Flood Viral Video: ಗುಜರಾತ್ ಪ್ರವಾಹದಲ್ಲಿ ಇಬ್ಬರು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಸಾಗಿದ ಪೊಲೀಸ್ ಕಾನ್​​ಸ್ಟೆಬಲ್!

Gujarat Flood: ಗುಜರಾತ್​ನ ಮೊರ್ಬಿ ಜಿಲ್ಲೆಯ ಕಲ್ಯಾಣಪುರದಲ್ಲಿ ಸತತ 5 ಗಂಟೆಗಳ ಕಾಲ ಒಂದೇ ಸಮನೆ ಸುರಿದ ಮಳೆಯಿಂದ ಶಾಲೆಗೆ ಹೋಗಿದ್ದ 43 ವಿದ್ಯಾರ್ಥಿಗಳು ಪ್ರವಾಹದಲ್ಲಿ ಸಿಲುಕಿದ್ದರು. ಶಾಲೆಯ ಸುತ್ತ ನೀರು ಆವರಿಸುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯವರು ಮಕ್ಕಳನ್ನು ರಕ್ಷಿಸುವಂತೆ ಪೊಲೀಸ್​ ಸ್ಟೇಷನ್​ಗೆ ಕರೆ ಮಾಡಿದರು. ಆಗ ಅಲ್ಲಿಗೆ ಬಂದ ಪೊಲೀಸರ ತಂಡದಲ್ಲಿ ಪೃಥ್ವಿರಾಜ್ ಸಿನ್ಹ ಜಡೇಜಾ ಕೂಡ ಇದ್ದರು.

Sushma Chakre | news18
Updated:August 12, 2019, 9:49 AM IST
Flood Viral Video: ಗುಜರಾತ್ ಪ್ರವಾಹದಲ್ಲಿ ಇಬ್ಬರು ಮಕ್ಕಳನ್ನು ಹೆಗಲ ಮೇಲೆ  ಹೊತ್ತು ಸಾಗಿದ ಪೊಲೀಸ್ ಕಾನ್​​ಸ್ಟೆಬಲ್!
ಪ್ತವಾಹದಲ್ಲಿ ಮಕ್ಕಳನ್ನು ಹೊತ್ತು ಸಾಗಿದ ಗುಜರಾತ್ ಪೊಲೀಸ್
  • News18
  • Last Updated: August 12, 2019, 9:49 AM IST
  • Share this:
ಅಹಮದಾಬಾದ್​ (ಆ. 12): ಭೀಕರ ಪ್ರವಾಹಕ್ಕೆ ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರತಾ್​ ರಾಜ್ಯಗಳು ನಲುಗಿಹೋಗಿವೆ. ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ಬದುಕು ನಡೆಸುತ್ತಿದ್ದವರ ಜೀವನ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ. ಶಾಂತವಾಗಿ ಹರಿಯುತ್ತಿದ್ದ ನದಿಗಳು ಉಗ್ರರೂಪ ತಾಳಿ ಮನಬಂದಲ್ಲಿ ಹರಿದು ತನ್ನ ಮೇಲಾದ ದೌರ್ಜನ್ಯಕ್ಕೆ ಸೇಡು ತೀರಿಸಿಕೊಳ್ಳುತ್ತಿದೆ. ತಾನೇ ಮಾಡಿಕೊಂಡ ತಪ್ಪಿಗೆ ಮನುಷ್ಯ ಪಶ್ಚಾತ್ತಾಪ ಪಡುವಂತಹ ಸ್ಥಿತಿ ಎದುರಾಗಿದೆ. ಇದೆಲ್ಲದರ ನಡುವೆ ಎನ್​ಡಿಆರ್​ಎಫ್​, ಭಾರತೀಯ ಸೇನೆ, ವಾಯುಸೇನೆ, ನೌಕಾಸೇನೆ, ಪೊಲೀಸ್​ ಸಿಬ್ಬಂದಿ ಸದ್ದಿಲ್ಲದೆ ಲಕ್ಷಾಂತರ ಜನರ ಜೀವವನ್ನು ಕಾಪಾಡುವಲ್ಲಿ ಮಗ್ನರಾಗಿದ್ದಾರೆ. 

ಕಾಯುವ ಕೈಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆ ಮಾಡುತ್ತಿವೆ. ಕಳೆದ ಬಾರಿ ಕೇರಳ, ಕೊಡಗಿನಲ್ಲಿ ಪ್ರವಾಹ ಉಂಟಾದಾಗಲೂ ರಕ್ಷಣಾ ಸಿಬ್ಬಂದಿಯ ಮಾನವೀಯತೆ, ಧೈರ್ಯ ಅನಾವರಣಗೊಂಡಿತ್ತು. ಪ್ರವಾಹಪೀಡಿತರನ್ನು ಸೇನಾ ಸಿಬ್ಬಂದಿ, ಎನ್​ಡಿಆರ್​ಎಫ್​ನವರು ರಕ್ಷಿಸುತ್ತಿರುವ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಈ ಬಾರಿಯೂ ಅಂತಹ ಮನಕಲಕುವ ದೃಶ್ಯಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೆಚ್ಚೆದೆಯ ರಕ್ಷಕರಿಗೆ ಜನರು ಸಲಾಂ ಹೇಳುತ್ತಿದ್ದಾರೆ.

 LIVE: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಾಮಳೆಗೆ ಒಟ್ಟು 7 ಬಲಿ; ಇನ್ನೂ 50ಕ್ಕೂ ಹೆಚ್ಚು ಜನರ ಸ್ಥಿತಿ ಅತಂತ್ರ

ನಿನ್ನೆಯಿಂದ ಫೇಸ್​ಬುಕ್, ಟ್ವಿಟ್ಟರ್​, ಇನ್​ಸ್ಟಾಗ್ರಾಂ, ವಾಟ್ಸಾಪ್​ನಲ್ಲಿ ಗುಜರಾತ್​ನ ವಡೋದರದ ಪ್ರವಾಹದಿಂದ ಇಬ್ಬರು ಮಕ್ಕಳನ್ನು ರಕ್ಷಿಸಿದ ಪೊಲೀಸ್ ಪೇದೆಯೊಬ್ಬರ ವಿಡಿಯೋ ಹರಿದಾಡುತ್ತಿದೆ. ಉಕ್ಕಿ ಹರಿಯುವ ಪ್ರವಾಹದಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ದಡ ಸೇರಿಸಿದ ಗುಜರಾತ್​ ಪೊಲೀಸ್​ ಕಾನ್​ಸ್ಟೆಬಲ್ ಪೃಥ್ವಿರಾಜ್ ಸಿನ್ಹ ಜಡೇಜಾ ಅವರ ವಿಡಿಯೋ ವೈರಲ್ ಆಗಿದೆ.

ಗುಜರಾತ್​ನ  ಮೊರ್ಬಿ ಜಿಲ್ಲೆಯ ಕಲ್ಯಾಣಪುರ ಗ್ರಾಮದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು,  ಇದರಿಂದ ಭಯಗೊಂಡಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಹೆಗಲ ಮೇಲೆ ಹೊತ್ತ ಗುಜರಾತ್ ಪೊಲೀಸ್ ಕಾನ್​ಸ್ಟೆಬಲ್  ಪೃಥ್ವಿರಾಜ್ ಸಿನ್ಹ್ ಜಡೇಜಾ ಸುಮಾರು ಒಂದೂವರೆ ಕಿ.ಮೀ. ದೂರ ಪ್ರವಾಹದಲ್ಲೇ ನಡೆದು ಅವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.

ದೇವರ ಪಾದಕ್ಕೆ ಬಂದ ವಸ್ತುಗಳೆಲ್ಲ ಪ್ರವಾಹ ಸಂತ್ರಸ್ತರಿಗೆ; ದೇವಾಲಯಗಳಿಗೆ ಸರ್ಕಾರದಿಂದ ಹೊಸ ಆದೇಶ

ಪೃಥ್ವಿರಾಜ್ ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಸಮುದ್ರದ ರೀತಿ ಉಕ್ಕಿ ಬರುತ್ತಿದ್ದ ಪ್ರವಾಹದಲ್ಲಿ ಇಬ್ಬರನ್ನು ಹೊತ್ತು ಸಾಗಿದ ಅವರ ಧೈರ್ಯಕ್ಕೆ ಜನರು ಶಹಬ್ಭಾಸ್​ ಎನ್ನುತ್ತಿದ್ದಾರೆ. ಗುಜರಾತ್​ ಮುಖ್ಯಮಂತ್ರಿ ವಿಜಯ್ ರೂಪಾನಿ ಈ ವಿಡಿಯೋವನ್ನು ಪೋಸ್ಟ್​ ಮಾಡಿ, 'ಯೂನಿಫಾರಂನಲ್ಲಿರುವ ಪೊಲೀಸ್​ ಕಾನ್​ಸ್ಟೆಬಲ್ ಪೃಥ್ವಿರಾಜ್​ ಸಿನ್ಹ ಜಡೇಜಾ ಕಠಿಣ ಪರಿಶ್ರಮ, ಏಕಾಗ್ರತೆ, ತಾಳ್ಮೆಗೆ ಉದಾಹರಣೆಯಾಗಿದ್ದಾರೆ. ಅವರ ಬದ್ಧತೆಯನ್ನು ಗೌರವಿಸೋಣ' ಎಂದು ಟ್ವೀಟ್​ ಮಾಡಿದ್ದಾರೆ.


ಎರಡು ದಿನಗಳಲ್ಲಿ ರಾಜ್ಯ ಸಹಜ ಸ್ಥಿತಿಗೆ, ಇಂದು ಯಲ್ಲೋ ಅಲರ್ಟ್​ ಜಾರಿ; ಸಿಎಂಗೆ ಮುಖ್ಯ ಕಾರ್ಯದರ್ಶಿ ಮಾಹಿತಿ

ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್, 'ನಿಜ ಜೀವನದ ಬಾಹುಬಲಿ ಪೃಥ್ವಿರಾಜ್ ಅವರಿಗೆ ಧನ್ಯವಾದ.  ಪೊಲೀಸ್​ ಕಾನ್​ಸ್ಟೆಬಲ್ ಪೃಥ್ವಿರಾಜ್ ಜಡೇಜಾ ದೊಡ್ಡ ಸ್ಫೂರ್ತಿ ಮತ್ತು ನಿಜವಾದ ಹೀರೋ. ನೀವು ನಮ್ಮೆಲ್ಲರ ಮನಸನ್ನೂ ಗೆದ್ದಿದ್ದೀರಿ. ಗುಜರಾತ್​ನ ಪ್ರವಾಹದಲ್ಲಿ ರಕ್ಷಣೆಗೆ ನಿಂತಿರುವ ಎಲ್ಲ ಪೊಲೀಸರಿಗೂ ಇನ್ನಷ್ಟು ಶಕ್ತಿ ಸಿಗಲಿ, ನೀವೂ ಸುರಕ್ಷಿತವಾಗಿ ವಾಪಾಸ್​ ಬನ್ನಿ' ಎಂದು ಟ್ವೀಟ್ ಮಾಡಿದ್ದಾರೆ.ಗುಜರಾತ್​ನ ಮೊರ್ಬಿ ಜಿಲ್ಲೆಯ ಕಲ್ಯಾಣಪುರದಲ್ಲಿ ಸತತ 5 ಗಂಟೆಗಳ ಕಾಲ ಒಂದೇ ಸಮನೆ ಸುರಿದ ಮಳೆಯಿಂದ ಶಾಲೆಗೆ ಹೋಗಿದ್ದ 43 ವಿದ್ಯಾರ್ಥಿಗಳು ಪ್ರವಾಹದಲ್ಲಿ ಸಿಲುಕಿದ್ದರು. ಶಾಲೆಯ ಸುತ್ತ ನೀರು ಆವರಿಸುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯವರು ಮಕ್ಕಳನ್ನು ರಕ್ಷಿಸುವಂತೆ ಪೊಲೀಸ್​ ಸ್ಟೇಷನ್​ಗೆ ಕರೆ ಮಾಡಿದರು. ಆಗ ಅಲ್ಲಿಗೆ ಬಂದ ಪೊಲೀಸರ ತಂಡದಲ್ಲಿ ಪೃಥ್ವಿರಾಜ್ ಸಿನ್ಹ ಜಡೇಜಾ ಕೂಡ ಇದ್ದರು. ನೀರಿನ ವೇಗ ಹೆಚ್ಚಿದ್ದರಿಂದ ಬೋಟ್​ನಲ್ಲಿ ಮಕ್ಕಳನ್ನು ಆಚೆ ದಡಕ್ಕೆ ತಲುಪಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ, ಮಕ್ಕಳ ಕೈಹಿಡಿದು ಪ್ರವಾಹ ದಾಟಿಸಲು ಸಾಲಾಗಿ ನಿಲ್ಲಿಸಲಾಗಿತ್ತು. ಆದರೆ, ಈ ವೇಳೆ ಇಬ್ಬರು ಮಕ್ಕಳು ಭಯದಿಂದ ನೀರಿಗೆ ಇಳಿಯಲು ಹಿಂದೇಟು ಹಾಕಿದ್ದರಿಂದ ಪೃಥ್ವಿರಾಜ್ ಅವರನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. 'ನಿಮ್ಮ ಸುರಕ್ಷತೆಗಾಗಿ ನಮ್ಮ ಹೆಗಲು' ಎಂಬ ಅಡಿಬರಹದೊಂದಿಗೆ ಗುಜರಾತ್​ ಅಡಿಷನಲ್ ಡಿಜಿಪಿ ಶಂಶೇರ್​ ಸಿಂಗ್ ಟ್ವೀಟ್ ಮಾಡಿದ್ದರು.

 
First published: August 12, 2019, 9:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading