World Dairy Summit: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಭಾರತದ 'ಬನ್ನಿ': ಈ ಎಮ್ಮೆ ಬಗ್ಗೆ ಉಲ್ಲೇಖಿಸಿದ್ದೇಕೆ ಪಿಎಂ ಮೋದಿ?

World Dairy Summit: ಸುಮಾರು 48 ವರ್ಷಗಳ ನಂತರ ವಿಶ್ವ ಡೈರಿ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಹಲವು ವಿಚಾರಗಳಿಂದ ವಿಶೇಷವಾಗಿರುವ ಈ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಗುಜರಾತ್​ನ 'ಬನ್ನಿ' ಎಮ್ಮೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದಾದ ನಂತರ ಈ ಜಾತಿಯ ಎಮ್ಮೆಗಳ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಪಡೆಯುವ ಕುತೂಹಲ ಎಲ್ಲರ ಮನದಲ್ಲೂ ಹುಟ್ಟಿಕೊಂಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಭಾರತದ 'ಬನ್ನಿ'

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಭಾರತದ 'ಬನ್ನಿ'

  • Share this:
ಚಷಅಹಮದಾಬಾದ್(ಸೆ.12): ಸುಮಾರು ಅರ್ಧ ಶತಮಾನದ ನಂತರ ಭಾರತದಲ್ಲಿ ವಿಶ್ವ ಡೈರಿ ಶೃಂಗಸಭೆಯನ್ನು (World Dairy Summit) ಆಯೋಜಿಸಲಾಗುತ್ತಿದೆ. 4 ದಿನಗಳ ಈ ಸಮ್ಮೇಳನದಲ್ಲಿ ದೇಶ-ವಿದೇಶಗಳ ಖ್ಯಾತ ತಜ್ಞರು ರೈತರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ರೈತ ಬಂಧುಗಳಿಗೆ ಸಲಹೆ ಸೂಚನೆಗಳನ್ನು ನೀಡಲಿದ್ದು, ಇದರಿಂದ ಹಾಲಿನ ವ್ಯಾಪಾರದಿಂದ ಗರಿಷ್ಠ ಆದಾಯ ಗಳಿಸಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಗ್ರೇಟರ್ ನೋಯ್ಡಾದಲ್ಲಿ (Greater Noida) ವಿಶ್ವ ಡೈರಿ ಶೃಂಗಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗುಜರಾತ್​ನ (Gujarat) ಕಚ್ ಪ್ರದೇಶದಲ್ಲಿ ಕಂಡು ಬಂದ ಬನ್ನಿ ಎಮ್ಮೆ ಬಗ್ಗೆ ಪ್ರಸ್ತಾಪಿಸಿದರು. ಸ್ಥಳೀಯ ಪ್ರಾಣಿಗಳ ಜಾತಿಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ (Prime Minister Narendfra Modi), ವಿದೇಶಿ ಅತಿಥಿಗಳಿಗೆ ವಿಶೇಷವಾಗಿ ಬನ್ನಿ ಎಮ್ಮೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದರು. ಬನ್ನಿ ಎಮ್ಮೆಯ ವಿಶೇಷತೆ ಏನು? ಮೋದಿ ಈ ಬಗ್ಗೆ ಏಕೆ ಉಲ್ಲೇಖಿಸಿದರು ಎಂಬ ಪ್ರಶ್ನೆ ಈಗ ಹಲವರಲ್ಲಿ ಉದ್ಭವಿಸಿದೆ. ಇಲ್ಲಿದೆ ನೋಡಿ ವಿವರ.

ಇದನ್ನೂ ಓದಿ: Buffalo: ಕಿತ್ತೋದ ಬಸ್ ನಿಲ್ದಾಣದ ಅದ್ಧೂರಿ ಉದ್ಘಾಟನೆ; ಚೀಫ್ ಗೆಸ್ಟ್ ಆಗಿ ಬಂದಿದ್ದು ಎಂಎಲ್ಎ ಅಲ್ಲ, ಎಮ್ಮೆ!

ಬನ್ನಿ ಎಮ್ಮೆಯನ್ನು ಉಲ್ಲೇಖಿಸಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಅದರ ವಿಶೇಷತೆಯನ್ನು ಹೇಳಿದ್ದಾರೆ. ವಿಶ್ವ ಡೈರಿ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬನ್ನಿ ಎಮ್ಮೆ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಬದುಕಬಲ್ಲದು ಎಂದು ಹೇಳಿದ್ದಾರೆ. ಬನ್ನಿ ಎಮ್ಮೆಗಳು ಕಚ್ ಮರುಭೂಮಿ ಮತ್ತು ಅಲ್ಲಿನ ಪರಿಸ್ಥಿತಿಗಳೊಂದಿಗೆ ಬೆರೆತುಕೊಂಡಿದ್ದು, ಕೆಲವೊಮ್ಮೆ ಅವುಗಳನ್ನು ನೋಡಿದಾಗ ಆಶ್ಚರ್ಯವಾಗುತ್ತದೆ ಎಂದು ಹೇಳಿದರು. ಕಚ್‌ನ ಪ್ರದೇಶಗಳಲ್ಲಿ ಹಗಲಿನಲ್ಲಿ ತೀವ್ರವಾದ ಸೂರ್ಯನ ಬೆಳಕು ಇರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದರಿಂದ ತಾಪಮಾನ ಹೆಚ್ಚಿರುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಬನ್ನಿ ಎಮ್ಮೆ ರಾತ್ರಿಯ ಕಡಿಮೆ ತಾಪಮಾನದಲ್ಲಿ ಮೇಯಲು ಹೊರಬರುತ್ತದೆ. ಆ ವೇಳೆ ದನ ಕಾಯುವವರು ಜೊತೆಗಿರುವುದಿಲ್ಲ. ಹೀಗಿದ್ದರೂ ಈ ಎಮ್ಮೆಗಳು ಹಳ್ಳಿಗಳ ಸಮೀಪವಿರುವ ಹುಲ್ಲುಗಾವಲುಗಳಿಗೆ ತಾವೇ ಹೋಗುತ್ತವೆ. ಬನ್ನಿ ಎಮ್ಮೆಯ ವಿಶೇಷತೆಯನ್ನು ಎಣಿಸಿದ ಪ್ರಧಾನಿ ಮೋದಿ, ಮರುಭೂಮಿ ಪ್ರದೇಶಗಳಲ್ಲಿ ನೀರು ವಿರಳ, ಹೀಗಿರುವಾಗ ಈ ಜಾತಿಯ ಎಮ್ಮೆಗಳಿಗೆ ಕಡಿಮೆ ನೀರಿನ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿಯೂ ಈ ಬನ್ನಿ ಎಮ್ಮೆಗಳು ವಿಶಧೇಷವಾಗಿವೆ ಎಂದಿದ್ದಾರೆ.

ಮೇಯಲು 10-15 ಕಿ.ಮೀ ದೂರ ಹೋಗುತ್ತದೆ

ಬನ್ನಿ ಎಮ್ಮೆ ಮೇಯಲು ರಾತ್ರಿ 10 ರಿಂದ 15 ಕಿಲೋಮೀಟರ್ ದೂರ ಹೋಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಹುಲ್ಲು ಮೇಯಿಸಿದ ನಂತರ ಈ ಎಮ್ಮೆ ತನ್ನ ಮನೆಗೆ ಮರಳುತ್ತದೆ. ರೈತರು ಅವುಗಳನ್ನು ಕರೆತರಲು ಹೋಗುವುದಿಲ್ಲ. ಹೀಗಿದ್ದರೂ ಬನ್ನಿ ಎಮ್ಮೆ ಕಳೆದು ಹೋಗುವುದು ಅಪರೂಪ ಎಂದಿದ್ದಾರೆ. ಪ್ರಧಾನಿ ಮೋದಿ ವಿಶೇಷ ಸಂದರ್ಭದಲ್ಲಿ ಬನ್ನಿ ಎಮ್ಮೆಯ ಬಗ್ಗೆ ಪ್ರಸ್ತಾಪಿಸಿದ್ದರು. ವಾಸ್ತವವಾಗಿ, ಅವರು ಭಾರತದಲ್ಲಿ ಕಂಡುಬರುವ ಸ್ಥಳೀಯ ಜಾನುವಾರುಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೀಗಿರುವಾಗ ಅವರು ಬನ್ನಿ ಜಾತಿಯ ಎಮ್ಮೆಗಳ ಗುಣಲಕ್ಷಣಗಳನ್ನು ಹೇಳಿದರು.

2021 ರಲ್ಲಿ ಐವಿಎಫ್ ತಂತ್ರಜ್ಞಾನದೊಂದಿಗೆ ಎಮ್ಮೆ ಮರಿ ಜನನ

ಗುಜರಾತಿನ ಕಚ್ ಪ್ರದೇಶದ ಪ್ರಮುಖ ಜಾತಿಯ ಎಮ್ಮೆ 'ಬನ್ನಿ'ಯೊಂದು ಇಲ್ಲಿನ ಗಿರ್ ಸೋಮನಾಥ್ ಜಿಲ್ಲೆಯ ರೈತರೊಬ್ಬರ ಮನೆಯಲ್ಲಿ ಐವಿಎಫ್ ತಂತ್ರದ ಮೂಲಕ ಜನಿಸಿದೆ. ಆನುವಂಶಿಕವಾಗಿ ಉತ್ತಮವಾದ ಎಮ್ಮೆಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಾಲು ಉತ್ಪಾದನೆಯೂ ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ಐವಿಎಫ್​ ತಂತ್ರದ ಮೂಲಕ ಎಮ್ಮೆ ಕರುಗಳಿಗೆ ಜನ್ಮ ನೀಡಲಾಗಿದೆ ಎಂದು ಅಧಿಕಾರಿ ಹೇಳಿದರು. ಬನ್ನಿ ಎಮ್ಮೆಗಳು ಶುಷ್ಕ ವಾತಾವರಣದಲ್ಲಿಯೂ ಹೆಚ್ಚು ಹಾಲು ಉತ್ಪಾದಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ: Sirsi Marikamba Temple Buffalo: ಮಾರಿಕಾಂಬೆಯ ಪಟ್ಟದ ಕೋಣ! ಇದು ಬಾಹುಬಲಿಗಿಂತ ಅಜಾನುಬಾಹು!

ಈ ಎಮ್ಮೆ ತುಂಬಾ ದುಬಾರಿಯಾಗಿದೆ

ಬನ್ನಿ ಗ್ರಾಸ್ ಲ್ಯಾಂಡ್ ಪ್ರಾಣಿಗಳ ಆಹಾರಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಬನ್ನಿ ಎಮ್ಮೆ ತಳಿಯ ಎಮ್ಮೆಯನ್ನು ಎಲ್ಲಾ ಹಾಲು ಉತ್ಪಾದಕರು ಖರೀದಿಸಲು ಬಯಸುತ್ತಾರೆ. ಬನ್ನಿ ಎಮ್ಮೆಯ ಬೆಲೆ 1 ಲಕ್ಷದಿಂದ 3 ಲಕ್ಷದವರೆಗೆ ಇರುತ್ತದೆ. ಈ ಎಮ್ಮೆಯ ವಿಶೇಷತೆ ಏನೆಂದರೆ, ಈ ಜಾತಿಯ ಎಮ್ಮೆ ಹೆಚ್ಚು ಚಳಿಗಾಲ ಮತ್ತು ಹೆಚ್ಚು ಶಾಖ ಎರಡನ್ನೂ ಸಹಿಸಿಕೊಳ್ಳಬಲ್ಲದು.
Published by:Precilla Olivia Dias
First published: