ವೇದಿಕೆ ಮೇಲೆ ಗುಜರಾತ್ ಯುವತಿಯರು ನಾಗರಹಾವು ಹಿಡಿದು ಗಾರ್ಬಾ ನೃತ್ಯ ಮಾಡಿದ ವಿಡಿಯೋ ವೈರಲ್!

ಘಟನೆ ಸಂಬಂಧ ಓರ್ವ ಬಾಲಕಿ, ಇಬ್ಬರು ಯುವತಿಯರು ಹಾಗೂ ಇಬ್ಬರು ಆಯೋಜಕರು ಸೇರಿದಂತೆ ಐವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಗುರುವಾರ ಬಾಲಕಿ ಸೇರಿದಂತೆ ಮೂವರು ಯುವತಿಯರು ಹಾಗೂ ಹಾವನ್ನು ಒದಗಿಸಿದ ಇಬ್ಬರು ಆಯೋಜಕರನ್ನು ಬಂಧಿಸಲಾಗಿದೆ.

news18-kannada
Updated:October 12, 2019, 8:12 PM IST
ವೇದಿಕೆ ಮೇಲೆ ಗುಜರಾತ್ ಯುವತಿಯರು ನಾಗರಹಾವು ಹಿಡಿದು ಗಾರ್ಬಾ ನೃತ್ಯ ಮಾಡಿದ ವಿಡಿಯೋ ವೈರಲ್!
ಹಾವನ್ನು ಹಿಡಿದು ನೃತ್ಯ ಮಾಡುತ್ತಿರುವ ಯುವತಿಯರು
  • Share this:
ನವದೆಹಲಿ: ಗುಜರಾತ್​ನ ಜುನಾಗರ್ ಜಿಲ್ಲೆಯ ಶಿಲ್ ಹಳ್ಳಿಯಲ್ಲಿ ಮಹಿಳೆಯರು ಹಾವುಗಳನ್ನು ಹಿಡಿದು ಗಾರ್ಬಾ ನೃತ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ 12 ವರ್ಷದ ಬಾಲಕಿ ಸೇರಿದಂತೆ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ವೇದಿಕೆಯ ಮೇಲೆ ಇದ್ದ ಮೂವರು ಯುವತಿಯರಲ್ಲಿ ಇಬ್ಬರು ತಮ್ಮ ಎರಡು ಕೈಗಳಲ್ಲಿ ವಿಷರಹಿತ ಹಾವುಗಳನ್ನು ಹಾವುಗಳನ್ನು  ಹಿಡಿದುಕೊಂಡಿದ್ದಾರೆ. ಮತ್ತೊಬ್ಬ ಯುವತಿ ಒಂದು ಕೈಯಲ್ಲಿ ಕತ್ತಿಯನ್ನು ಎತ್ತಿ ಹಿಡಿದು ಮತ್ತೊಂದು ಕೈಯಲ್ಲಿ ನಾಗರಹಾವಿನ ಬಾಲವನ್ನು ಹಿಡಿದಿದ್ದಾಳೆ. ಆ ಹಾವು ನೆಲದ ಮೇಲೆ ಹೆಡೆ ಎತ್ತಿ ತೆವಳುತ್ತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಓರ್ವ ಬಾಲಕಿ, ಇಬ್ಬರು ಯುವತಿಯರು ಹಾಗೂ ಇಬ್ಬರು ಆಯೋಜಕರು ಸೇರಿದಂತೆ ಐವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಗುರುವಾರ ಬಾಲಕಿ ಸೇರಿದಂತೆ ಮೂವರು ಯುವತಿಯರು ಹಾಗೂ ಹಾವನ್ನು ಒದಗಿಸಿದ ಇಬ್ಬರು ಆಯೋಜಕರನ್ನು ಬಂಧಿಸಲಾಗಿದೆ. ಐವರಿಗೂ ಸದ್ಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ಎಎನ್​ಐ ವರದಿ ಮಾಡಿದೆ.

ಇದನ್ನು ಓದಿ: ಕಾರು ನಿಲ್ಲಿಸಿ ತಾತನಿಗೆ ಹಣ ನೀಡಿದ ಸ್ಯಾಂಡಲ್​ವುಡ್ ಸ್ಟಾರ್ ನಟ: ಫೋಟೋ ವೈರಲ್

First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading