High Court: ಮತ್ತೊಂದು ಸಂಬಂಧ ಇದೆ ಅಂತ ಕೆಲಸದಿಂದ ತೆಗೆಯುವಂತಿಲ್ಲ! ಗುಜರಾತ್‌ನಲ್ಲಿ 'ಹೈ' ತೀರ್ಪು

ಕಾನ್ಸ್‌ಟೇಬಲ್ ಅವರನ್ನು ವಜಾಗೊಳಿಸಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುತ್ತ ಅರ್ಜಿದಾರರನ್ನು ಒಂದು ತಿಂಗಳಿನಲ್ಲೇ 25% ಬ್ಯಾಕ್ ವೇಜಸ್ ನೀಡುವುದರ ಜೊತೆಗೆ ಮತ್ತೆ ಸೇವೆಗೆ ತೆಗೆದುಕೊಳ್ಳಬೇಕೆಂದು ಕೋರ್ಟ್ ಹೇಳಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಗುಜರಾತ್: ಒಮ್ಮೊಮ್ಮೆ ನೈತಿಕವಾಗಿ ತಪ್ಪು ಎಂದು ಗೊತ್ತಿದ್ದರೂ ಕಾನೂನಿನ ಕಣ್ಣುಗಳಲ್ಲಿ ಅದು ತಪ್ಪೆಂದು ಬಿಂಬಿಸಲಾಗದು. ಏಕೆಂದರೆ ಕಾನೂನು (Law) ಎಂಬುದು ಸಂವಿಧಾನಾತ್ಮಕ (Constitution) ಚೌಕಟ್ಟಿನಲ್ಲಿ ಮಾಡಲಾಗಿರುವ ನಿಯಮಗಳಿಗನುಸಾರ ಕೆಲಸ ನಿರ್ವಹಿಸುತ್ತದೆ. ವಿವಾಹೇತರ ಸಂಬಂಧ (Extramarital affairs) ಅಂದರೆ ಮದುವೆಯಾದ ವ್ಯಕ್ತಿಯು ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವುದು ಇಂದು ಸಮಾಜದ ಕಣ್ಣಿನಲ್ಲಿ ಅನೈತಿಕವಾಗಿರಬಹುದು. ಆದರೆ, ಅದು ಸಮ್ಮತಿಯಿಂದ ಕೂಡಿರುವಾಗ ಅದನ್ನು ಅಪರಾಧ (Crime) ಎಂದು ಪರಿಗಣಿಸಲಾಗದು ಹಾಗೂ ಅದು ಕರ್ತವ್ಯದಿಂದಲೇ ವ್ಯಕ್ತಿಯನ್ನು ತೆಗೆದು ಹಾಕಲು ಬಹುಶಃ ಉಚಿತ ಕಾರಣವಾಗಲಾರದು. ಈ ರೀತಿಯ ಘಟನೆಯೊಂದು ಗುಜರಾತ್‌ನಲ್ಲಿ (Gujarat) ವರದಿಯಾಗಿದ್ದು ಆ ಬಗ್ಗೆ ಹಲವು ವರ್ಷಗಳ ನಂತರ ಗುಜರಾತ್ ಹೈಕೋರ್ಟ್ (High Court) ಮಹತ್ತರ ತೀರ್ಪು ನೀಡಿದೆ.

  ಏನಿದು ವಿವಾಹೇತರ ಸಂಬಂಧದ ಪ್ರಕರಣ?

  ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ವಿವಾಹೇತರ ಸಂಬಂಧ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ಹೊರಬಿದ್ದಿದೆ. ಪೊಲೀಸರಿಗೆ ವಿಧಿಸಲಾಗಿರುವ ನಡೆದುಕೊಳ್ಳುವ ರೀತಿ ಹಾಗೂ ನಿಯಮಗಳ ಪ್ರಕಾರ ಈ ರೀತಿಯ ಸಂಬಂಧ ಹೊಂದಿರುವುದು ದುರ್ವರ್ತನೆ ಎಂದು ಪರಿಗಣಿಸಲಾಗದು ಮತ್ತು ವ್ಯಕ್ತಿಯನ್ನು ಕರ್ತವ್ಯದಿಂದ ವಜಾಗೊಳಿಸಲು ಇದು ಉಚಿತ ಕಾರಣವಲ್ಲ ಎಂದು ಗುಜರಾತ್ ಹೈಕೋರ್ಟ್ ಮಹತ್ತರ ತೀರ್ಪನ್ನು ನೀಡಿರುವುದು ವರದಿಯಾಗಿದೆ.

  ಹೈಕೋರ್ಟ್ ಮೆಟ್ಟಿಲೇರಿದ್ದ ಕಾನ್ಸ್‌ಟೇಬಲ್

  ಈ ಕಾರಣಕ್ಕಾಗಿ ಪೊಲೀಸ್ ಇಲಾಖೆಯಿಂದ ವಜಾಗೊಂಡಿದ್ದ ಕಾನ್ಸ್‌ಟೇಬಲ್ ಒಬ್ಬರು ತಮ್ಮನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ಸಂಬಂಧ ಹೈಕೋರ್ಟ್ ಈ ವಿಚಾರಣೆ ನಡೆಸಿದ್ದು ತನ್ನ ತೀರ್ಪನ್ನು ಪ್ರಕಟಿಸಿದೆ. ತನ್ನ ಆದೇಶದಲ್ಲಿ ಗುಜರಾತ್ ಉಚ್ಛ ನ್ಯಾಯಾಲಯವು ಕಾನ್ಸ್‌ಟೇಬಲ್ ಅವರನ್ನು ವಜಾಗೊಳಿಸಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುತ್ತ ಅರ್ಜಿದಾರರನ್ನು ಒಂದು ತಿಂಗಳಿನಲ್ಲೇ 25% ಬ್ಯಾಕ್ ವೇಜಸ್ ನೀಡುವುದರ ಜೊತೆಗೆ ಮತ್ತೆ ಸೇವೆಗೆ ತೆಗೆದುಕೊಳ್ಳಬೇಕೆಂದು ಹೇಳಿದೆ.

  ಇದನ್ನೂ ಓದಿ:  Megastar Chiranjeevi ಜೊತೆ ಸಣ್ಣ ವಯಸ್ಸಿನ ಹೆಣ್ಣುಮಕ್ಕಳು ಶಬರಿಮಲೆಗೆ ಹೋಗಿದ್ರಾ? ಘಟನೆಯ ಸತ್ಯಾಸತ್ಯತೆ ಇಲ್ಲಿದೆ

  ವಿಧವೆಯೊಂದಿಗೆ ಸಂಬಂಧ ಹೊಂದಿದ್ದ ಕಾನ್ಸ್‌ಟೇಬಲ್

  ಪೊಲೀಸ್ ಪೇದೆಯು ಶಾಹಿಬಾಗ್ ಪ್ರದೇಶದ ಪೊಲೀಸ್ ವಸತಿ ನಿಲಯದಲ್ಲಿ ತನ್ನ ಕುಟುಂಬದ ಜೊತೆ ವಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕಾಲನಿಯ ಇನ್ನೊಂದು ಮನೆಯಲ್ಲಿ ವಾಸಿಸುತ್ತಿದ್ದ ವಿಧವೆಯೊಬ್ಬರೊಂದಿಗೆ ಪೇದೆ ಸಂಬಂಧ ಹೊಂದಿದ್ದರು. ಇವರಿಬ್ಬರ ಸಂಬಂಧವಿರುವ ಬಗ್ಗೆ ಸಂದೇಹ ಮೂಡಿದ್ದ ವಿಧವೆಯ ಕುಟುಂಬದವರು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು.

  ಕ್ಯಾಮರಾದಲ್ಲಿ ಸೆರೆಯಾಗಿತ್ತು ‘ಪೋಲೀ’ಸಪ್ಪನ ಕಾಮಕಾಂಡ!

  ಕ್ಯಾಮೆರಾ ಮೂಲಕ ಪೊಲೀಸ್ ಪೇದೆಯು ವಿಧವೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಗೊತ್ತಾಗಿ ಅದರ ಸಾಕ್ಷ್ಯವನ್ನು ಸಂಗ್ರಹಿಸಿ ವಿಧವೆಯ ಕುಟುಂಬದವರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ 2012ರಲ್ಲಿ ಪೇದೆಯ ವಿರುದ್ಧ ದೂರು ಸಲ್ಲಿಸಿದ್ದರು.

  ತದನಂತರ ಪೊಲೀಸ್ ಹಿರಿಯ ಅಧಿಕಾರಿಗಳು ಇಬ್ಬರನ್ನು ಕರೆದು ಈ ಬಗ್ಗೆ ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ಇಬ್ಬರು ಸಂಬಂಧ ಹೊಂದಿರುವ ಬಗ್ಗೆ ಒಪ್ಪಿಕೊಂಡಿದ್ದರು ಹಾಗೂ ವಿಧವೆಯು ಈ ಸಂಬಂಧದಲ್ಲಿ ತನ್ನ ಸಮ್ಮತಿಯಿತ್ತೆಂದು ಹೇಳಿದ್ದರು. ಇಲಾಖಾ ಮಟ್ಟದ ತನಿಖೆ ಕೈಗೊಳ್ಳುವ ಮೂಲಕ ಎರಡೂ ಕುಟುಂಬದವರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಅದನ್ನು ಕೈಬಿಡಲಾಗಿತ್ತು.

  2013ರಲ್ಲಿ ಕೆಲಸದಿಂದ ವಜಾಗೊಳಿಸಿದ್ದ ಇಲಾಖೆ

  ಪೊಲೀಸ್ ಇಲಾಖೆಯು ಪೇದೆಗೆ ಶೋಕಾಸ್ ನೋಟಿಸ್ ನೀಡಿ 2013ರಲ್ಲೇ ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿತ್ತು. ತನ್ನ ಆದೇಶದಲ್ಲಿ ಅದು ಮಹಿಳೆಯರು, ಮಕ್ಕಳು ಹಾಗೂ ಹಿರಿಯರಿಗೆ ಸುರಕ್ಷತೆ ಒದಗಿಸುವುದು ಪೊಲೀಸ್ ಕರ್ತವ್ಯದ ಒಂದು ಭಾಗವಾಗಿದ್ದು ಈ ಪೇದೆಯು ಅದನ್ನು ನಿರ್ವಹಿಸದೆ ವಿಧವೆಯ ದೌರ್ಬಲ್ಯವನ್ನು ತನ್ನ ಸ್ವಹಿತಾಸಕ್ತಿಗೆ ಬಳಸಿದ್ದು ಪೊಲೀಸ್ ನಡೆಯ ಉಲ್ಲಂಘನೆಯಾಗಿದೆ ಎಂದು ಕಾರಣ ನೀಡಿತ್ತು.

  ಇದನ್ನೂ ಓದಿ: Ajit Doval: ಎನ್​ಎಸ್​​ಎ ಅಜಿತ್ ದೋವಲ್ ಮನೆಗೆ ನುಗ್ಗಿದ ಬೆಂಗಳೂರು ಮೂಲದ ಅಪರಿಚಿತ ವ್ಯಕ್ತಿ

  ಅಷ್ಟೆ ಅಲ್ಲದೆ, ಇದರ ವಿಚಾರಣೆ ನಡೆಸಿದ್ದ ಪೊಲೀಸ್ ಸಮಿತಿಯು ಇದನ್ನು ಹಗುರವಾಗಿ ಪರಿಗಣಿಸಲಾಗದು ಮತ್ತು ಸಾರ್ವಜನಿಕರು ಇಟ್ಟಿರುವ ನಂಬಿಕೆಯಡಿಯಲ್ಲಿ ಇವರನ್ನು ಸೇವೆಯಲ್ಲಿ ಮುಂದುವರೆಸುವುದು ಸರಿಯಲ್ಲ ಎಂದು ಹೇಳಿತ್ತು.

  ಅದಾದ ಬಳಿಕ ವಜಾಗೊಂಡಿದ್ದ ಪೊಲೀಸ್ ಪೇದೆ ಈ ಆದೇಶವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲನ್ನು ಏರಿದ್ದರು. ಸುಮಾರು 9 ವರ್ಷಗಳ ಕಾಲ ಪೇದೆಯು ಈ ಪ್ರಕರಣವನ್ನು ಕೋರ್ಟ್‌ನಲ್ಲಿ ಹೋರಾಡಿದ್ದು ಇದೀಗ ಗುಜರಾತ್ ಹೈಕೋರ್ಟ್ ನೀಡಿರುವ ತೀರ್ಪು ಅವರು ನಿಟ್ಟುಸಿರು ಬಿಡುವಂತೆ ಮಾಡಿದೆ.
  Published by:Annappa Achari
  First published: