ಪ್ರತಿಭಟನೆ ಬಿಸಿ; ಟ್ರಾಫಿಕ್​ ದಂಡ ಇಳಿಕೆ ಮಾಡಲು ಸರ್ಕಾರ ನಿರ್ಧಾರ

ವಾಹನಗಳಿಗಿಂತ ದಂಡವೇ ದುಬಾರಿಯಾಗಿದ್ದು, ಇದು ವಾಹನ ಸವಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆಗಳು ನಡೆಯುತ್ತಿದ್ದು, ವಾಹನ ಸವಾರರ ಒತ್ತಾಯಕ್ಕೆ ಮಣಿದ​ ಸರ್ಕಾರ ಈ ದಂಡಗಳ ಇಳಿಕೆಗೆ ಮುಂದಾಗಿದೆ.

Seema.R | news18-kannada
Updated:September 10, 2019, 5:40 PM IST
ಪ್ರತಿಭಟನೆ ಬಿಸಿ; ಟ್ರಾಫಿಕ್​ ದಂಡ ಇಳಿಕೆ ಮಾಡಲು ಸರ್ಕಾರ ನಿರ್ಧಾರ
ಸಾಂದರ್ಭಿಕ ಚಿತ್ರ
  • Share this:
ಅಹಮದಾಬಾದ್​ (ಸೆ.10): ಮೋಟರ್​ ವಾಹನ ಕಾಯ್ದೆ ತಿದ್ದುಪಡಿ 2019ರ ಪ್ರಕಾರ ಜಾರಿಗೆ ಬಂದ  ಹೊಸ ಸಂಚಾರಿ ನಿಯಮದ ಅನುಸಾರದ ದಂಡದಿಂದಾಗಿ ವಾಹನಸವಾರರು  ರಸ್ತೆಗಿಳಿಯಲೇ ಹೆದರುತ್ತಿದ್ದಾರೆ.

ಸಂಚಾರಿ ನಿಯಮ ಪಾಲಿಸದ ಸವಾರರು ಭಾರೀ ದಂಡ ತೆರಬೇಕಾಗಿದ್ದು, ಈಗಾಗಲೇ ಪೊಲೀಸರ ದಂಡಕ್ಕೆ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ದೇಶದೆಲ್ಲೆಡೆ ಈ ನಿಯಮದಿಂದ ಜನರು ತತ್ತಿರಿಸಿದ್ದು, ವಾಹ ಸವಾರರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.

ವಾಹನಗಳಿಗಿಂತ ದಂಡವೇ ದುಬಾರಿಯಾಗಿದ್ದು, ಇದು ವಾಹನ ಸವಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆಗಳು ನಡೆಯುತ್ತಿದ್ದು, ವಾಹನ ಸವಾರರ ಒತ್ತಾಯಕ್ಕೆ ಮಣಿದ ಗುಜರಾತ್​ ಸರ್ಕಾರ ಈ ದಂಡಗಳ ಇಳಿಕೆಗೆ ಮುಂದಾಗಿದೆ.

ಸೆ. 16ರಿಂದ ಗುಜರಾತ್​ನಲ್ಲಿ ನೂತನ ನಿಯಮ ಜಾರಿಗೆ ಬರಲಿದ್ದು ದಂಡ ಇಳಿಕೆಯಾಗುವುದರಿಂದ ಜನರು ನಿಟ್ಟುಸಿರು ಬಿಡುವಂತೆ ಆಗಿದೆ.

ಇದನ್ನು ಓದಿ: ಪಕ್ಷದ ಆಂತರಿಕ ರಾಜಕೀಯಕ್ಕೆ ಬೇಸತ್ತು ಕಾಂಗ್ರೆಸ್​ ತೊರೆದ ನಟಿ ಉರ್ಮಿಳಾ ಮತೋಂಡ್ಕರ್​​​

ಈ ಹಿಂದೆ ಹೆಲ್ಮೆಟ್​ ರಹಿತ ಇದ್ದ 1000ರೂ ದಂಡವನ್ನು 500ರೂಗೆ ಇಳಿಸಲಾಗಿದೆ, ಸೀಟ್​ಬೆಲ್ಟ್​ ರಹತ ಪ್ರಯಾಣಕ್ಕೆ 500 ರೂ,  ಡಿಎಲ್​ ರಹಿತ ಪ್ರಯಾಣವನ್ನು 5 ಸಾವಿರದಿಂದ 5 ಸಾವಿರಕ್ಕೆ ಇಳಿಕೆ ಮಾಡಿ ನೂತನ ಆದೇಶ ಹೊರಡಿಸಲಾಗಿದೆ ಎಂದು ಗುಜರಾತ್​ ಸರ್ಕಾರ ತಿಳಿಸಿದೆ.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ