳಿದರು.


ಇದನ್ನೂ ಓದಿ:  Viral Photo: ರಾಷ್ಟ್ರೀಯ ಉದ್ಯಾನವನದಲ್ಲಿ ಹಿಮದ ಗುಹೆ! ಅಪರೂಪದ ಚಿತ್ರ ನೀವೂ ನೋಡಿ

top videos


    “ನಾವು ಈ ಸ್ಥಳದ ಬಗ್ಗೆ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ನಮಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರವಾಸೋದ್ಯಮದ ಉತ್ಕರ್ಷದ ಲಾಭ ಇಲ್ಲಿನ ಸ್ಥಳೀಯರಿಗೆ ಸಿಗಲಿದೆ,'' ಎನ್ನುತ್ತಾರೆ ಪ್ರವಾಸೋದ್ಯಮ ನಿರ್ದೇಶಕ ಜಿ. ಎನ್.ಇಟೊ ಅವರು ಹೇಳಿದರು.

    First published: