10ನೇ ತರಗತಿ ಫೇಲಾಗಿದ್ದ ಯುವಕ ಮಾಡಿದ ಸಾಧನೆ ಕೇಳಿದ್ರೆ ಶಾಕ್​ ಆಗ್ತೀರಾ..!

ಪ್ರಿನ್ಸ್​ ಒಟ್ಟು 35 ವಿಮಾನ ಮಾದರಿಗಳನ್ನು ತಯಾರಿಸಿದ್ದಾನೆ. ಎಲ್ಲಾ ವಿಮಾನಗಳು ಹಗುರವಾಗಿದ್ದು, ದೇಶೀಯ ನಿರ್ಮಿತವಾದವುಗಳಾಗಿವೆ. ರಿಮೋಟ್​ ಕಂಟ್ರೋಲ್​​ನಿಂದ ವಿಮಾನಗಳನ್ನು ಆಪರೇಟ್​ ಮಾಡಬಹುದಾಗಿದೆ.

Latha CG | news18-kannada
Updated:November 15, 2019, 11:15 AM IST
10ನೇ ತರಗತಿ ಫೇಲಾಗಿದ್ದ ಯುವಕ ಮಾಡಿದ ಸಾಧನೆ ಕೇಳಿದ್ರೆ ಶಾಕ್​ ಆಗ್ತೀರಾ..!
ವಿಮಾನ ಮಾದರಿ
  • Share this:
ಗುಜರಾತ್(ನ.14):​ ಎಸ್​ಎಸ್​ಎಲ್​ಸಿ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಹಾಗೂ ಮುಖ್ಯ ತಿರುವು ಕೂಡ ಹೌದು. ಉತ್ತಮ ಅಂಕ ಗಳಿಸಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎನ್ನುತ್ತಾರೆ ಹಿರಿಯರು. ಹೀಗಾಗಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳು ಓದಲಿ ಎಂದು ಹುರಿದುಂಬಿಸುತ್ತಾರೆ. 10ನೇ ತರಗತಿ ಮುಗಿದ ಬಳಿಕ ಅವರಿಗೆ ಆಸಕ್ತಿ ಇರುವ ವಿಷಯಗಳನ್ನು ಆಯ್ದುಕೊಂಡು ಓದು ಮುಂದುವರೆಸುತ್ತಾರೆ. ಇಂದು ಒಂದು ವರ್ಗದವರ ಮಾತಾದರೆ, ಮತ್ತೊಂದು ವರ್ಗದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಎಸ್​ಎಸ್​ಎಲ್​ಸಿಯಲ್ಲಿ ಜಸ್ಟ್​ ಪಾಸ್​ ಆಗಿ, ಇಲ್ಲವೋ ಫೇಲ್​ ಆಗಿ ಪೋಷಕರ ಆಕ್ರೋಶಕ್ಕೆ ಗುರಿಯಾಗಿರುತ್ತಾರೆ. ಇವರಿಗೆ ಓದು ಬಿಟ್ಟು ಮತ್ಯಾವುದೋ ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ತಮ್ಮೊಳಗಿರುವ ಸುಪ್ತ ಪ್ರತಿಭೆಯಿಂದ, ಕೌಶಲ್ಯದಿಂದ ಅಸಾಧಾರಣ ಸಾಧನೆ ಮಾಡುವವರೂ ಇರುತ್ತಾರೆ. ಈ ಸಾಲಿಗೆ ಗುಜರಾತ್​​ನ ಯುವಕ ಸೇರ್ಪಡೆಯಾಗುತ್ತಾನೆ.

ಹೌದು, ಗುಜರಾತ್​ ರಾಜ್ಯದ ವಡೋದರದ ಪ್ರಿನ್ಸ್​​ ಪಂಚಾಲ್​ ಎಂಬ ಯುವಕ ಮಾಡಿರುವ ಸಾಧನೆಗೆ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಆತ ಮಾಡಿದ ಸಾಧನೆ ಏನು ಅಂತೀರಾ..? ಮುಂದೆ ಓದಿ.

ಮಹಾರಾಷ್ಟ್ರ ಬಿಕ್ಕಟ್ಟು: ಸೇನೆ ಜತೆ ಸರ್ಕಾರ ರಚನೆ ಕುರಿತಂತೆ ನ.17ಕ್ಕೆ ಸೋನಿಯಾ-ಶರದ್ ಮಹತ್ವದ​​​ ಮಾತುಕತೆ

ಪ್ರಿನ್ಸ್​ 10ನೇ ತರಗತಿಯಲ್ಲಿ ಫೇಲಾಗಿದ್ದ. ಅದು ಒಂದಲ್ಲ, ಎರಡಲ್ಲ, 6 ವಿಷಯಗಳಲ್ಲೂ ಅನುತ್ತೀರ್ಣನಾಗಿದ್ದ. ಇದರಿಂದ ಮನೆಯವರ ಕೋಪಕ್ಕೂ ಗುರಿಯಾಗಿದ್ದ. ಫೇಲ್​ ಆದ ಬಳಿಕ ಮುಂದೆ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ, ಆತನ ತಲೆಗೆ ಬಂದಿದ್ದು ವಿಮಾನಗಳನ್ನು ತಯಾರಿಸುವ ಪ್ಲಾನ್​. ಅದಕ್ಕಾಗಿ ಪ್ರಿನ್ಸ್​ ಮೊದಲು ಇಂಟರ್​​ನೆಟ್​​ನಲ್ಲಿ ವಿಮಾನ ತಯಾರಿಸುವ ವಿಧಾನಗಳನ್ನು ನೋಡತೊಡಗಿದ. ಬಳಿಕ ವಿಮಾನ ತಯಾರಿಕೆಗೆ ಬೇಕಾದ ಎಲ್ಲಾ ಪರಿಕರಗಳನ್ನು ಸಂಗ್ರಹಿಸಿಕೊಂಡ. ಫ್ಲೆಕ್ಸ್​​, ಬ್ಯಾನರ್​​​ ಹಾಗೂ ಹೋರ್ಡಿಂಗ್ಸ್​​ಗಳನ್ನು ಬಳಸಿ, ಇಂಟರ್​ನೆಟ್​ ಸಹಾಯದಿಂದ ವಿಮಾನ ಮಾದರಿಗಳನ್ನು ತಯಾರಿಸಿದ.


ಪ್ರಿನ್ಸ್​ ಒಟ್ಟು 35 ವಿಮಾನ ಮಾದರಿಗಳನ್ನು ತಯಾರಿಸಿದ್ದಾನೆ. ಎಲ್ಲಾ ವಿಮಾನಗಳು ಹಗುರವಾಗಿದ್ದು, ದೇಶೀಯ ನಿರ್ಮಿತವಾದವುಗಳಾಗಿವೆ. ರಿಮೋಟ್​ ಕಂಟ್ರೋಲ್​​ನಿಂದ ವಿಮಾನಗಳನ್ನು ಆಪರೇಟ್​ ಮಾಡಬಹುದಾಗಿದೆ.

ಈ ಬಗ್ಗೆ ಮಾತನಾಡಿರುವ ಪ್ರಿನ್ಸ್​, "ನನಗೆ ನನ್ನ ಅಜ್ಜ ಸ್ಪೂರ್ತಿ. ನಾನು 10ನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಫೇಲಾಗಿದ್ದೆ. ಮನೆಯಲ್ಲಿ ಸೋಮಾರಿ ರೀತಿ ಕುಳಿತಿರುತ್ತಿದೆ. ಬಳಿಕ ವಿಮಾನ ತಯಾರಿಸುವ ಯೋಚನೆ ಮನಸಿಗೆ ಬಂತು. ಫ್ಲೆಕ್ಸ್​, ಬ್ಯಾನರ್​ ಹಾಗೂ ಹೋರ್ಡಿಂಗ್ಸ್​ ಬಳಸಿ ವಿಮಾನ ತಯಾರಿಸಿದೆ. ಇಂಟರ್​ನೆಟ್​ ಸಹಾಯದಿಂದ ವಿಮಾನ ಮಾದರಿಗಳನ್ನು ತಯಾರಿಸಿ, ಆ ವಿಡಿಯೋಗಳನ್ನು ಯೂಟ್ಯೂಬ್​​ನಲ್ಲಿ ಹರಿಯಬಿಟ್ಟೆ," ಎಂದು ಹೇಳಿದ್ದಾರೆ.

ಇವನಿಗೆ ಮನುಷ್ಯತ್ವ ಇದೆಯಾ?; ಕೆ.ಆರ್​.ಪೇಟೆಯಲ್ಲಿ ನಾರಾಯಣಗೌಡ ವಿರುದ್ಧ ಎಚ್​ಡಿಕೆ ವಾಗ್ದಾಳಿ

"ಎಲ್ಲಾ ವಿಮಾನ ಮಾದರಿಗಳ ಮೇಲೆ 'ಮೇಕ್​ ಇನ್ ಇಂಡಿಯಾ' ಎಂದು ಬರೆಯಲಾಗಿದೆ. ನಾನು ಮೊದಲು 10ನೇ ತರಗತಿ ಪರೀಕ್ಷೆ ಬರೆದು ಪಾಸಾಗಬೇಕು. ನಾನು ಓದಲು ಕುಳಿತರೆ ಮನಸು ಹಗುರವಾಗಿರುವುದಿಲ್ಲ. ಮನಸು ಭಾರ ಎನಿಸುತ್ತದೆ ಎಂದು ಪ್ರಿನ್ಸ್​ ಹೇಳುತ್ತಾರೆ.

First published:November 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ