ಷರೀಫ್​ ಭ್ರಷ್ಟಾಚಾರ ಪ್ರಕರಣ: ನ್ಯಾಯಧೀಶರ ಮೇಲೆ ಗುಂಡಿನ ದಾಳಿ


Updated:April 15, 2018, 5:50 PM IST
ಷರೀಫ್​ ಭ್ರಷ್ಟಾಚಾರ ಪ್ರಕರಣ: ನ್ಯಾಯಧೀಶರ ಮೇಲೆ ಗುಂಡಿನ ದಾಳಿ

Updated: April 15, 2018, 5:50 PM IST
ಲಾಹೋರ್​: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್​ ಷರೀಫ್​ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸುವ ನ್ಯಾಯಾಧೀಶರ ಮೇಲೆ ಗುಂಡಿನ ದಾಳಿ ನಡೆಸಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್​​ನ ನ್ಯಾಯಾಧೀಶ ಇಜಾಜ್ ಉಲ್ ಅಹ್ಸಾನ್ ಅವರ ಮನೆ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಳಾದ ಬಗ್ಗೆ ವರದಿಯಾಗಿಲ್ಲ. ಆದರೆ ಘಟನೆಗೆ ಪಾಕಿಸ್ತಾನದಾದ್ಯಂತ ಭಾರಿ ಖಂಡನೆ ವ್ಯಕ್ತವಾಗಿದೆ.

ಪ್ರಕರಣದ ಖುದ್ದು ವಿಚಾರಣೆ ನಡೆಸುತ್ತಿರುವ ಇಜಾಜ್​ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾದ ದುಷ್ಕರ್ಮಿಗಳು ಭಾನುವಾರ ಮುಂಜಾನೆ 4.30ರ ವೇಳೆ ಇಜಾಜ್​ಗೆ ಗುರಿಯಿಟ್ಟು ದಾಳಿ ನಡೆಸಿದ್ದಾರೆ. ಆದರೆ ಅದೃಷ್ಟವಶಾತ್ ಇಜಾಜ್​ ಕುಟುಂಬಕ್ಕೆ ಅಪಾಯವಾಗಿಲ್ಲ. ಇದಾದ ಬಳಿಕ ಮುಂಜಾನೆ 9ರ ವೇಳೆ ಮತ್ತೆ ಗುಂಡಿನ ದಾಳಿ ನಡೆದಿದೆ.

ಘಟನೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಿಯಾನ್ ಸಖಿಬ್ ನಿಸಾರ್ ಅವರು ನ್ಯಾಯಾಧೀಶ ಅಹ್ಸಾನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಆರಿಫ್ ನವಾಜ್ ಖಾನ್ ಅವರನ್ನು ಕರೆಯಿಸಿಕೊಂಡಿದ್ದಾರೆ.

ಪೊಲೀಸರು ಸಹ ಪ್ರಕರಣದ ತನಿಖೆ ನಡೆಸುತ್ತಿದ್ದು, ದುಷ್ಕರ್ಮಿ ಒಟ್ಟು ಎರಡು ಗುಂಡುಗಳನ್ನು ಹಾರಿಸಿದ್ದಾನೆ. ಒಂದು ಗುಂಡು ಪ್ರವೇಶ ಗೇಟ್ ಮೇಲೆ ಹಾಗೂ ಮತ್ತೊಂದು ಗುಂಡು ಅಡುಗೆ ಮನೆಯ ಬಾಗಿಲಿಗೆ ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
First published:April 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...