ನ್ಯೂಯಾರ್ಕ್​ನಲ್ಲಿ ಗುಂಡಿನ ದಾಳಿ; ಓರ್ವ ಭಾರತೀಯ ಸೇರಿ ಮೂವರು ಬಲಿ

news18
Updated:September 7, 2018, 4:22 PM IST
ನ್ಯೂಯಾರ್ಕ್​ನಲ್ಲಿ ಗುಂಡಿನ ದಾಳಿ; ಓರ್ವ ಭಾರತೀಯ ಸೇರಿ ಮೂವರು ಬಲಿ
news18
Updated: September 7, 2018, 4:22 PM IST
-ನ್ಯೂಸ್​ 18 ಕನ್ನಡ

ನ್ಯೂಯಾರ್ಕ್​,(ಸೆ.07): ಬಂದೂಕುಧಾರಿಯೊಬ್ಬ ಬ್ಯಾಂಕ್​ನಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯನೂ ಸೇರಿ 3 ಜನ ಸಾವನ್ನಪ್ಪಿರುವ ಘಟನೆ ಅಮೇರಿಕಾದ ಸಿನ್ಸಿನ್ನಾಟಿ ನಗರದಲ್ಲಿ ನಡೆದಿದೆ.

ಓಹಿಯೋದ ನಾರ್ತ್​​ ಬೆಂಡ್​ ನಗರದ ಓಮರ್​ ಎನ್ರಿಕ್​​ ಸಾಂಟಾ ಪೆರೆಜ್​​(29) ಗುಂಡಿನ ದಾಳಿಯ ರೂವಾರಿ. ದಾಳಿ ನಂತರ ಪೊಲೀಸರು ಆರೋಪಿಯನ್ನು ಕೊಂದಿದ್ದಾರೆ ಎನ್ನಲಾಗಿದೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೃಥ್ವಿರಾಜ್​ ಕಂದೇಪಿ(25), ಲೂಯಿಸ್​ ಫೆಲಿಪ್​ ಕಾಲ್ಡೆರಾನ್​(48) ಮತ್ತು ರಿಚರ್ಡ್​ ನ್ಯೂಕಮರ್ (64) ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಗಾಯಗೊಂಡ ಮತ್ತಿಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

ಸಿನ್ಸಿನ್ನಾಟಿಯ ಫೌಂಟೇನ್​ ಸ್ಕ್ವೇರ್ ಬಳಿಯ ಫಿಫ್ತ್​ ಥರ್ಡ್​ ಬ್ಯಾಂಕ್​​ ಪ್ರಧಾನ ಕಚೇರಿಯಲ್ಲಿ ಈ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ಶುಕ್ರವಾರ ಬೆಳಿಗ್ಗೆ 9.11 ರ ಸಮಯದಲ್ಲಿ ನಡೆದಿದೆ. ಪೊಲೀಸರು ಸೇರಿದಂತೆ ಕಂದೇಪಿ ಕುಟುಂಬ ಮತ್ತು ಸಮುದಾಯದವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಭಾರತದ ನ್ಯೂಯಾರ್ಕ್ ರಾಯಭಾರಿಯಾಗಿರುವ ಸಂದೀಪ್ ಚಕ್ರವರ್ತಿ ಪಿಟಿಐಗೆ ತಿಳಿಸಿದ್ದಾರೆ.

ಪೃಥ್ವಿರಾಜ್​ ಕಂದೇಪಿ ಬ್ಯಾಂಕ್​ನಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ತೆಲುಗು ಅಸೋಷಿಯೇಷನ್​ ಆಫ್ ನಾರ್ತ್​ ಅಮೇರಿಕಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...